ಮೈಸೂರು, ಫೆಬ್ರವರಿ,24,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ಖಂಡಿಸಿ ನಾವು ನಡೆಸಲು ಮುಂದಾಗಿರುವ ನಮ್ಮ ಹೋರಾಟವನ್ನು ಹತ್ತಿಕ್ಕಲು ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಾವು ಯಾವುದಕ್ಕೂ ಹೆದರಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಅಶೋಕ್, ಮುಸ್ಲೀಮರ ಓಲೈಕೆಯಷ್ಟೆ ಕಾಂಗ್ರೆಸ್ ಉದ್ದೇಶ . ನಮಗೆ ಮತ ಹಾಕಿ ನೀವು ಏನು ಬೇಕಾದರೂ ಮಾಡಿ. ಇದು ಕಾಂಗ್ರೆಸ್ ಸರ್ಕಾರದ ಸ್ಲೋಗನ್. ಮುಸ್ಲೀಂ ಮತಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಬಂದಾಗ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಈ ಸರ್ಕರ ಕಿತ್ತು ಒಗೆಯುವುದೇ ನಮ್ಮ ಉದ್ದೇಶ ಎಂದು ಆರ್.ಅಶೋಕ್ ತಿಳಿಸಿದರು.
Key words: udayagiri, roit case, Mysore, R. Ashok
The post ನಮ್ಮ ಹೋರಾಟ ಹತ್ತಿಕ್ಕಲು ಮೈಸೂರಿನಲ್ಲಿ ನಿಷೇಧಾಜ್ಞೆ: ನಾವು ಯಾವುದಕ್ಕೂ ಹೆದರಲ್ಲ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




