31
March, 2026

A News 365Times Venture

31
Tuesday
March, 2026

A News 365Times Venture

ಪೊಲೀಸರ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ವಿದೇಶಿ ಪ್ರಜೆ ಬಂಧನ

Date:

ಬೆಂಗಳೂರು,ಮಾರ್ಚ್,31,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ವಿರುದ್ದ ಪೊಲೀಸರ ಕಾರ್ಯಚರಣೆ ಮುಂದುವರೆದಿದ್ದು ಇದೀಗ ಯಲಹಂಕ ಠಾಣಾ ಪೊಲೀಸರು, ಸುಮಾರು 2 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ನೈಜೀರಿಯಾ ಮೂಲದ ಪ್ರಜೆಯನ್ನ ಬಂಧಿಸಿದ್ದಾರೆ.

ಮಾದಕ ವಸ್ತುಗಳ ಜಾಲದ ವಿರುದ್ಧ ಬೆಂಗಳೂರು ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು  ಯಲಹಂಕ ಪೊಲೀಸರು 2 ಕೆಜಿ ಎಂಡಿಎಂಎ (MDMA) ಕ್ರಿಸ್ಟಲ್ಸ್ ಜಪ್ತಿ ಮಾಡಿ ನೈಜೀರಿಯಾ ಮೂಲದ ಪೆಡ್ಲರ್ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸ್ಯಾಮುಯೆಲ್ ಇಕ್ಕೆನಾ 2012ರಲ್ಲಿ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ದೆಹಲಿ ಮತ್ತು ಮುಂಬೈನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ, ಕಳೆದ ವರ್ಷ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಬಟ್ಟೆ ವ್ಯಾಪಾರ ಮಾಡುವುದು ಕೇವಲ ನೆಪವಾಗಿದ್ದು, ಅದರ ಮರೆಯಲ್ಲಿ ಈತ ದೊಡ್ಡ ಮಟ್ಟದ ಡ್ರಗ್ ನೆಟ್‌ವರ್ಕ್ ನಡೆಸುತ್ತಿದ್ದ ಎನ್ನಲಾಗಿದೆ. ಬನ್ನೇರುಘಟ್ಟ ಬಳಿ ಕೇವಲ 50 ಸಾವಿರ ರೂ.ಗೆ ಡ್ರಗ್ಸ್ ಖರೀದಿಸಿ, ಅದನ್ನು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

Key words: Bangalore, Police raid, Drugs, worth, Rs 2 crore, seized

The post ಪೊಲೀಸರ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ವಿದೇಶಿ ಪ್ರಜೆ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜನಗಣತಿ–2027: ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ

ಮೈಸೂರು, ಮಾರ್ಚ್,31,2026 (www.justkannada.in): ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್...

KSOU: ಏ.2 ರಂದು IAS, KAS ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ಮೈಸೂರು,ಮಾರ್ಚ್,31,2026 (www.justkannda.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ...

ಬಾಗಲಕೋಟೆಯಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ -ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಮಾರ್ಚ್,31,2026 (www.justkannada.in):  ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...

ಉಜ್ವಲ ಹೋಯ್ತು, ಈಗ ಸೌದೆ ಯೋಜನೆ ಸ್ಟಾರ್ಟ್ ಮಾಡಿದ್ದಾರೆ- ಡಿಸಿಎಂ ಡಿಕೆಶಿ ಟೀಕೆ

ಬೆಂಗಳೂರು,ಮಾರ್ಚ್,31,2026 (www.justkannada.in):  ಗ್ಯಾಸ್ ಸಿಲಿಂಡರ್ ಸಿಗದ ಹೋಟೆಲ್ ನವರು ಪರದಾಡುತ್ತಿದ್ದಾರೆ. ಕೇಂದ್ರ...