ಧರ್ಮಸ್ಥಳ,ಜುಲೈ,31,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ದೂರುದಾರ ಗುರುತಿಸಿದ 6 ನೇ ಪಾಯಿಂಟ್ ನಲ್ಲಿ 2 ಮೂಳೆಗಳು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. 2 ಎಲುಬುಗಳು ಸಿಕ್ಕ ಬಗ್ಗೆ ಎಸ್ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೆಚ್ಚಿನ ಆಳ ತೆಗೆಯಲು ಮುಂದಾಗಿದ್ದಾರೆ.
ಮೂಳೆ ಸಿಕ್ಕ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ಅಗೆಯಲಾಗುತ್ತಿದ್ದು, ಎಸ್ ಐಟಿ ತಂಡದ ಅಧಿಕಾರಿಗಳು ಮೂಳೆ ಸಿಕ್ಕ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜಿಪಿಎಸ್ ಆನ್ ಮಾಡಿಕೊಂಡು ರಿಪೋರ್ಟ್ ದಾಖಲು ಮಾಡಿಕೊಂಡಿದ್ದಾರೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ಆದರೆ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.
Key words: Dharmasthala, bodies, buried, Case, Skeleton bones, discovered
The post ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಕೇಸ್: ಅಸ್ಥಿಪಂಜರದ ಮೂಳೆಗಳು ಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.