10
March, 2026

A News 365Times Venture

10
Tuesday
March, 2026

A News 365Times Venture

“ ಕೋನಾರ್ಕ್ ಉತ್ಸವ” ದ ಮಾದರಿಯಲ್ಲಿ “ ಚಾಲುಕ್ಯ ಉತ್ಸವ”  ಆಚರಣೆ: ಸಚಿವ ಶಿವರಾಜ್ ಎಸ್. ತಂಗಡಗಿ

Date:

ಬೆಂಗಳೂರು, ಮಾರ್ಚ್18, 2025: ಒಡಿಶಾ ರಾಜ್ಯದ ಪ್ರಸಿದ್ಧ  ಕೋನಾರ್ಕ್ ಉತ್ಸವದ  ಮಾದರಿಯಲ್ಲಿ ಚಾಲುಕ್ಯ ಉತ್ಸವ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ‌ ಕೈಗೊಳ್ಳಲಾಗಿದೆ.

ಚಾಲುಕ್ಯ ಉತ್ಸವ ಆಚರಣೆ  ಹಿನ್ನೆಲೆಯಲ್ಲಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರ ನೇತೃತ್ವದಲ್ಲಿ ಬಾಗಲಕೋಟೆಯ ಜನಪ್ರತಿನಿಧಿಗಳ ಸಭೆ ಮಂಗಳವಾರ ವಿಕಾಸಸೌಧದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, 2015ರ ನಂತರ ಚಾಲುಕ್ಯ ಉತ್ಸವ ಆಚರಣೆ ನಡೆದಿಲ್ಲ. ಇತರ ಉತ್ಸವಗಳಂತೆ ಚಾಲುಕ್ಯ ಉತ್ಸವವೂ ಆಚರಣೆ ಆಗುವ ಬದಲಿಗೆ ಇದನ್ನೊಂದು ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಉತ್ಸವವನ್ನಾಗಿ ರೂಪಿಸಬೇಕು. ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಉತ್ಸವ ಆಚರಣೆಯಾಗಬೇಕು ಎಂದು ಹೇಳಿದರು.

ಉತ್ಸವದಲ್ಲಿ ಸಂಗೀತ, ನೃತ್ಯ ಹಾಗೂ ಜಾನಪದ ಕಲಾ ವೈಭವಗಳನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ಆಯೋಜನೆಯಾಗಲಿದೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಬಾದಾಮಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಎರಡನೇ ದಿನ ಪಟ್ಟದಕಲ್ಲು ಹಾಗೂ ಸಮಾರೋಪ ಸಮಾರಂಭ ಐಹೊಳೆಯಲ್ಲಿ ನಡೆಯಲಿದೆ.‌ ವರ್ಷಾಂತ್ಯಕ್ಕೆ‌ ಉತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಮುಂದಿನ‌ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲು ಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಯಿತು.

ಶಾಸಕ‌ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇಮ್ಮಡಿ ಪುಲಿಕೇಶಿ ಕರ್ನಾಟಕದ ಚರಿತ್ರೆಯಲ್ಲಿ ತನ್ನ ಶೌರ್ಯ, ಸಾಹಸ ಹಾಗೂ ಕಲಾವಂತಿಕೆ ಮುಂತಾದ ಸಂಗತಿಗಳಿಂದಾಗಿ ಅಜರಾಮರನಾಗಿದ್ದನು. ಇಮ್ಮಡಿ ಪುಲಿಕೇಶಿಯ ಚರಿತ್ರೆಯನ್ನು ಉತ್ಸವದಲ್ಲಿ ಸಾರುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅಬಕಾರಿ ಸಚಿವರೂ ಆದ ಬಾಗಲಕೋಟೆ ಜಿಲ್ಲಾ‌ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ‌ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಪಿ.ಎಚ್.ಪೂಜಾರ್,‌ ಉಮಾಶ್ರೀ‌, ಇಲಾಖೆ ನಿರ್ದೇಶಕಿ ಗಾಯಿತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

key words: “Chalukya Festival” ,  “Konark Festival”, Minister Shivraj S. Thangadgi

summary:

“Chalukya Festival” celebrated on the model of “Konark Festival”: Minister Shivraj S. Thangadgi

The post “ ಕೋನಾರ್ಕ್ ಉತ್ಸವ” ದ ಮಾದರಿಯಲ್ಲಿ “ ಚಾಲುಕ್ಯ ಉತ್ಸವ”  ಆಚರಣೆ: ಸಚಿವ ಶಿವರಾಜ್ ಎಸ್. ತಂಗಡಗಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

14 ವರ್ಷದ ಹೆಣ್ಣು ಮಕ್ಕಳಿಗೆ ‘HPV ಲಸಿಕಾ’ ಅಭಿಯಾನ

ಮೈಸೂರು, ಮಾರ್ಚ್,10,2026 (www.justkannada.in): HPV ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕುಗಳಿಂದ...

ಕೃಷಿ ಕ್ಷೇತ್ರದಲ್ಲಿ AI ಬಳಕೆ ಅಗತ್ಯ : ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್

  ಮೈಸೂರು, ಮಾ.೧೦,೨೦೨೬ : ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ...

KPCC ಅಧ್ಯಕ್ಷರಾಗಿ 6 ವರ್ಷ ಯಶಸ್ವಿ: ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು,ಮಾರ್ಚ್,10,2026 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ 6 ವರ್ಷಗಳನ್ನು ಪೂರೈಸಿದ ಡಿಸಿಎಂ...

ಡಿಕೆಶಿ ಅತ್ಯಂತ ಯಶಸ್ವಿ ಅಧ್ಯಕ್ಷರು: ಪಕ್ಷ ಅಧಿಕಾರಕ್ಕೆ ತರುವುದೇ ಅವರ ಕನಸಾಗಿತ್ತು- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,10,2026 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ 6 ವರ್ಷ ಪೂರೈಸಿದ್ದು...