27
March, 2026

A News 365Times Venture

27
Friday
March, 2026

A News 365Times Venture

ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು- ಶಾಸಕ ಮುನಿರತ್ನ ಕಿಡಿ

Date:

ಬೆಂಗಳೂರು,ಮಾರ್ಚ್,26,2026 (www.justkannada.in):  ಇಂದು ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಬಗ್ಗೆ ಉತ್ತರ ನೀಡುವ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ವಾಗ್ವಾದ ನಡೆಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ, ಬೆಂಗಳೂರು ಸಂಬಂಧಿಸಿದಂತೆ ಉತ್ತರ ನೀಡಲು ಡಿಕೆ ಶಿವಕುಮಾರ್ ಬಂದಿದ್ದರು. ಪ್ರಸ್ತಾಪಿಸಿದ ವಿಷಯಗಳಿಗೆ ಡಿಕೆ ಶಿವಕುಮಾರ್ ಉತ್ತರ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು.  ಆದರೆ ನನ್ನ ಪ್ರಶ್ನೆಗಳ ಬಗ್ಗೆ ಮಾತನಾಡಲಿಲ್ಲ ಎಂದು ಕಿಡಿಕಾರಿದರು.

ಡಿಕೆ ಸುರೇಶ್ ಸೋತ ಬಳಿಕ ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಅದರ ದಾಖಲೆ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು. ಅದನ್ನು ಬಿಟ್ಟು ಇವರೇ ಕೇಸ್ ಹಾಕಿಸಿ ಈಗ ಬಂದು ಮಾತನಾಡುತ್ತಿದ್ದಾರೆ  ಇಂತಹವರಿಂದ ರಾಜ್ಯ ಏನು ಆಗುತ್ತೆ ಎಂದು ಯೋಚನೆ ಮಾಡಬೇಕು.  ಉತ್ತರ ಕೊಡಲು ಆಗದೆ ಸದನ ಹಾಳು ಮಾಡಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದೆ ಅದರ ಬಗ್ಗೆ ನಾನು ಮಾತನಾಡಿದ್ದೇನೆ.  ಡಿಕೆಶಿ ಇವತ್ತು ಉತ್ತರ ಕೊಡಬೇಕಿತ್ತು ಎಂದು ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು.

Key words: DK Shivakumar, Session, answer, MLA, Munirathna

The post ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು- ಶಾಸಕ ಮುನಿರತ್ನ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,26,2026 (www.justkannada.in): ನಾನು ಯಾವತ್ತಿಗೂ  ಟೀಕೆಗಳನ್ನು ಸ್ವಾಗತ ಮಾಡುವವನು.  ಟಿಖೆ ಮಾಡಿದರು...

ದುಃಖವನ್ನು ಮೀರಿದ ಕರ್ತವ್ಯನಿಷ್ಠೆ: ಪತಿಯ ಮರಣದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಲೆಗೆ ಧಾವಿಸಿದ ಶಿಕ್ಷಕಿ.

  ಮೈಸೂರು, March.26,2026: ಮಾನವೀಯತೆ, ಕರ್ತವ್ಯನಿಷ್ಠೆ ಮತ್ತು ವೃತ್ತಿ ಬದ್ಧತೆಯ ಅಪರೂಪದ ಉದಾಹರಣೆಯಾಗಿ...

ಉಪಚುನಾವಣೆ: ’ಕೈ’ ಸಂಧಾನ ಸಕ್ಸಸ್: ಮೂವರು ನಾಮಪತ್ರ ವಾಪಸ್

ಬಾಗಲಕೋಟೆ,ಮಾರ್ಚ್,26,2026 (www.justkannada.in):  ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದು...

ನಾಳೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್

ನವದೆಹಲಿ,ಮಾರ್ಚ್,26,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು...