ಮೈಸೂರು,ಆಗಸ್ಟ್, 1,2025 (www.justkannada.in): ಮೈಸೂರಿನಲ್ಲಿ ಡ್ರಗ್ಸ್ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂಟಲಿಜನ್ಸ್ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ನಾಗರೀಕ ವಿರುದ್ಧ ನಡೆಯುವ ಯಾವುದೇ ಚಟುವಟಿಕೆ ನಡೆಯಬಾರದು . ಅದನ್ನ ಬೆಂಬಲಿಸುವ ಕೆಲಸ ನಾವು ಎಂದೂ ಸಹ ಮಾಡಿಲ್ಲ. ಇಂತಹದ್ದು ನಡೆಯುತ್ತಿದೆ ಅನ್ನೋದು ತಿಳಿದಿಲ್ಲ ಅಂದರೆ ಇಂಟಲಿಜನ್ಸ್ ವ್ಯವಸ್ಥೆ ಪೊಲೀಸ್ ವ್ಯವಸ್ಥೆ ವಿಫಲತೆ ಕಾಣುತ್ತಿದೆ. ನನ್ನ ಭಾಗಕ್ಕೆ ಕಾನೂನು ಹಾಗೂ ಸಂಚಾರ ವ್ಯವಸ್ಥೆ ಕಡೆಗಣಿಸುವುದು ಹೆಚ್ಚಾಗಿ ಕಾಣುತ್ತಿದೆ. ಹೊರ ವಲಯ ರಸ್ತೆಗಳಲ್ಲಿ ಹೆಚ್ಚು ಕಡಿವಾಣ ಮತ್ತು ನಿಗಾ ವಹಿಸಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರ ಹಾಗೂ ಸರ್ಕಾರದ ಬಳಿ ಮಾತನಾಡಿದ್ದೇನೆ ಎಂದರು.
ಸಂಸತ್ತಿನಲ್ಲೂ ಮೈಸೂರು ಉದಯಗಿರಿ ಬಗ್ಗೆ ಚರ್ಚೆ ಆಗಿದೆ . ಉದಯಗಿರಿಯಲ್ಲಿ ಹೊಸ ಪೊಲೀಸ್ ಠಾಣೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ . ಸರ್ಕಾರ ಹೊಸ ಪೊಲೀಸ್ ಠಾಣೆಯನ್ನ ಮಂಜೂರು ಮಾಡಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ . ಚುನಾವಣೆ ಸಮಯದಲ್ಲಿ ಪಕ್ಷ ಪ್ರತಿಪಕ್ಷ ಅನ್ನೋ ವಿಚಾರ ಬರಬೇಕು. ಆರೋಪಗಳನ್ನೆಲ್ಲ ಕೇವಲ ಒಬ್ಬರ ಮೇಲೆ ಹಾಕಬಾರದು. ಸಂಸದರು ಹಾಗೂ ಶಾಸಕರಿಗೆ ಚರ್ಚೆ ಮಾಡಲು ಅವಕಾಶ ಇದೆ. ಸರ್ಕಾರದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇವೆ. ರಾಜ್ಯದ ಹಿತ ಕಾಪಾಡೋದು ಬಿಟ್ಟು ಸಂಸತ್ ನಲ್ಲಿ ಮಾತಾಡೋದು ಶೋಭೆ ತರುವಂತಹದ್ದಲ್ಲ ಎಂದು ತನ್ವೀರ್ ಸೇಠ್ ತಿಳಿಸಿದರು.
ಮೈಸೂರಿನಲ್ಲಿ ಡ್ರಗ್ ಪತ್ತೆಹಚ್ಚಲು ಮಹಾರಾಷ್ಟ್ರದ ಪೊಲೀಸರು ಬರಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ತನ್ವೀರ್ ಸೇಠ್, ನೋಡಿ ನಮ್ಮ ಬೆನ್ನು ನಮಗೆ ಕಾಣಲ್ಲ ಮಹಾರಾಷ್ಟ್ರ ಪೊಲೀಸರಿಗೆ ದಸ್ತಗಿರಿ ಮಾಡಿದ ವ್ಯಕ್ತಿಯಿಂದ ಮಾಹಿತಿ ಸಿಕ್ಕಿದ್ದು. ಅವರಿಗೇನು ಕನಸುಬಿದ್ದು ಮೈಸೂರಿಗೆ ಬಂದಿಲ್ಲ. ಆಡಳಿತದಲ್ಲಿ ಲೋಪ ಆಗಿದೆ ಅದನ್ನ ಒಪ್ಪೋಣ ಇಂಟಲಿಜಂನ್ಸ್ ಪೊಲೀಸರ ಫೇಲ್ಯೂರ್ ಇದಕ್ಕೆ ಕಾರಣ. ಎಲ್ಲಾ ಕಾಲದಲ್ಲೂ ಅದೇ ಪೊಲೀಸ್ ವ್ಯವಸ್ಥೆ ಇತ್ತು ಎನ್ನೋದನ್ನ ಮರೆಯಬಾರದು. ಒಪ್ಪುವ ವಿಚಾರ ಒಪ್ಪೋಣ ಇಲ್ಲವಾದ ವಿಚಾರ ಒಪ್ಪುವುದಿಲ್ಲ ಅಷ್ಟೇ .ಸುರಕ್ಷತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಜಾಗೃತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸತ್ ನಲ್ಲಿ ಸಂಸದ ಯದುವೀರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಅಲ್ಲಿ ಮಾತನಾಡುವುದರಿಂದ ಸಂಸತ್ ಏನು ಮಾಡುತ್ತೆ..? ಚುನಾವಣೆಯಿಂದ ಗೆದ್ದು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ನಾವೇನು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿಲ್ಲ. 2006, 2008, 2019ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಎಷ್ಟಿತ್ತು..? ಜನರ ತೀರ್ಪನ್ನ ಧಿಕ್ಕರಿಸಿ ಮತದಾರರಿಗೆ ಮೋಸ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಇಂತಹ ವಿಚಾರಗಳನ್ನ ಚರ್ಚೆ ಮಾಡುವ ಅಗತ್ಯ ಇಲ್ಲ. ಆಡಳಿತದಲ್ಲಿರುವ ಮುಖ್ಯಮಂತ್ರಿ ಮನೆ ಮನೆಗೆ ಹೋಗಿ ನಿಲ್ಲಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಲೋಪ ಆಗಿದ್ರೆ ಸರಿಮಾಡುವುದನ್ನ ನೋಡೋಣ ಅದು ಬಿಟ್ಟು ಬೇರೆ ರೀತಿ ಮಾತುಗಳು ಬೇಡ ಎಂದು ತನ್ವೀರ್ ಸೇಠ್ ಹೇಳಿದರು.
Key words: Drugs, detection, police system, failure, MLA, Tanveer sait
The post ಡ್ರಗ್ಸ್ ಪತ್ತೆ ವಿಚಾರ: ಇಂಟಲಿಜನ್ಸ್, ಪೊಲೀಸ್ ವ್ಯವಸ್ಥೆ ವಿಫಲತೆ ಕಾಣ್ತಿದೆ – ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.