9
June, 2026

A News 365Times Venture

9
Tuesday
June, 2026

A News 365Times Venture

ಗಾಳಿ, ಮಳೆ ವೇಳೆ ವಿದ್ಯುತ್‌ ಅನಾಹುತ ತಪ್ಪಿಸಲು ಸೆಸ್ಕ್‌ ಸನ್ನದ್ಧ: ಮುನ್ನೆಚ್ಚರಿಕೆಗೆ ಸೂಚನೆ

Date:

ಮೈಸೂರು ಮೇ,22, 2026 (www.justkannada.in):  ಗ್ರಾಹಕರಿಗೆ ಅಡಚಣೆರಹಿತವಾದ ವಿದ್ಯುತ್‌ ಸೇವೆ ನೀಡುತ್ತಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌), ಪ್ರಸ್ತುತ ಪೂರ್ವ ಮುಂಗಾರು ಆರಂಭ ಆಗುತ್ತಿರುವ ಸಂದರ್ಭದಲ್ಲಿ ಉಂಟಾಗುವ ವಿದ್ಯುತ್ ‌ಸಮಸ್ಯೆಗಳು, ಅಪಾಯಗಳ ಕುರಿತಂತೆ ಜಾಗೃತಿ ಮೂಡಿಸಿ, ಎಚ್ಚರಿಕೆಯಿಂದಿರುವಂತೆ ಗ್ರಾಹಕರಿಗೆ ಸಲಹೆ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸೆಸ್ಕ್ ಅಧಿಕಾರಿಗಳು, ನಿಗಮದ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭವಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ವಿದ್ಯುತ್‌ ಅವಘಡಗಳು, ಅಡಚಣೆಗಳು ಹಾಗೂ ಇತರೆ ತೊಂದರೆಗಳನ್ನು ಎದುರಿಸಲು ಸೆಸ್ಕ್ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರ ಸುರಕ್ಷತೆ ಬಗ್ಗೆಯೂ ಹೆಚ್ಚಿನ ನಿಗಾವಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಹಕರಿಗೆ ಅಗತ್ಯ ಸೇವೆ ನೀಡಲು ಕಾರ್ಯಪ್ರವೃತ್ತರಾಗಿದ್ದಾರೆ. ಅದರಂತೆ ಸಾರ್ವಜನಿಕರು ಅತಿಯಾದ ಗಾಳಿ ಮತ್ತು ಮಳೆಯ ಸಂದರ್ಭದಲ್ಲಿ ವಿದ್ಯುತ್ ಅಪಾಯಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆವಹಿಸಲು ಕೋರಲಾಗಿದೆ.

ಸಾರ್ವಜನಿಕರು ತಮ್ಮ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿರುವುದು, ವಿದ್ಯುತ್‌ ಕಂಬಗಳು ಹಾನಿಯಾಗಿರುವುದು, ಟ್ರಾನ್ಸ್‌ ಫಾರ್ಮರ್‌ ಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ತುರ್ತಾಗಿ 24*7 ಸಹಾಯವಾಣಿ 1912 ಅಥವಾ ನಿಗಮದ ವಾಟ್ಸಾಪ್‌ ಸಂಖ್ಯೆ 9448991912 ಸಂಖ್ಯೆಗೆ ಫೋಟೋ ಸಹಿತವಾಗಿ ಮಾಹಿತಿ ನೀಡುವಂತೆ ಅಥವಾ ಸ್ಥಳೀಯ ಸೆಸ್ಕ್‌ ಅಧಿಕಾರಿಗಳು, ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೆಸ್ಕ್‌ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳು

ಕೊಡಗು – 18005990061

ಮೈಸೂರು – 18005990062

ಚಾಮರಾಜನಗರ – 18005990063

ಹಾಸನ – 18005990065

ಮಂಡ್ಯ – 18005990066

ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು

* ರಸ್ತೆ ಬದಿಯಲ್ಲಿ ಅಥವಾ ಇತರೆ ಕಡೆಗಳಲ್ಲಿ ತುಂಡಾಗಿ ಬಿದ್ದ ತಂತಿಗಳನ್ನು ಮುಟ್ಟಬೇಡಿ.

* ಬಟ್ಟೆ ಒಣಗಿಸಲು ವಿದ್ಯುತ್‌ ಕಂಬಗಳು, ವೈಯರ್‌ ಗಳನ್ನು ಬಳಸಬೇಡಿ.

* ವಿದ್ಯುತ್‌ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ ಗಳ ಸಮೀಪ ಜಾನುವಾರುಗಳನ್ನು ಕಟ್ಟುವುದನ್ನು ಮಾಡಬೇಡಿ.

* ಮಳೆ ಹಾಗೂ ಗಾಳಿಯ ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ ಗಳ ಸಮೀಪ ನಿಲ್ಲದಂತೆ ಎಚ್ಚರವಹಿಸಿ.

ರೈತರಿಗೆ ಸುರಕ್ಷತಾ ಕ್ರಮಗಳು

* ಒದ್ದೆ ಕೈಗಳಿಂದ ಪಂಪ್‌ ಸೆಟ್‌ ಗಳನ್ನು ಆನ್‌ ಮಾಡಬೇಡಿ.

* ಮಳೆ ಸಂದರ್ಭಗಳಲ್ಲಿ ವಿದ್ಯುತ್‌ ಉಪಕರಣಗಳನ್ನು ಆಫ್‌ ಮಾಡಿ.

* ಜಾನುವಾರುಗಳನ್ನು ವಿದ್ಯುತ್‌ ಕಂಬಗಳು ಮತ್ತು ಕಂಬಗಳ ವೈರ್‌ ಗಳಿಗೆ ಕಟ್ಟಬೇಡಿ.

* ಜಲಾವೃತ ಪ್ರದೇಶಗಳಲ್ಲಿ ವಿದ್ಯುತ್‌ ಉಪಕರಣಗಳೊಂದಿಗೆ ಕೆಲಸ ಮಾಡಬೇಡಿ.

* ಮಳೆ ಸಂದರ್ಭದಲ್ಲಿ ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ ಗಳಿಂದ ದೂರವಿರಿ.

Key words: CESC, prepared, avoid, power, Disaster, wind , rain

The post ಗಾಳಿ, ಮಳೆ ವೇಳೆ ವಿದ್ಯುತ್‌ ಅನಾಹುತ ತಪ್ಪಿಸಲು ಸೆಸ್ಕ್‌ ಸನ್ನದ್ಧ: ಮುನ್ನೆಚ್ಚರಿಕೆಗೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ

ಮೈಸೂರು, ಜೂನ್,8,2026 (www.justkannada.in): ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು  ಮೈಸೂರು...

ಭರ್ಜರಿ ಕಾರ್ಯಚರಣೆ: 41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು

ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರದ ವಿವಿಧ ಠಾಣಾ ಪೊಲೀಸರು ಭರ್ಜರಿ ಕಾರ್ಯಚರಣೆ...

KPCC ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,8,2026 (www.justkannada.in): ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ನನ್ನ ಬೇಡಿಕೆ ಇದ್ದಿದ್ದು ನಿಜ....

13 ಸಚಿವರಿಗೆ ಕೊಠಡಿಗಳ ಹಂಚಿಕೆ: ರಾಮಲಿಂಗಾರೆಡ್ಡಿ ಅವರಿಗೆ ಬಂಪರ್

ಬೆಂಗಳೂರು, ಜೂನ್,8,2026 (www.justkannada.in): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ನೂತನ...