9
March, 2026

A News 365Times Venture

9
Monday
March, 2026

A News 365Times Venture

ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ,  ಆರ್ಥಿಕ ಸಮೀಕ್ಷೆ ಕೈಗೊಳ್ಳುತ್ತಿಲ್ಲ- ಸಿಎಂ ಸಿದ್ದರಾಮಯ್ಯ

Date:

ದಾವಣಗೆರೆ, ಜೂನ್ 16, 2025 (www.justkannada.in):  ಸಾಮಾಜಿಕ ನ್ಯಾಯ ಒದಗಿಸಲು ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ತಿಳಿದಿರಬೇಕು. ಅದಕ್ಕಾಗಿ ಮರು ಸಮೀಕ್ಷೆ ಅಗತ್ಯವಿದೆ. ಕೇಂದ್ರ ಸರ್ಕಾರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಜನಗಣತಿಯನ್ನು 2027 ನೇ ಸಾಲಿನಿಂದ ಕೈಗೊಳ್ಳುತ್ತಿದ್ದು, ಸಾಮಾಜಿಕ, ಶೈಕ್ಷಣಿಕ,  ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ. ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ,  ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿ ಗಣತಿಯೂ ಒಳಗೊಂಡಿದೆ ಎಂದರು.

ಕೇಂದ್ರ ಸರ್ಕಾರ ಜನಗಣತಿ  ಮಾಡುವುದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮೀಕ್ಷೆಗೂ ಅವರ ಸಾಮೀಕ್ಷೆಗೂ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ವ್ಯತ್ಯಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಾಯ್ದೆಯ ಪ್ರಕಾರ ಮರುಗಣತಿ

ವರದಿಯ ಕುರಿತು ಪ್ರಬಲರು ಹಾಗೂ ದುರ್ಬಲರು ಆಕ್ಷೇಪಣೆ  ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಗಗಳ ಕಾಯ್ದೆಯ  ಸೆಕ್ಷನ್ 11 (1 )ರ ಪ್ರಕಾರ ವರದಿಗೆ  ಹತ್ತು ವರ್ಷಗಳಾದ ಮೇಲೆ ಮರು ಸಮೀಕ್ಷೆಯಾಗಬೇಕು ಎಂದು ತಿಳಿಸಲಾಗಿದೆ. ಅದಕ್ಕಾಗಿ ಮರು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.vtu

Key words: Central government, not conducting, social, educational, economic surveys, CM Siddaramaiah

The post ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ,  ಆರ್ಥಿಕ ಸಮೀಕ್ಷೆ ಕೈಗೊಳ್ಳುತ್ತಿಲ್ಲ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ಕೆ.ಆರ್ ಆಸ್ಪತ್ರೆಗೆ 100 ICU ಬೆಡ್ ಗಳ ಮಂಜೂರಿಗೆ MLC  ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು,ಮಾರ್ಚ್,9,2026 (www.justkannada.in):  ಮೈಸೂರಿನ ಕೆ.ಆರ್ ಆಸ್ಪತ್ರೆ ಮತ್ತು ಚಲುವಾಂಬ ಆಸ್ಪತ್ರೆಗೆ 100...

ಈವರೆಗೆ ಇರಾನ್ ನಿಂದ 67 ಸಾವಿರ ಭಾರತೀಯರನ್ನ ಕರೆ ತಂದಿದ್ದೇವೆ –ಕೇಂದ್ರ ಸಚಿವ ಜೈ ಶಂಕರ್

ನವದೆಹಲಿ,ಮಾರ್ಚ್,9,2026 (www.justkannada.in):  ಇರಾನ್ –ಇಸ್ರೇಲ್ ಯುದ್ದ ಹಿನ್ನೆಲೆಯಲ್ಲಿ ಇರಾನ್ ನಲ್ಲಿ ಸಿಲುಕಿದ್ದ...

MDA ವಿಶೇಷ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ: ಸರ್ಕಾರದಿಂದ ಮತ್ತೆ ಸೂಚನೆ

  ಮೈಸೂರು, ಮಾ.೦೮,೨೦೨೬ : ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿರುವ ಮೈಸೂರು ಅಭಿವೃದ್ಧಿ...

ಸಾಲ ಮಾಡದೆ ಅಭಿವೃದ್ಧಿ ಆಗಲ್ಲ; ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in):  ಸಾಲದ ಬಗ್ಗೆ ಬಿಜೆಪಿಯವರು ಟೀಕೆ ಹಿನ್ನೆಲೆಯಲ್ಲಿ ಈ ಕುರಿತು...