ನವದೆಹಲಿ,ಜುಲೈ,29,2025 (www.justkannada.in): ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗುತ್ತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.
ಪಹಲ್ಗಾಮ್ ದಾಳಿ ಕುರತು ರಾಜ್ಯಸಭೆಯಲ್ಲಿ ಚರ್ಚೆ ಮುಂದುವರೆದಿದ್ದು ಈ ವೇಳೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೈಸರನ್ ಕಣಿವೆಗೆ ಹೇಗೆ ಉಗ್ರರು ಪ್ರವೇಶಿಸಿದರು? ಉಗ್ರರ ದಾಳಿ ತಡೆಯುವಲ್ಲಿ ಏಕೆ ವಿಫಲರಾಗಿದ್ದೀರಿ? ಎಂದು ಪ್ರಶ್ನಿಸಿದರು.
ಭದ್ರತಾ ಲೋಪದಿಂದಲೇ ದಾಳಿಯಾಗಿದೆ ಯುದ್ದ ನಿಲ್ಲಿಸಿದ್ದು ನಾನೇ ಎಂದು ಡೊನಾಲ್ಡ್ ಟ್ರಂಪ್ 29 ಸಾರಿ ಹೇಳಿದ್ದಾರೆ. ಉಗ್ರರ ದಾಳಿ ಭದ್ರತಾ ಲೋಪಕ್ಕೆ ಉದಾಹರಣೆಯಾಗಿದೆ. ಭದ್ರತಾಲೋಪದ ಹೊಣೆ ಅಮಿತ್ ಶಾ ಹೊರಲಿ ಎಂದು ಖರ್ಗೆ ಗುಡುಗಿದರು.
Key words: Oparation sindhura, Mallikarjuna Kharge, Rajya Sabha
The post ಉಗ್ರರ ದಾಳಿ ತಡೆಯುವಲ್ಲಿ ಏಕೆ ವಿಫಲರಾಗಿದ್ದೀರಿ? ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗುಡುಗು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.