10
March, 2026

A News 365Times Venture

10
Tuesday
March, 2026

A News 365Times Venture

ಖಾತೆ ಬದಲಾವಣೆ ಸುಳ್ಳು, ಸತ್ಯಕ್ಕೆ ದೂರವಾದದ್ದು-ಗೃಹ ಸಚಿವ ಡಾ.ಜಿ.ಪರಮೇಶ್ವರ್

Date:

ಬೆಂಗಳೂರು, ಜೂನ್​,9,2025 (www.justkannada.in): ಖಾತೆ ಬದಲಾವಣೆ ಎಂಬುದು ವದಂತಿ. ಇದು ಸತ್ಯಕ್ಕೆ ದೂರವಾದದ್ದು, ಸುಳ್ಳು ಎಂದು ಗೃಹ ಸಚಿವ  ಡಾ. ಜಿ. ಪರಮೇಶ್ವರ್​ ತಿಳಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತ ಪ್ರಕರಣ ಬೆನ್ನಲ್ಲೆ  ಗೃಹ ಸಚಿವ ಜಿ ಪರಮೇಶ್ವರ್, ಖಾತೆ ಬದಲಾಯಿಸಲು ಕೇಳಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಕುರಿತು ಮಾತನಾಡಿರುವ ಪರಮೇಶ್ವರ್, ಖಾತೆ ಬದಲಾವಣೆಯ ಬಗ್ಗೆ ನಾನು ಸಿಎಂ ಬಳಿ ಹೇಳಿಕೊಂಡಿಲ್ಲ. ಖಾತೆ ಬದಲಾವಣೆಗೆ ಕೇಳಿದ್ದೇನೆ ಅನ್ನೋ ವಿಚಾರವನ್ನು ಹೇಳಿದ್ಯಾರು? ಏನೇ ಇದ್ದರೂ ನನ್ನನ್ನೇ ಕೇಳಬೇಕು ಅಲ್ಲವೇ. ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ. ಒಬ್ಬರ ವ್ಯಕ್ತಿತ್ವ ಕೊಲೆ ಮಾಡಬಾರದು, ಇದು ಶೋಭೆ ತರುವುದಿಲ್ಲ. ಏನೇ ಇದ್ದರೂ ನನ್ನನ್ನೇ ಕೇಳಿ, ಉತ್ತರ ಕೊಡುತ್ತೇನೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ​ಗೆ  ದೂರವಾಣಿ ಮೂಲಕ ಮಾಹಿತಿ ನೀಡಿದ್ದೇವೆ.  ಆದರೆ ಯಾರೂ ನಮ್ಮನ್ನು ದೆಹಲಿಗೆ ಕರೆದಿಲ್ಲ, ಮುಂಬೈಗೂ ಕರೆದಿಲ್ಲ. ಇದು ಸತ್ಯಕ್ಕೆ ದೂರವಾದದ್ದು. ಹೈಕಮಾಂಡ್​ ನವರು ಮಾಹಿತಿ ಕೇಳುತ್ತಾರೆ, ಅವರಿಗೆ ಆತಂಕ ಇರುತ್ತೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಬಳಿ ಮಾಹಿತಿ ಕೇಳುತ್ತಾರೆ ಎಂದರು.vtu

Key words: Home Minister, Change, Dr. G. Parameshwar, lie

The post ಖಾತೆ ಬದಲಾವಣೆ ಸುಳ್ಳು, ಸತ್ಯಕ್ಕೆ ದೂರವಾದದ್ದು-ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎಪಿಎಂಸಿಗಳಲ್ಲಿ 70 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ: ಸಚಿವ ಶಿವಾನಂದ ಪಾಟೀಲ್

ಬೆಂಗಳೂರು,ಮಾರ್ಚ್,10,2026 (www.justkannada.in):  ಪ್ರಸಕ್ತ ಹಣಕಾಸು ವರ್ಷದ ಜನವರಿ ಅಂತ್ಯಕ್ಕೆ ರಾಜ್ಯದ ಎಪಿಎಂಸಿಗಳಲ್ಲಿ...

14 ವರ್ಷದ ಹೆಣ್ಣು ಮಕ್ಕಳಿಗೆ ‘HPV ಲಸಿಕಾ’ ಅಭಿಯಾನ

ಮೈಸೂರು, ಮಾರ್ಚ್,10,2026 (www.justkannada.in): HPV ಲಸಿಕೆಯು ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕುಗಳಿಂದ...

ಕೃಷಿ ಕ್ಷೇತ್ರದಲ್ಲಿ AI ಬಳಕೆ ಅಗತ್ಯ : ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್

  ಮೈಸೂರು, ಮಾ.೧೦,೨೦೨೬ : ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ...

KPCC ಅಧ್ಯಕ್ಷರಾಗಿ 6 ವರ್ಷ ಯಶಸ್ವಿ: ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು,ಮಾರ್ಚ್,10,2026 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ 6 ವರ್ಷಗಳನ್ನು ಪೂರೈಸಿದ ಡಿಸಿಎಂ...