13
February, 2026

A News 365Times Venture

13
Friday
February, 2026

A News 365Times Venture

ಮಹಿಳೆ ಮೇಲೆ ಹಲ್ಲೆ ವಿವಸ್ತ್ರಗೊಳಿಸಿದ ಕೇಸ್ : ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

Date:

ಬೆಳಗಾವಿ,ಫೆಬ್ರವರಿ,4,2026 (www.justkannada.in):  ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲೆ ಅಮಾನವೀಯ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  12 ಮಂದಿ ಆರೋಪಿಗಳಿಗೆ  5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬೆಳಗಾವಿಯ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹೆಚ್ ಎಸ್ ಮಂಜುನಾಥ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.  12 ಅಪರಾಧಿಗಳಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಪ್ರತಿ ಸೆಕ್ಷನ್ ಗೂ ಒಂದೊಂದು ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ದೋಷಿಗಳಾದ ಬಸಪ್ಪನಾಯಕ, ರಾಜನಾಯಕ, ಕೆಂಪಣ್ಣ ನಾಯಕ,  ಪಾರ್ವತಿ ನಾಯಕ, ಯಲ್ಲವ್ವ ನಾಯಕ, ಲಕ್ಕಪ್ಪ ನಾಯಕ, ಸಂಗೀತಾ, ಹೆಗ್ಗಾ ನಾಯಕ, ಸಂತೋಷ ನಾಯಕ, ಶೋಭಾ ನಾಯಕ ,ಲಕ್ಕವ್ವ ನಾಯಕ, ಶಿವಪ್ಪಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

2023 ಡಿ 10 ರಂದು ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಈ ಘಟನೆ  ನಡೆದಿತ್ತು. ಯುವಕನೊಬ್ಬ ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯ ಕುಟುಂಬದವರು ಯುವಕನ ತಾಯಿಯ ಮೇಲೆ ಅಮಾನವೀಯವಾಗಿ ದಾಳಿ ಮಾಡಿ ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Key words: Woman, assaulted, Court, sentences, accused

The post ಮಹಿಳೆ ಮೇಲೆ ಹಲ್ಲೆ ವಿವಸ್ತ್ರಗೊಳಿಸಿದ ಕೇಸ್ : ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ವರ್ಗಾವಣೆಗೆ ಸಿಎಂ ಪತ್ರ: ಶಾಸಕ ಸುನೀಲ್ ಕುಮಾರ್ ಹೊಸ ಬಾಂಬ್

ಬೆಂಗಳೂರು,ಫೆಬ್ರವರಿ,13,2026 (www.justkannada.in):  ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ  ಅಧಿಕಾರಿಯೊಬ್ಬರನ್ನು ವರ್ಗಾಯಿಸುವಂತೆ ಸಿಎಂ...

ಶಾಸಕ ಭೈರತಿ ಬಸವರಾಜು ಬಂಧನ ರಾಜಕೀಯ ಪ್ರೇರಿತ, ಷಡ್ಯಂತ್ರ- ಆರ್.ಅಶೋಕ್

ಚಿತ್ರದುರ್ಗ,ಫೆಬ್ರವರಿ,13,2026 (www.justkannada.in): ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು...

ಡಿಕೆಶಿ ದೆಹಲಿ ಪ್ರವಾಸ ಯಶಸ್ವಿ: ಸಿಎಂ ಆಗುವ ಶುಭ ಘಳಿಗೆ, ಶುಭಕಾಲ ಬಂದಿದೆ- ಕಾಂಗ್ರೆಸ್ MLC

ಬೆಳಗಾವಿ,ಫೆಬ್ರವರಿ,13,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಯಶಸ್ವಿಯಾಗಿದೆ. ಅವರು...

2028ರವರೆಗೂ ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆ- ಸಚಿವ ಜಮೀರ್ ಅಹ್ಮದ್ ಖಾನ್

ಬಳ್ಳಾರಿ,ಫೆಬ್ರವರಿ,12,2026 (www.justkannada.in):  ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ಚರ್ಚೆಯಲ್ಲಿರುವಾಗಲೇ ಡಿಸಿಎಂ ಡಿಕೆ...