30
March, 2026

A News 365Times Venture

30
Monday
March, 2026

A News 365Times Venture

ನಂಜನಗೂಡು ರಥೋತ್ಸವದಲ್ಲಿ ಕಾಲ್ತುಳಿತ: ತಂದೆ ಮಗನ ಸ್ಥಿತಿ ಚಿಂತಾಜನಕ

Date:

ಮೈಸೂರು,ಮಾರ್ಚ್,30,2026 (www.justkannada.in):  ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರಸಿದ್ಧ ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು ತಂದೆ ಮಗನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಂಜನಗೂಡಿನ ಶ್ರೀರಾಂಪುರ ಬಡಾವಣೆಯ ರಂಗಯ್ಯ ನ  ಮಗ ರಂಗಸ್ವಾಮಿ 52 ವರ್ಷ ಮತ್ತು ಆತನ ಪುತ್ರ ಅಪ್ಪು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪಂಚ ಮಹಾರಥೋತ್ಸವ ಸಾಗುವ ಸಂದರ್ಭದಲ್ಲಿಈ ಅವಘಡ ಸಂಭವಿಸಿದ್ದು, ಭಾರಿ ಭಕ್ತ ಸಮೂಹದ ಮಧ್ಯ ಸಿಲುಕಿ ಮಗನಿಗೆ ಕಾಲು ಮುರಿದರೇ ತಂದೆಯ ಸ್ಥಿತಿ ಚಿಂತಾಜನಕವಾಗಿದೆ

ಗಾಯಗೊಂಡವರಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಲಾಗಿದೆ.  1999 ರಲ್ಲಿ ರಥದ ಚಕ್ರಕ್ಕೆ ಸಿಲುಕಿ ಒಬ್ಬ ಮೃತಪಟ್ಟು ಮೂವರು ಕಾಲು ಕಳೆದುಕೊಂಡಿದ್ದರು. ಇಂದು ನಡೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಕಾಲ್ತುಳಿತದಿಂದ ಅಪ್ಪ ಮಗ ಸಿಲುಕಿ ಮತ್ತೆ ಅವಘಡಕ್ಕೆ ಕಾರಣವಾಗಿದೆ.

Key words: Nanjangud, Ratostava, Stampede, Father, son, condition

The post ನಂಜನಗೂಡು ರಥೋತ್ಸವದಲ್ಲಿ ಕಾಲ್ತುಳಿತ: ತಂದೆ ಮಗನ ಸ್ಥಿತಿ ಚಿಂತಾಜನಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಾಸಕರಿಗೆ 3 IPL ಟಿಕೆಟ್ ಕೊಡಲು ಕೆಎಸ್ ಸಿಎ ಒಪ್ಪಿಗೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು ,ಮಾರ್ಚ್,30,2026 (www.justkannada.in):  ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ  ಜನರಿಂದ ಟೀಕೆಗೆ...

ಯತ್ನಾಳ್ ಮರಳಿ ಬಿಜೆಪಿ ಸೇರಲು ಉಪಚುನಾವಣೆ ಒಳ್ಳೆಯ ಅವಕಾಶ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಮಾರ್ಚ್,30,2026 (www.justkannada.in):  ಬಿಜೆಪಿ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಗೆ ಮಾತೃ ವಿಯೋಗ

ಬೆಂಗಳೂರು,ಮಾರ್ಚ್,30,2026 (www.justkannada.in):  ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ...

ಇಂದಿನಿಂದ 5 ದಿನ ಮಳೆ ಸಾಧ್ಯತೆ: ಹವಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು,ಮಾರ್ಚ್,30,2026 (www.justkannada.in):  ಇಂದಿನಿಂದ ಐದು ದಿನಗಳ ಕಾಲ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ...