16
February, 2026

A News 365Times Venture

16
Monday
February, 2026

A News 365Times Venture

ದೇಶ ಕಂಡ ಅಪ್ರತಿಮ ನಾಯಕ ಎಸ್.ನಿಜಲಿಂಗಪ್ಪ: ಅವರ ಸೇವೆ ನಮಗೆ ಆದರ್ಶ: ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು, ಆಗಸ್ಟ್, 8 ,2025 (www.justkannada.in):  ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ದೇಶಕ್ಕೆ ಮಾಡಿದ ಸೇವೆ ನಮಗೆ ಆದರ್ಶ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ರಾಜ್ಯದ ಸೇವೆಯನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು  ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್ ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಅವಿಭಜಿತ ಕಾಂಗ್ರೆಸ್ ನ ಎಐಸಿಸಿ ಅಧ್ಯಕ್ಷರಾಗಿದ್ದವರು. ಪ್ರತಿ ವರ್ಷ ಅವರ ಜನ್ಮದಿನ ಹಾಗೂ ಪುಣ್ಯತಿಥಿಯಂದು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸರ್ಕಾರ ಸಲ್ಲಿಸುತ್ತಾ ಬಂದಿದೆ ಎಂದರು.

ದೇಶ ಕಂಡ ಅಪ್ರತಿಮ ನಾಯಕರು

ನಿಜಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶ ಕಂಡ ಅಪ್ರತಿಮ ನಾಯಕರು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾದರು. ಏಕೀಕರಣದ ಹೋರಾಟದಲ್ಲಿ ಭಾಗವಹಿಸಿ,   ಕರ್ನಾಟಕದ ಏಕೀಕರಣದ ನಂತರ ಮೊದಲನೇ ಮುಖ್ಯಮಂತ್ರಿಗಳಾದರು. ಜನಪರ  ಕಾಳಜಿಯಿದ್ದ ಮುಖ್ಯಮಂತ್ರಿಗಳು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಮಾಣಿಕ ರಾಜಕಾರಣಿ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.

Key words: S. Nijalingappa, unparalleled leader, CM, Siddaramaiah

The post ದೇಶ ಕಂಡ ಅಪ್ರತಿಮ ನಾಯಕ ಎಸ್.ನಿಜಲಿಂಗಪ್ಪ: ಅವರ ಸೇವೆ ನಮಗೆ ಆದರ್ಶ: ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಿಕೆಶಿ ಬಂಡೆ ಅಲ್ಲ, ರೈಲ್ವೆ ಇಂಜಿನ್: ಎಲ್ಲರನ್ನೂ ಎಳೆದುಕೊಂಡು ಹೋಗ್ತಿದ್ದಾರೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಫೆಬ್ರವರಿ,16,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಬಂಡೆ ಅಲ್ಲ, ರೈಲ್ವೆ ಇಂಜಿನ್...

ಕೃತಕ ಬುದ್ದಿಮತ್ತೆ ಅಂದ್ರೆ ರೈತರ ನಿರ್ಧಾರ ಶಕ್ತಿಯನ್ನು ಬಲಪಡಿಸುವ ತಂತ್ರಜ್ಞಾನ – ಡಾ. ಕೆ. ಎಂ. ಹರಿಣಿ ಕುಮಾರ್

ಮೈಸೂರು,ಫೆಬ್ರವರಿ,16,2026 (www.justkannada.in): ಕೃಷಿಯ ಭವಿಷ್ಯವನ್ನು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ಮೂಲಕ...

ನಾನು ಆಕಸ್ಮಿಕವಾಗಿ 2 ಬಾರಿ ಸಿಎಂ ಆಗಿದ್ದೆ: ನನ್ನ ಯೋಜನೆಗಳಿಗೆ ಎಂದೂ ಜಾಹೀರಾತು ನೀಡಿಲ್ಲ- ಕೇಂದ್ರ ಸಚಿವ HDK

ತುಮಕೂರು,ಫೆಬ್ರವರಿ,16,2026 (www.justkannada.in):  ನಾನು ರಾಜ್ಯದಲ್ಲಿ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೆ. ಆದರೆ...

ವಸೂಲಿಗಿಳಿದಿರುವ ಯತೀಂದ್ರಗೆ ತರಬೇತಿ ಕೊಡುವ ಮಾಸ್ಟರ್ ನಮ್ಮವನೇ- ಶಾಸಕ ಯತ್ನಾಳ್

ವಿಜಯಪುರ,ಫೆಬ್ರವರಿ,16,2026 (www.justkannada.in):  ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ವಸೂಲಿಗಿಳಿದಿದ್ದು ಯತೀಂದ್ರಗೆ ತರಬೇತಿ...