8
March, 2026

A News 365Times Venture

8
Sunday
March, 2026

A News 365Times Venture

ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ಸಂಗೀತ ನಿರ್ದೇಶಕ ರವಿ ಬಸ್ರೂರು

Date:

ಮೈಸೂರು, ಏಪ್ರಿಲ್,21,2025 (www.justkannada.in): ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ  ಫಿಲಂಸ್  ಅರ್ಪಿಸುತ್ತಿರುವ  ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ  ಪ್ರತೀಕವಾದ ಯಕ್ಷಗಾನ ಕಲೆಯ ಹಿನ್ನೆಲೆ, ಹಿರಿಮೆಯನ್ನು ನಾಡಿನ ಜನತೆಗೆ  ಹೇಳಲು  ಯಕ್ಷಗಾನ ಪ್ರಸಂಗ ಆಧಾರಿತ ವೀರ ಚಂದ್ರಹಾಸ ಚಿತ್ರ ರಾಜ್ಯಾದ್ಯಂತ ತೆರೆಕಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.  ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಿತ್ರತಂಡ ಭೇಟಿ ಕೊಟ್ಟಿದ್ದು ರವಿ ಬಸ್ರೂರು ಅವರು ಯಕ್ಷಗಾನ ವೇಷದಲ್ಲಿ ದೇವಿಯ ದರ್ಶನ ಪಡೆದುಕೊಂಡರು.

ನಂತರ ಮಾತನಾಡಿದ  ಚಿತ್ರದ ನಿರ್ದೇಶಕ ಹಾಗೂ  ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು  ಅವರು ವೀರ ಚಂದ್ರಹಾಸ ನನ್ನ ಸುಮಾರು ವರ್ಷಗಳ ಕನಸು, ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರವನ್ನು ನಿರ್ದೇಶನ  ಮಾಡಿದ್ದೇನೆ. ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ವೃತ್ತಿಪರ ಯಕ್ಷಗಾನ ಕಲಾವಿದರೆ ನಿರ್ವಹಿಸಿದ್ದಾರೆ, ಹಾಗಾಗಿ ಇಡಿ ಚಿತ್ರ ತುಂಬಾ ನೈಜ್ಯವಾಗಿ ಮೂಡಿಬಂದಿದ್ದು, ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವಾದಿಸಿದ್ದಾರೆ ಎಂದು ಹೇಳಿದರು.

ನಂತರ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ  ಅವಧೂತ ಅರ್ಜುನ್ ಗುರೂಜಿ ಅವರ ಆಶೀರ್ವಾದ ಪಡೆದು  ಅವರ ಜೊತೆ DRC  ಮಾಲ್ ನಲ್ಲಿ ಪ್ರೇಕ್ಷಕರ ಜೊತೆ ಚಿತ್ರ  ವೀಕ್ಷಿಸಿದರು. ಈ ಸಂದರ್ಭದಲ್ಲಿ ಚಿತ್ರತಂಡ ಹಾಗೂ  ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಸಮಾಜ ಸೇವಕರಾದ  ಜೋಗಿ ಮಂಜು, ರಿಷಿ ವಿಶ್ವಕರ್ಮ, ವಿಕ್ರಂ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: Music director, Ravi Basrur,Team, visited, Chamundi hills, Mysore

The post ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ಸಂಗೀತ ನಿರ್ದೇಶಕ ರವಿ ಬಸ್ರೂರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಾಲ ಮಾಡದೆ ಅಭಿವೃದ್ಧಿ ಆಗಲ್ಲ; ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in):  ಸಾಲದ ಬಗ್ಗೆ ಬಿಜೆಪಿಯವರು ಟೀಕೆ ಹಿನ್ನೆಲೆಯಲ್ಲಿ ಈ ಕುರಿತು...

ಕೇಂದ್ರದ ಅನ್ಯಾಯದಿಂದ ಇಷ್ಟೊಂದು ಸಾಲದ ಹೊರೆ : ಬಿಜೆಪಿ ಟೀಕೆ ಶೋಭೆ ತರಲ್ಲ- ಸಚಿವ ಪ್ರಿಯಾಂಕ್ ಖರ್ಗೆ

ಬೀದರ್,ಮಾರ್ಚ್,7,2026 (www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ಇಷ್ಟೊಂದು...

ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚಲ್ಲ- MLC ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಮಾರ್ಚ್,7,2026 (www.justkannada.in): ಟಿ.ನರಸೀಪುರದಲ್ಲಿ ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ...

LPG ಸಿಲಿಂಡರ್ ದರ ಏರಿಕೆ: ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ-ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಮಾರ್ಚ್,7,2026 (www.justkannada.in): ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ...