ಮೈಸೂರು,ಜುಲೈ,19,2025 (www.justkannada.in): ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಬಿಜೆಪಿ ,ಜೆಡಿಎಸ್ ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸತ್ಯ ಗೊತ್ತಾಗಬೇಕಾದರೇ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ 2578 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ಖಜಾನೆ ಖಾಲಿ ಆಗಿಲ್ಲ. ಖಜಾನೆ ಖಾಲಿ ಆಗಿದ್ದರೆ 2, 578 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿರಲಿಲ್ಲ. ಯಾರು ಬೇಕಾದರೂ ಬಂದು ಪರಿಶೀಲನೆ ಮಾಡಿ ಎಂದು ಸವಾಲೆಸೆದರು.
ಬಿಜೆಪ ಜೆಡಿಎಸ್ ನವರು ಸುಳ್ಳು ಆರೋಪ ಮಾಡುತ್ತೀರಿ ನಿಮಗೆ ಸತ್ಯ ಗೊತ್ತಾಗಬೇಕಾದರೇ ಒಂದೇ ವೇದಿಕೆಗೆ ಬನ್ನಿ. ನಿಮ್ಮ ನಮ್ಮ ಕೆಲಸ ಬಗ್ಗೆ ಚರ್ಚೆ ಮಾಡೋಣ. 2 ವರ್ಷ ಮಾಡಿದ್ದನ್ನ ಜನರ ಮುಂದೆ ಇಟ್ಟಿದ್ದೇವೆ . ಈ ಕಾರ್ಯಕ್ರಮವನ್ನ ಶಕ್ತಿಪ್ರದರ್ಶನ ಅನ್ನುತ್ತಾರೆ. ಆದರೆ ಇದು 2ವರ್ಷ ಮಾಡಿದ ಸಾಧನೆಯನ್ನ ಜನರ ಮುಂದಿಟ್ಟಿದ್ದೇವೆ. ಇದು ಯಾವುದೇ ಶಕ್ತಿ ಪ್ರದರ್ಶನ ಅಲ್ಲ ಅಭಿವೃದ್ದಿ ಶಕ್ತಿ ಮುಂದಿಡುವ ಕಾರ್ಯಕ್ರಮ ಎಂದರು.
ಬಡವರನ್ನ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಸಾಮಾಜಿಕ ರಾಜಕೀಯ ಅಸಮಾನತೆ ಹೋಗಬೇಕು. ಅವಾಗ ಮಾತ್ರ ಜನಾಶೀರ್ವಾದಕ್ಕೆ ಬೆಲೆ . ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ಇದೆ. ಸಾಮಾಜಿಕ ನ್ಯಾಯ ಕೊಟ್ಟರೆ ಬಿಜೆಪಿ ವಿರೋಧ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಜೆಡಿಎಸ್ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ. ನಾನು ಜೆಡಿಎಸ್ ನಲ್ಲಿದ್ದಾಗ 69 ಸ್ಥಾನ ಬಂತು ನಂತರ ಕಡಿಮೆಯಾಯಿತು ಜೆಡಿಎಸ್ ನಿಂದ ಶಾಸಕರು ದೂರ ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
Key words: Congress, Sadhana Convention, Mysore , CM Siddaramaiah
The post ಖಜಾನೆ ಖಾಲಿ ಎಂದು ಬಿಜೆಪಿ, ಜೆಡಿಎಸ್ ಸುಳ್ಳು ಆರೋಪ: ಒಂದೇ ವೇದಿಕೆಯಲ್ಲೇ ಚರ್ಚೆಗೆ ಬನ್ನಿ- ಸಿಎಂ ಸಿದ್ದರಾಮಯ್ಯ ಸವಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.