17
February, 2026

A News 365Times Venture

17
Tuesday
February, 2026

A News 365Times Venture

ಡೈರಿ ಆವರಣದಲ್ಲೇ ಎರಡು ಗುಂಪುಗಳ ನಡುವೆ ಗಲಾಟೆ, ಹಲ್ಲೆ: ಇಬ್ಬರಿಗೆ ಗಾಯ

Date:

ಮೈಸೂರು,ಆಗಸ್ಟ್,6,2025 (www.justkannada.in): ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ತರಗನಹಳ್ಳಿಯಲ್ಲಿ ನಡೆದಿದೆ.

ಡೈರಿ ಆವರಣದಲ್ಲೇ ಒಂದು ಗುಂಪಿನ ಮೇಲೆ ಮತ್ತೊಂದು ಗುಂಪು ಹಲ್ಲೆ ಮಾಡಿದ್ದು ಇಬ್ನರಿಗೆ ಗಾಯಗಳಾಗಿದೆ.  ಕಳೆದ 17 ವರ್ಷದಿಂದ ಮಹೇಶ್ ಎಂಬುವವರು ಕಾರ್ಯದರ್ಶಿಯಾಗಿದ್ದರು. ನಂತರ ಮಹೇಶ್ ರನ್ನು ಅವ್ಯವಹಾರ ಆರೋಪದ ಮೇಲೆ  ಅಮಾನತು ಮಾಡಿ  ಮಹದೇವ ಪ್ರಸಾದ್ ಎಂಬುವವರನ್ನ ತಾತ್ಕಾಲಿಕ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

ಈ ಮಧ್ಯೆ ಮಹೇಶ್ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ಸಾಬೀತಾಗಿದ್ದು, ಮತ್ತೆ ಕಾರ್ಯದರ್ಶಿಯಾಗಿ ಮಹೇಶ್ ಮುಂದುವರೆಯಲು ಅಸಿಸ್ಟೆಂಟ್ ರಿಜಿಸ್ಟರ್ ಸಹಕಾರಿ ನ್ಯಾಯಾಲಯ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ  ತಾತ್ಕಾಲಿಕವಾಗಿ ನೇಮಕವಾದ ಮಹದೇವ ಪ್ರಸಾದ್  ಎಂಬಾತನನ್ನು ಹುದ್ದೆಯಿಂದ ಕೈ ಬಿಡಲು ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಒತ್ತಾಯಿಸಿ  ಮೇಲಧಿಕಾರಿಗಳಿಗೆ ಮನವಿ ಪತ್ರ ಕೊಡಲು ನಿರ್ಧಾರ ಮಾಡಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹದೇವ ಪ್ರಸಾದ್ ಮತ್ತು ಮಹೇಶ್ ಗುಂಪಿನ ನಡುವೆ ಗಲಾಟೆಯಾಗಿದ್ದುಪರಸ್ಪರ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದು, ಮಹದೇವ ಪ್ರಸಾದ್ ಕಡೆಯ ಗುಂಪಿನಿಂದ ಬಸವರಾಜಪ್ಪ‌ ಮತ್ತು ಅವರ ಮಗ ಸದಾನಂದ ಎಂಬುವರ ಮೇಲೆ ಹಲ್ಲೆಯಾಗಿದ. ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: assault, between, two groups, Two injured, Mysore

The post ಡೈರಿ ಆವರಣದಲ್ಲೇ ಎರಡು ಗುಂಪುಗಳ ನಡುವೆ ಗಲಾಟೆ, ಹಲ್ಲೆ: ಇಬ್ಬರಿಗೆ ಗಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು,ಫೆಬ್ರವರಿ,17,2026 (www.justkannada.in): ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ದ ಅಪಪ್ರಚಾರ ಪ್ರಕರಣಕ್ಕೆ...

ಡೂಪ್ಲಿನ್ ಕಾಂಪ್ಲೆಕ್ಸ್ ವರ್ತಕರನ್ನು ಖಾಲಿ ಮಾಡಿಸಿ ಆಸ್ತಿ ವಶಕ್ಕೆ ಪಡೆಯಿರಿ: MDA ಪರ ಹೈಕೋರ್ಟ್ ತೀರ್ಪು

ಮೈಸೂರು,ಫೆಬ್ರವರಿ,17,2026 (www.justkannda.in): ಮೈಸೂರಿನ ಹೃದಯಭಾಗದಲ್ಲಿರುವ “ಡೂಪ್ಲಿನ್ ಕಾಂಪ್ಲೆಕ್ಸ್”  ನ ವರ್ತಕರಿಗೆ ಹೈಕೋರ್ಟ್...

ಶಬರಿಮಲೆ ವಿವಾದ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

ನವದೆಹಲಿ,ಫೆಬ್ರವರಿ,16,2026 (www.justkannada.in): ಕೇರಳದ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ...

“ನಂದಿನಿ” ಬಗ್ಗೆ ಅಪಪ್ರಚಾರ: ಸೈಬರ್ ಪೊಲೀಸರಿಗೆ ಕೆಎಂಎಫ್ ದೂರು, ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ.

  ಬೆಂಗಳೂರು, ಫೆ.೧೬,೨೦೨೬: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ...