ಬೆಂಗಳೂರು,ಜುಲೈ,24,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ ಐಟಿ ರಚನೆ ಮಾಡಿದ್ದು IPS ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ಬಗ್ಗೆ ಅಧಿಕೃತವಾಗಿ ಅವರು ನನಗೆ ಮಾಹಿತಿ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅನ್ ಅಫೀಷಿಯಲ್ ಅವರು ಪತ್ರ ಬರೆದಿದ್ದಾರೆ. ಹೊರಗುಳಿಯುವ ಬಗ್ಗೆ ಅದರಲ್ಲಿ ಹೇಳಿದ್ದಾರಂತೆ. ಅವರನ್ನ ತಂಡದಿಂದ ರೀಪ್ಲೇಸ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಆಂಧ್ರದಲ್ಲಿ ಬಿಜೆಪಿ ಮುಖಂಡರ ಹತ್ಯೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಆಂಧ್ರದವರು ಇದರ ತನಿಖೆ ಮಾಡುತಿದ್ದಾರೆ. ಹತ್ಯೆಯಾದವರು ನಮ್ಮ ರಾಜ್ಯದವರು. ಆಂಧ್ರ ಪೊಲೀಸರು ಇಲ್ಲಿಗೂ ಬಂದು ತನಿಖೆ ಮಾಡುತ್ತಾರೆ. ನಮ್ಮ ಪೊಲೀಸರು ಫಾಲೋ ಅಪ್ ಮಾಡುತ್ತಾರೆ. ಆಂಧ್ರದಲ್ಲಿ ಹತ್ಯೆಯಾಗಿರುವ ಕಾರಣ ಅಲ್ಲಿನ ಪೊಲೀಸರೇ ತನಿಖೆ ಮಾಡುತ್ತಾರೆ. ಅವರಿಗೆ ನಮ್ಮವರು ಸಹಕಾರ ಕೊಡುತ್ತಾರೆ ಎಂದರು.
ಜಾತಿ ಜನಗಣತಿಗೆ ತಾಂತ್ರಿಕವಾಗಿ 16 ದಿನಗಳಲ್ಲಿ ಸಮೀಕ್ಷೆ
ಮರು ಜಾತಿ ಜನಗಣತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್, ತಾಂತ್ರಿಕವಾಗಿ 16 ದಿನಗಳಲ್ಲಿ ಸಮೀಕ್ಷೆ ಮಾಡಬಹುದು. ಈಗೆಲ್ಲ ತಂತ್ರಜ್ಞಾನ ಇದೆ, ಸಮೀಕ್ಷೆ ಮಾಡಬಹುದು. ಕೇಂದ್ರ, ರಾಜ್ಯದ ಸಮೀಕ್ಷೆಯಿಂದ ಸಂಘರ್ಷವಿಲ್ಲ. ನಮ್ಮ ರಾಜ್ಯದ ಮಟ್ಟಿಗೆ ನಾವು ಮಾಡುತ್ತೇವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿ ತಿಳಿಯಲು ಸಮೀಕ್ಷೆ ಮಾಡುತ್ತೇವೆ. ತಂತ್ರಜ್ಞಾನ ಬಳಸಿ ಬೇಗ ಸಮೀಕ್ಷೆ ಮಾಡಬಹುದು ಎಂದು ತಿಳಿಸಿದರು.
Key words: Dharmasthala case, IPS officer, investigation, Home Minister, Parameshwar
The post ಧರ್ಮಸ್ಥಳ ಕೇಸ್ :ತನಿಖೆಯಿಂದ ಹೊರಗುಳಿಯುವ ಬಗ್ಗೆ IPS ಅಧಿಕಾರಿ ಅಧಿಕೃತ ಮಾಹಿತಿ ನೀಡಿಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.