30
July, 2025

A News 365Times Venture

30
Wednesday
July, 2025

A News 365Times Venture

ಅಧೋಗತಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ: ಇದೊಂದು ಹುಚ್ಚು, ಮೂರ್ಖತನದ ಸರ್ಕಾರ-ಹೆಚ್.ವಿಶ್ವನಾಥ್

Date:

ಮೈಸೂರು,ಏಪ್ರಿಲ್,2,2025 (www.justkannada.in):  ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಇದೊಂದು ಹುಚ್ಚು, ಮೂರ್ಖತನದ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಫ್ರೀ ಬೀಸ್ ನಿಂದ ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ತಲುಪಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದೋಗತಿಗೆ ತಲುಪಿದೆ. 16 ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ  ತಮ್ಮ ವೈಯಕ್ತಿಕ ಚಪಲ ಗ್ಯಾರಂಟಿಗಳಿಂದ ಸರ್ಕಾರ ಅಧೋಗತಿ ತಲುಪಿದೆ. ಉಚಿತ ಗ್ಯಾರಂಟಿಗಳಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಗಂಡ ಹೆಂಡತಿಯರ ನಡುವೆ ಒಡಕು ಉಂಟಾಗಿದೆ. ಅವರವರಲ್ಲೇ ಗಲಾಟೆ ತಂದಿಟ್ಟಿದ್ದಾರೆ. ಬೇಕಾದರೆ ಒಂದು ಸರ್ವೆ ಮಾಡಿಸಿ,ಇದಕೊಂದು ಮಾನ ದಂಡ ಬೇಡವಾ.? ವೃದ್ಧಾಪ್ಯ ವೇತನಕ್ಕೂ ಒಂದು ಮಾನ ದಂಡ ಇದೆ. ಫ್ರೀ ಬೀಸ್ ಗೆ ಕೆಲವು ಮಾನದಂಡ ಬೇಡವಾ.? ಸಾಲ ಮಾಡಿ ಉಚಿತ ಕೊಡುವ ಅಗತ್ಯ ಇದೆಯಾ.? ಒಂದು ಮಾನದಂಡದ ಆಡಿಯಲ್ಲಿ ಕೊಡಿ. ಇದೊಂದು ಹುಚ್ವು ಸರ್ಕಾರ, ಯಾವುದೇ ಮಾನದಂಡವಿಲ್ಲದೆ ಎಲ್ಲರಿಗೂ ಕೊಡ್ತೇವೆ ಎನ್ನೋದು ಮೂರ್ಖತನದ ಸರ್ಕಾರ. ಇಲ್ಲಿವರೆಗೆ 76 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದರೆ ಆ ಹಣ ಎಷ್ಟು ಯೋಜನೆಗಳ ಮಾಡಬಹುದಿತ್ತು. 76 ಸಾವಿರ ಕೋಟಿ ಖರ್ಚು ಮಾಡಿದ್ರ ಫಲ ಏನು.? ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ಅಧೋಗತಿಗೆ ತಲುಪಿದೆ. ಆರ್ಥಿಕ ಶಿಸ್ತು ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದರು.

ದುಡಿಯುವ ಕೈಗೆ ಕೆಲಸ ಕೊಡಿ.

2013 ರಲ್ಲಿ ಜನಪರ ಕಾರ್ಯಕ್ರಮಗಳ ಅಂಶಗಳ ಪಟ್ಟಿ ತಯಾರಿಸಿದ್ದೇ ನಾವು. ಆರು ಪ್ರೋಗ್ರಾಂ ನಾವು ಕೊಟ್ಟಿದ್ದು  ನಾನು ,ರಮೇಶ್ ಕುಮಾರ್, ಇಬ್ರಾಹಿಂ. ಅನ್ನಭಾಗ್ಯ ಕಲ್ಪನೆ‌ ನಾವು ಕೊಟ್ಟಿದ್ದು ಸಿದ್ದರಾಮಯ್ಯನ ತಲೆಯಲ್ಲಿ ಇರಲಿಲ್ಲ. ಆಗ ಉತ್ತಮ ಜನಪರ ಆಡಳಿತ ಕೊಟ್ಟರು. ಈಗ ಸಿಎಂ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ದುಡಿಯುವ ಕೈಗೆ ಕೆಲಸ ಕೊಡಿ ಎಂದು ಆಗ್ರಹಿಸಿದರು.

ಎರಡೂ ಪಕ್ಷಗಳೂ ದಿವಾಳಿಯಾಗಿವೆ.

ಸದನದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಲೆ ಇಲ್ಲದಂತಾಗಿದೆ. ವ್ಹೀಲ್ ಚೇರನಲ್ಲಿ ಕೂತು ಆಡಳಿತ ನಡೆಸಲಿಕ್ಕೆ ಆಗಲ್ಲ. ಸದನದ ನಡೆದ ಘಟನೆ ನಾಚಿಕೆಗೇಡು. ಮಾನ ಮರ್ಯಾದೆ ಇರುವವರು ಸದನದಲ್ಲಿ ಇರೋಕಾಗುತ್ತಾ. ಮಧುಬಲೆಯಲ್ಲಿ 48 ಜನ ಇದ್ದಾರೆ ಎಂದು ಕಾಂಗ್ರೆಸ್ ನವರೇ ಹೇಳಿದ್ದಾರೆ. ಅದನ್ನ ಯಾರು ಅಂತ ಹೊರ ತಗೆಯುವ ಕೆಲಸ ವಿಪಕ್ಷದವರೂ ಮಾಡಲಿಲ್ಲ. ಎರಡೂ ಪಕ್ಷಗಳೂ ದಿವಾಳಿಯಾಗಿವೆ ಎಂದು ಸದನದ ಕಲಾಪ ವಿಚಾರದ ಬಗ್ಗೆ ಎರಡೂ ಪಕ್ಷಗಳ ವಿರುದ್ಧ ವಿಶ್ವನಾಥ್ ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆ ಕರೆ ತರದಿದ್ದರೆ ಹೇಗೆ  ನೀವು ಸಿಎಂ ಆಗುತ್ತಿದ್ದರಿ.?

ವಿಶ್ವನಾಥ್ ರಾಜಕೀಯದಲ್ಲಿ ನನಗಿಂತ ಹಿರಿಯರು. ನಾನು ಎಂಎಲ್ಎ ಆಗೋಕಿಂತ ಮುಂಚಿತವಾಗಿ ಆದರು. ಆದರೆ ನಾನು ಸಿಎಂ ಆದೇ ನೀವು ಆಗಲಿಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಕಿಚಾಯಿಸಿದ್ದರು.  ಇಂದು ಈ ವಿಚಾರ ಪ್ರಸ್ತಪಾ ಮಾಡಿದ ಎಂಎಲ್ಸಿ ವಿಶ್ವನಾಥ್. ಹೌದಪ್ಪ ನಾನು ನೀನು ಒಟ್ಟಿಗೆ ಓದಿದ್ದವು. ಒಟ್ಟಿಗೆ ವಕೀಲ ವೃತ್ತಿ ಆರಂಭಿಸಿದ್ದವು. ನಾನು ಮೊದಲು ಎಂಎಲ್ಎ ಆದೆ. ನಿನ್ನನ್ನ ಕಾಂಗ್ರೆಸ್ ಗೆ ಕರೆದಂದದ್ದು ನಾನು. ಕಾಂಗ್ರೆಸ್ ಗೆ ಕರೆ ತರದಿದ್ದರೆ ಹೇಗೆ ಸಿಎಂ ಆಗ್ತಿದ್ರಿ.? ಎಂದು ತಿರುಗೇಟು ನೀಡಿದರು.

ನಮ್ಮ‌ ಬಿಜೆಪಿಗೆ ಆಡಳಿತವೂ ಗೊತ್ತಿಲ್ಲ. ವಿರೋಧ ಪಕ್ಷ ಸ್ಥಾನ ನಿಭಾಯಿಸೋದು ಗೊತ್ತಿಲ್ಲ. ಕೇಳೊ ತಾಕತ್ತೇ ಇಲ್ಲ ಇವರಿಗೆ. ಬಿಜೆಪಿ ಕಾಂಗ್ರೆಸ್ ಹೊಂದಾಣಿಕೆ ಹೆಚ್ಚಾಗಿದೆ ಅದರಿಂದ ತಾನೇ ವಿಜಯೇಂದ್ರ ಗೆದ್ದಿದ್ದು ಎಂದು ಎಂಎಲ್ ಸಿ ವಿಶ್ವನಾಥ್ ಹೇಳಿದರು.

Key words: state,  economic situation, deteriorating, H. Vishwanath

The post ಅಧೋಗತಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ: ಇದೊಂದು ಹುಚ್ಚು, ಮೂರ್ಖತನದ ಸರ್ಕಾರ-ಹೆಚ್.ವಿಶ್ವನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂ ಸಿದ್ದರಾಮಯ್ಯಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ- ಸಚಿವ ದಿನೇಶ್ ಗುಂಡೂರಾವ್‍

ಕಾರವಾರ,ಜುಲೈ,30,2025 (www.justkannada.in): ಸಿಎಂ ಸಿದ್ದರಾಮಯ್ಯಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ...

ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ: ಯಾವುದೇ ಸಾಕ್ಷಿ ನೀಡಿಲ್ಲ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಜುಲೈ,30,2025 (www.justkannada.in):  ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿಪಕ್ಷದವರು ಆರೋಪ...

ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಣೆ: ಖುದ್ದು ಫೀ‍ಲ್ಡ್ ಗಿಳಿದು ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್

ಮೈಸೂರು,ಜುಲೈ,30,2025 (www.justkannada.in):  ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು...

ರಾಜ್ಯದಲ್ಲಿ ರಸಗೊಬ್ಬರ ಕೊರತೆ: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಡಾ.ಕೆ. ಸುಧಾಕರ್

ನವದೆಹಲಿ,ಜುಲೈ,30,2025 (www.justkannada.in): ರಾಜ್ಯದಲ್ಲಿ ರಸಗೊಬ್ಬರದ ಕೊರತೆಯುಂಟಾಗಿದ್ದು ರೈತರು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ...