9
June, 2026

A News 365Times Venture

9
Tuesday
June, 2026

A News 365Times Venture

ಭರ್ಜರಿ ಕಾರ್ಯಚರಣೆ: 41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು

Date:

ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರದ ವಿವಿಧ ಠಾಣಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳೆದ ಮೂರು ತಿಂಗಳಲ್ಲಿ  41ಸ್ವತ್ತು ಕಳುವು ಮತ್ತು 3 ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ನಗರ ಪೊಲೀಸ್ ಘಟಕದಿಂದ ಕಳೆದ 03 ತಿಂಗಳುಗಳಲ್ಲಿ ಒಂದು ದರೋಡೆ ಸಂಚು, ಎರಡು ಸುಲಿಗೆ, 10 ಕನ್ನ ಕಳುವು, 9 ಮನೆ ಕಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ. 10 ವಾಹನ ಕಳ್ಳತನ. 05 ಸಾಮಾನ್ಯ ಕಳ್ಳತನ. ಹಾಗೂ 3ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಸದರಿ ಪ್ರಕರಣಗಳಿಂದ ಒಟ್ಟು ರೂ. 2.09,37,645  ಮೌಲ್ಯದ 1 ಕೆ.ಜಿ 578 ಗ್ರಾಂ, 743 ಮಿಲಿ ಚಿನ್ನಾಭರಣ. 3 ಕೆ.ಜಿ 578 ಗ್ರಾಂ ಬೆಳ್ಳಿ 2.76.786/- ನಗದು ಹಾಗೂ ಇತರೇ ಮಾಲುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಈ ಪ್ರಕರಣಗಳಲ್ಲಿ ಒಟ್ಟು 55 ಜನ ಆರೋಪಿಗಳನ್ನು ದಸ್ತಗಿರಿ  ಮಾಡಲಾಗಿದೆ  ಮೈಸೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

ಪ್ರಮುಖ ಪತ್ತೆ ಕಾರ್ಯಗಳ ವಿವರ ಹೀಗಿದೆ..

1) ಮಂಡಿ ಠಾಣಾ ಪೊಲೀಸರು ಇಬ್ಬರು ಆರೋಪಿಯನ್ನು ದಸ್ತಗಿರಿ ಮಾಡಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 90 ಲಕ್ಷ ಮೌಲ್ಯದ ಒಟ್ಟು 660 ಗ್ರಾಂ ಚಿನ್ನದ ಗಟ್ಟಿಯನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

2) ವಿಜಯನಗರ ಪೊಲೀಸ್ ಠಾಣಾ ಪೊಲೀಸರು 2 ಆರೋಪಿಗಳನ್ನು ಬಂಧಿಸಿ. 2 ಮನೆ ಕೆಲಸದವರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 23.50.000/-ರೂ ಮೌಲ್ಯದ 170 ಗ್ರಾಂ ಚಿನ್ನಾಭರಣ ಮತ್ತು ಗಾರ್ಮೆಂಟ್ಸ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

3) ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 3 ಕನ್ನಕಳುವು. 1 ಮನೆಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 21,00,000/-ರೂ ಮೌಲ್ಯದ 173 ಗ್ರಾಂ 260 ಮಿಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಜೊತೆಗೆ 1 ವಂಚನೆ ಪ್ರಕರಣ ಪತ್ತೆ ಮಾಡಿ 4 ಆರೋಪಿಗಳನ್ನು ವಶಕ್ಕೆ ಪಡೆದು ರೂ. 2,74,000/- ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

4) ಸರಸ್ವತಿಪುರಂ ಠಾಣಾ ಪೊಲೀಸರು 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, 4-ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 18,40,000/-ರೂ ಮೌಲ್ಯದ 143 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

5) ಲಷ್ಕರ್ ಠಾಣಾ ಪೊಲೀಸರು 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 3 ಸಾಮಾನ್ಯ ಕಳುವು, 1 ಮನೆ ಕೆಲಸದವರಿಂದ ಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 11,45000/- ರೂ ಮೌಲ್ಯದ 202 ಗ್ರಾಂ ಚಿನ್ನಾಭರಣಗಳು 196 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

6) ನಜರ್‌ ಬಾದ್ ಠಾಣಾ ಪೊಲೀಸರು 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1ದೇವಸ್ಥಾನ ಕನ್ನಕಳುವು, 1 ವಂಚನೆ ಪ್ರಕರಣ ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡಿ 9.25,000/-ರೂ ಮೌಲ್ಯದ 43 ಗ್ರಾಂ ಚಿನ್ನಾಭರಣ ಮತ್ತು 1ಕೆಜಿ 250ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

7) ಮೇಟಗಳ್ಳಿ ಠಾಣಾ ಪೊಲೀಸರು 13 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 5 ದ್ವಿಚಕ್ರ ವಾಹನ ಕಳ್ಳತನ. 2 ಕನ್ನಕಳುವು, 2 ಮನೆಕಳುವು. 1 ಸಾಮಾನ್ಯ ಕಳುವು ಒಟ್ಟು 10 ಪ್ರಕರಣಗಳನ್ನು ಪತ್ತೆ ಮಾಡಿ 8,22,645/-ರೂ ಮೌಲ್ಯದ 20.900ಗ್ರಾಂ ಚಿನ್ನಾಭರಣ, 496 ಗ್ರಾಂ ಬೆಳ್ಳಿ ಪದಾರ್ಥಗಳು, 5 ದ್ವಿಚಕ್ರ ವಾಹನಗಳು, 2786/- ನಗದು ಹಣ ಮತ್ತು ವಿದ್ಯುತ್ ವೈರ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

8) ಉದಯಗಿರಿ ಠಾಣಾ ಪೊಲೀಸರು 5ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1- ಕನ್ನಕಳುವು. 1-ವಾಹನ ಕಳುವು 1- ಮನೆಕಳ್ಳತನ ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡಿ 5.45.000/-ರೂ ಮೌಲ್ಯದ 54 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಂಡಿರುತ್ತಾರೆ.

9) ಕೃಷ್ಣರಾಜ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1-ರಾತ್ರಿ ಕನ್ನಕಳುವು ಪ್ರಕರಣವನ್ನು ಪತ್ತೆ ಮಾಡಿ 4,65,000/-ರೂ ಮೌಲ್ಯದ 33.730 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

10) ಕುವೆಂಪುನಗರ ಠಾಣಾ ಪೊಲೀಸರು 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1 ಮನೆಕಳ್ಳತನ. 2 ಕನ್ನಕಳುವು ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡಿ 4.10.000/-ರೂ ಮೌಲ್ಯದ 30 ಗ್ರಾಂ ಚಿನ್ನ ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

11) ಲಕ್ಷ್ಮೀಪುರಂ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1 ಸುಲಿಗೆ ಪ್ರಕರಣ ಪತ್ತೆ ಮಾಡಿ 3,55,000/-ರೂ ಮೌಲ್ಯದ 32.150 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

12) ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1 ಸಾಮಾನ್ಯ ಕಳುವು ಪ್ರಕರಣವನ್ನು ಪತ್ತೆ ಮಾಡಿ 3 ಲಕ್ಷ ಮೌಲ್ಯದ 1576 ಗ್ರಾಂ ಬೆಳ್ಳಿ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.

13) ಹೆಬ್ಬಾಳ್‌ ಠಾಣಾ ಪೊಲೀಸರು 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1- ದರೋಡೆ ಸಂಚು, 1- ಸುಲಿಗೆ ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡಿ ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1,43,000/-ರೂ ಮೌಲ್ಯದ 1 ಮೊಬೈಲ್, 5ಗ್ರಾಂ ತೂಕದ ಚಿನ್ನದ ಉಂಗುರ, 60 ಗ್ರಾಂ ಬೆಳ್ಳಿ ಚೈನ್ ಮತ್ತು 1 ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ.

ಉಳಿದಂತೆ ವಿ.ವಿ.ಪುರಂ ಠಾಣಾ ಪೊಲೀಸರು ಒಬ್ಬ ಆರೋಪಿತೆಯನ್ನು ದಸ್ತಗಿರಿ ಮಾಡಿ 1 ಮನೆ ಕೆಲಸದವರಿಂದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 90,000/-ರೂ ಮೌಲ್ಯದ 11.700 ಗ್ರಾಂ ಚಿನ್ನಭರಣವನ್ನು ವಶಪಡಿಸಿಕೊಂಡಿದ್ದಾರೆ. ದೇವರಾಜ ಠಾಣಾ ಪೊಲೀಸರು 03 ಆರೋಪಿಗಳನ್ನು ದಸ್ತಗಿರಿ ಮಾಡಿ 3 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 1,48,000/-ರೂ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನರಸಿಂಹರಾಜ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 1 ವಾಹನ ಕಳುವು ಪ್ರಕರಣ ಪತ್ತೆ ಮಾಡಿ 25,000/ ರೂ ಮೌಲ್ಯದ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೈಸೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Key words: Mysore Police, crack, 41 property theft, 2 fraud, cases

The post ಭರ್ಜರಿ ಕಾರ್ಯಚರಣೆ: 41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ

ಮೈಸೂರು, ಜೂನ್,8,2026 (www.justkannada.in): ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು  ಮೈಸೂರು...

KPCC ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,8,2026 (www.justkannada.in): ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ನನ್ನ ಬೇಡಿಕೆ ಇದ್ದಿದ್ದು ನಿಜ....

13 ಸಚಿವರಿಗೆ ಕೊಠಡಿಗಳ ಹಂಚಿಕೆ: ರಾಮಲಿಂಗಾರೆಡ್ಡಿ ಅವರಿಗೆ ಬಂಪರ್

ಬೆಂಗಳೂರು, ಜೂನ್,8,2026 (www.justkannada.in): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ನೂತನ...

ಶಾಸಕರ ಕಚೇರಿ ಎಡವಟ್ಟು: ಸಂತಾಪ ಸೂಚಿಸುವ ಪೋಸ್ಟರ್‌ನಲ್ಲಿ ಪ್ರಮಾದ..?

  ಬೆಂಗಳೂರು, ಜೂ.೦೮,೨೦೨೬: ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ...