16
February, 2026

A News 365Times Venture

16
Monday
February, 2026

A News 365Times Venture

ಮೈಸೂರು: ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Date:

ಮೈಸೂರು,ಆಗಸ್ಟ್,9,2025 (www.justkannada.in):  ಮೈಸೂರಿನಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ  ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಸಂತೋಷದಿಂದ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದೇನೆ. ಇಷ್ಟು ವರ್ಷಗಳಾದರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಇಲ್ಲಿ ಹಿಂದೆ ದೇವರಾಜ ಅರಸು ಕಾಲದಲ್ಲಿ ಈ ಭೂಮಿಯನ್ನು ಕೊಟ್ಟಿದ್ದರು. ನಿಮ್ಮೆಲ್ಲರ ಸಹಕಾರದಿಂದ ಒಂದು ಭವ್ಯವಾದ ಕಾಂಗ್ರೆಸ್ ಭವನವನ್ನ ಆಗುತ್ತಿದೆ. ಇದಕ್ಕೆ ಹೆಚ್ಚಿನ ವಂತಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಕೋರಿದರು.

ಸ್ಥಳದಲ್ಲೇ 5 ಲಕ್ಷ ರೂ ದೇಣಿಗೆ ನೀಡಿದ ಮಾಜಿ ಶಾಸಕನ ತಂದೆ

ಇದೇ ವೇಳೆ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ತಂದೆ ಪ್ರೇಮ್ ಕುಮಾರ್  ಅವರು ಸ್ಥಳದಲ್ಲೇ 5 ಲಕ್ಷ ರೂ. ದೇಣಿಗೆ ನೀಡಿದರು. 5 ಲಕ್ಷ ರೂ ಚೆಕ್  ಅನ್ನು ಸಿಎಂ ಸಿಎಂ ಸಿದ್ದರಾಮಯ್ಯ ಕೈಗೆ ಕೊಟ್ಟರು. ಈ ವೇಳೆ ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು ಹಣ ಕೊಡಬೇಕು ಎಂದು ಪದಾಧಿಕಾರಿಗಳು, ಕಾರ್ಯಕರ್ತರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಮತ ಖರೀದಿಯಿಂದ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದರು  ಎಂಬ ಸಿಎಂ‌ ಇಬ್ರಾಹಿಂ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ನನಗೆ ಗೊತ್ತಿಲ್ಲ.ಇಬ್ರಾಹಿಂ ನಮ್ಮ ಪಕ್ಷದಲ್ಲಿ ಇಲ್ಲ.. ಆ ಸಂಧರ್ಭದಲ್ಲಿ ಇಬ್ರಾಹಿಂ ನನ್ನ ಪರವಾಗಿ ಕೆಲಸ ಮಾಡಿದ್ದರು. ಮತ ಖರೀದಿ ಮಾಡಿದ್ದರು ಎಂಬುದು ನನಗೆ ಹೊಸ ವಿಚಾರ.ಈ ಬಗ್ಗೆ ನಾನು ಕೇಳೆ ಇರಲಿಲ್ಲ. ನಾನು ಬಾದಾಮಿಗೆ ಹೋಗಿದ್ದು ಎರೆಡು ದಿನ ಮಾತ್ರ ಎಂದರು.

ಸತ್ತವರು ಕೆಟ್ಟವರು ಮತ ಹಾಕಿ ನನ್ನನ್ನು  ಗೆಲ್ಲಿಸಿದ್ರು ಎಂಬ ತಮ್ಮ ಭಾಷಣ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದು ಸಾಧ್ಯ ಇದೆಯಾ? ಸತ್ತವರು ಮತ ಹಾಕಲು ಆಗುತ್ತಾ..? ನಾನು ಆ ರೀತಿ ಮಾತೇ ಆಡಿಲ್ಲ. ಒಂದು ವೇಳೆ ಸತ್ತವರು ಕೆಟ್ಟವರಿಂದ ಮತ ಹಾಕಿಸಿಕೊಂಡಿದ್ದರೆ ಅದಕ್ಕೆ ಜವಾಬ್ದಾರಿ ಯಾರು…? ಚುನಾವಣಾ ಆಯೋಗ ಅದಕ್ಕೆ ಜವಾಬ್ದಾರಿ ಹೊರಬೇಕಿತ್ತು. ಏನಿತ್ತು ಅದನ್ನ ನೋಡ ಬೇಕಿತ್ತು ಎಂದರು.

ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್, ರವಿಶಂಕರ್, ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಟಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್  ಉಪಸ್ಥಿತರಿದ್ದರು

Key words: Mysore,  CM Siddaramaiah, construction , Indira Gandhi, Congress Bhavan

 

The post ಮೈಸೂರು: ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಶಾಸಕನ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಬೆಂಗಳೂರು, ಫೆಬ್ರವರಿ ,16,2026 (www.justkannada.in): ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ...

17 ಬಾರಿ ಬಜೆಟ್ ಮಂಡಿಸಿದ ಸಿಎಂಗೆ ಈಗ ಪ್ರವಾಸ ಬೇಕಾ? ಮಾಜಿ ಶಾಸಕ ಸಾ.ರಾ ಮಹೇಶ್ ಕಿಡಿ

ಮೈಸೂರು,ಫೆಬ್ರವರಿ,16,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿರುವ ವೇಳೆಯೇ ಕಾಂಗ್ರೆಸ್...

ಸಿಎಂ ಡಿಸಿಎಂ ಹೇಳಿದ ಮೇಲೆ ಇನ್ನೊಬ್ಬರ ಹೇಳಿಕೆಗೆ ಮಹತ್ವ ಬೇಡ-ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ,ಫೆಬ್ರವರಿ,16,2026 (www.justkannada.in):  ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ...

ಶಾಲಾ ಕಟ್ಟಡದಿಂದ ಜಿಗಿದು SSLC ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ,ಫೆಬ್ರವರಿ,16,2026 (www.justkannada.in): ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಯೊಬ್ಬ  ಶಾಲಾ ಕಟ್ಟಡದ ಮೂರನೇ ಮಹಡಿಯಿಂದ...