ಲಖನೌ,ಫೆಬ್ರವರಿ,5,2026 (www.justkannada.in): ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕರ್ನಾಟಕದ ಕೈಚಳಕ ಮತ್ತೊಮ್ಮೆ ಮೆರೆದಿದೆ. ಮೈಸೂರಿನ ಪ್ರಸಿದ್ಧ ಶಿಲ್ಪಿ ಕೈಜರ್ ಆಲಿ ಖಾನ್ ನಿರ್ಮಿಸಿದ ಹೊಸ ಸ್ಪೀಕರ್ ಪೀಠವನ್ನು ಬುಧವಾರ ಅಧಿಕೃತವಾಗಿ ಸ್ಥಾಪಿಸಲಾಗಿದೆ.
ಹೌದು, ಉತ್ತರ ಪ್ರದೇಶ ವಿಧಾನಸಭೆಗೆ ಮೈಸೂರಿನ ಕೈಜರ್ ಆಲಿ ಖಾನ್ ನಿರ್ಮಿಸಿದ ಸ್ಪೀಕರ್ ಪೀಠ ಸ್ಥಾಪನೆ ಮಾಡಲಾಗಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ವಿಧಾನಸಭೆಯ ಆಂತರಿಕ ವಿನ್ಯಾಸದಲ್ಲಿ ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಪ್ರತಿಬಿಂಬಿಸಲು ವಿಶೇಷ ಗಮನ ಹರಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಶಿಲ್ಪಕಲೆಯ ಮಾದರಿಯನ್ನು ಆಯ್ಕೆ ಮಾಡಲಾಗಿದೆ.
ಮೈಸೂರಿನ ಶಿಲ್ಪಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಪೀಠವು ಅಲಂಕಾರಿಕ ಕೆತ್ತನೆಗಳು, ಸಾಂಪ್ರದಾಯಿಕ ಮೋಟಿಫ್ ಗಳು ಹಾಗೂ ಘನತೆಯನ್ನು ಪ್ರತಿಬಿಂಬಿಸುವ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಇದನ್ನು “ಕರ್ನಾಟಕ ಮಾಡೆಲ್” ಎಂದು ಯೋಗಿ ಸರ್ಕಾರ ಪ್ರಶಂಸಿಸಿದೆ.
ಈ ಮೂಲಕ ಮೈಸೂರು ಶಿಲ್ಪಕಲೆ ಉತ್ತರ ಭಾರತದ ಪ್ರಮುಖ ಆಡಳಿತ ಕೇಂದ್ರದಲ್ಲೂ ತನ್ನ ಗುರುತು ಮೂಡಿಸಿದ್ದು, ಕರ್ನಾಟಕದ ಕಲಾತ್ಮಕ ಪರಂಪರೆಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ದೊರೆತಿದೆ.
Key words: Karnataka model, Speaker Peeth, Mysore sculptor, UP, Legislative Assembly
The post ಕರ್ನಾಟಕ ಮಾಡೆಲ್: ಮೈಸೂರು ಶಿಲ್ಪಿ ನಿರ್ಮಿಸಿದ್ದ ‘ಸ್ಪೀಕರ್ ಪೀಠ’ ಯುಪಿ ವಿಧಾನಸಭೆಗೆ ಸ್ಥಾಪನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




