12
March, 2026

A News 365Times Venture

12
Thursday
March, 2026

A News 365Times Venture

ಮಕ್ಕಳಾಗಲಿಲ್ಲ ಎಂದು ಮಹಿಳೆ ಭೀಕರ ಕೊಲೆ : ಪತಿ, ಅತ್ತೆ, ಮಾವ ಅರೆಸ್ಟ್

Date:

ಚಿಕ್ಕೋಡಿ,ಮೇ,19,2025 (www.justkannada.in): ಮಕ್ಕಳಾಗಲಿಲ್ಲ ಎಂದು ಮಹಿಳೆಯನ್ನ ಭೀಕರ ಕೊಲೆ  ಮಾಡಿರುವ ಘಟನೆ ಅಥಣಿ ತಾಲೂಕಿನ ಮಲಬಾದ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಸಂತೋಷ್ ಹೊನಕಾಂಡೆ (27) ಕೊಲೆಯಾದ ಮಹಿಳೆ. ಕೊಲೆಯಲ್ಲ ಬೈಕ್ ಅಪಘಾತವೆಂದು ಬಿಂಬಿಸಿಸಲು ಹೋದ ಈಕೆಯ ಪತಿ, ಅತ್ತೆ, ಮಾವನನ್ನು ಪೊಲೀಸರು ಬಂಧಿಸಿದ್ದಾರೆ.  ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ, ಅತ್ತೆ ಜಯಶ್ರೀ ಬಂಧಿತರು.

ಮೊನ್ನೆ ತಡರಾತ್ರಿ ರೇಣುಕಾರನ್ನು ಬೈಕ್ ಮೇಲೆ ಕರೆದೋಯ್ದು ಕಲ್ಲಿನಿಂದ ಜಜ್ಜಿ, ಸೀರೆಯಿಂದ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ.  ಬಳಿಕ ಬೈಕ್ ನಿಂದ ಶವ ಎಸೆದೊಯ್ದು ಬೈಕ್ ಮೇಲಿಂದ ಬಿದ್ದು ಸಾವು, ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಪತಿ, ಮಾವ, ಅತ್ತೆ ಮಂದಾಗಿದ್ದರು.

ಆದರೆ ಪೊಲೀಸರಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾಗಿ 5 ವರ್ಷ ಆದರೂ ಮಕ್ಕಳಾಗಲಿಲ್ಲ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Woman,  murdered, Husband, arrested

The post ಮಕ್ಕಳಾಗಲಿಲ್ಲ ಎಂದು ಮಹಿಳೆ ಭೀಕರ ಕೊಲೆ : ಪತಿ, ಅತ್ತೆ, ಮಾವ ಅರೆಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾರವಾರದ ಬದಲು ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ: ಸಚಿವರ ಉತ್ತರವಿದು.

ಬೆಂಗಳೂರು,ಮಾರ್ಚ್,12,2026 (www.justkannada.in): ಕಾರವಾರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉತ್ತರ...

ಜಲ ಜೀವನ್‌ ಮಿಷನ್‌ಗೆ ಕಾಯಕಲ್ಪ, 2028 ರವರೆಗೆ ವಿಸ್ತರಿಸಿದ್ದು ಸ್ವಾಗತಾರ್ಹ-ಸಂಸದ ಯದುವೀರ್

ಮೈಸೂರು, ಮಾರ್ಚ್, 12,2026 (www.justkannada.in): ಜಲ ಜೀವನ್ ಮಿಷನ್ (JJM) 2.0...

ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರು ಅಂದರ್

ಮೈಸೂರು,ಮಾರ್ಚ್,12,2026 (www.justkannada.in): ಸುಮಾರು 15 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳ್ಳತನ ಮಾಡಿದ್ದ...

LPG ಉತ್ಪಾದನೆ ಶೇ. 28ರಷ್ಟು ಹೆಚ್ಚಳ: ಪೂರೈಕೆಯಲ್ಲಿ ವ್ಯತ್ಯಯವಿಲ್ಲ- ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ನವದೆಹಲಿ ,ಮಾರ್ಚ್,12,2026 (www.justkannada.in):  ಕಳೆದ 5 ದಿನಗಳಲ್ಲಿ ಎಲ್ ಪಿಜಿ ಉತ್ಪಾದನೆ...