11
September, 2026

A News 365Times Venture

11
Friday
September, 2026

A News 365Times Venture

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Date:

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌ ನಾಥ್ ಕೋವಿಂದ್ ಅವರ ಜೀವನಾಧಾರಿತ ಆತ್ಮಕಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು  ಬಿಡುಗಡೆ ಮಾಡಿದರು.

ರಮನಾಥ್ ಕೋವಿಂದ್ ಅವರು 2017 ರಿಂದ 2022 ರವರೆಗೆ ಭಾರತದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಮ್‌ನಾಥ್ ಕೋವಿಂದ್ ಅವರ ಆತ್ಮಕಥೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ,  ಕಾನ್‌ಪುರ ದೇಹತ್‌ ನ ಸಾಧಾರಣ ಕುಟುಂಬದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದ ರಾಮ್‌ನಾಥ್ ಕೋವಿಂದ್ ಅವರ ಜೀವನ ಯಾನವು ಭಾರತದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.  ಕೋವಿಂದ್ ಜಿ ಅವರ ಜೀವನವನ್ನು ಒಮ್ಮೆ ಗಮನಿಸಿ. ಅವರು ಕಾನ್‌ಪುರ ದೇಹತ್‌ನ ತೀರಾ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ಇಂತಹ ಆಘಾತಕಾರಿ ಘಟನೆಯಿಂದ ಯಾರು ಬೇಕಾದರೂ ಕುಗ್ಗಿಹೋಗಬಹುದು. ಆದರೆ, ಕೋವಿಂದ್ ಅವರು ಈ ನೋವಿನಿಂದಲೇ ಇನ್ನಷ್ಟು ಬಲಶಾಲಿಯಾಗಿ ಬೆಳೆದರು ಎಂದು ನುಡಿದರು.

“ಭಾರತದಂತಹ ಬೃಹತ್ ದೇಶದ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಕೋವಿಂದ್ ಜಿ ಎಂದಿಗೂ ತಮ್ಮ ಮೂಲವನ್ನು ಮರೆಯಲಿಲ್ಲ, ಅತ್ಯಂತ ವಿನಮ್ರವಾಗಿ ಉಳಿದುಕೊಂಡರು ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

Key words:  PM Modi, released , autobiography, former President, Ramnath Kovind

The post ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಸ್ತೂರಿ ರಂಗನ್ ವರದಿ: ರೈತರ ಹಿತವೇ ಮೊದಲ ಆದ್ಯತೆ: ಸಿಎಂ ಡಿ‌.ಕೆ ಶಿವಕುಮಾರ್

ಬೆಂಗಳೂರು ಸೆಪ್ಟಂಬರ್,11,2026 (www.justkannada.in): ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಚರ್ಚೆ ನಡೆಸಲು...

ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸದಲ್ಲಿ ಸಚಿವ ಎಂ.ಬಿ ಪಾಟೀಲ್ : ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಸೆಳೆಯುವ ಉದ್ದೇಶದಿಂದ ಫ್ರಾನ್ಸ್ ಮತ್ತು...

ಕೈ’ ನಾಯಕ ರಾಹುಲ್ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ,ಸೆಪ್ಟಂಬರ್,11,2026 (www.jstkannada.in); ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು...

ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್, 10,2026 (www.justkannada.in):  ತನ್ನ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ...