7
March, 2026

A News 365Times Venture

7
Saturday
March, 2026

A News 365Times Venture

ಯಾವ ಕ್ರಾಂತಿಯೂ ಆಗಲ್ಲ, ನಮ್ಮ ಸರ್ಕಾರ ಸುಭದ್ರ- ಸಚಿವ ದಿನೇಶ್ ಗುಂಡೂರಾವ್

Date:

ಮಂಗಳೂರು,ಜೂನ್,30,2025 (www.justkannada.in): ಸೆಪ್ಟಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ ಎಂದು ಕ್ರಾಂತಿಯಾಗುತ್ತೆ ಎಂದಿದ್ದ ಸಚಿವ ಕೆ.ಎನ್ ರಾಜಣ್ಣ ಹಾಗೂ ದಸರಾವನ್ನ ಹೊಸ ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕ್ರಾಂತಿ ಅಂತಹ ಪದಗಳು ಸರಿಯಲ್ಲ. ಯಾವ ಕ್ರಾಂತಿಯೂ ಆಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ.  ಬಿಜೆಪಿಯವರ ಹೇಳಿಕೆ ಗಮನಿಸಿದ್ದೇನೆ. ಮೂರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಎನ್ನುತ್ತಿದ್ದಾರೆ.  ಅದು ತಿರುಕನ  ಕನಸು. ಜನ ಬಿಜೆಪಿಗರನ್ನ ಮನೆಗೆ ಕಳಿಸಿದ್ದಾರೆ  ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಪಕ್ಷ ಗಟ್ಟಿ,  ಸುಭದ್ರವಾಗಿದೆ ಎಂದರು

ರಣದೀಪ್ ಸಿಂಗ್ ಸುರ್ಜೇವಾಲ ಕಾಂಗ್ರೆಸ್ ಎಲ್ಲಾ ಶಾಸಕರನ್ನ ಭೇಟಿಯಾಗಲಿದ್ದಾರೆ. ಶಾಸಕರ ಅಭಿಪ್ರಾಯವನ್ನ ಸಂಗ್ರಹಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ನಮ್ಮದು ದೊಡ್ಡ ಪಕ್ಷ ಅಭಿಪ್ರಾಯ ಬೇರೆ ಬೇರೆ ಇರುತ್ತವೆ.  ನಮ್ಮ ಆಂತರಿಕ ಸಮಸ್ಯೆಯನ್ನು ನಾವೇ ಬಗೆಹರಿಸುತ್ತೇವೆ.  ಸಿಎಂ ಜೊತೆ ಬಿಆರ್ ಪಾಟೀಲ್ ಮಾತನಾಡಿದ್ದಾರೆ ಮನೆ ಹಂಚಿಕೆಯಲ್ಲಿ ಭ್ರಷ್ಟಚಾರವಾಗಿದ್ದರೇ ಮಾಹಿತಿ ನೀಡಲಿ ಇಡೀ ದೇಶದಲ್ಲಿ ಭ್ರಷ್ಟಾಚಾರ ಇದೆ.  ಇಲ್ಲಅಂತಾ ಹೇಳಲ್ಲ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಬೇಕು ಎಂದರು.vtu

Key words: no revolution, our government, secure, Minister, Dinesh Gundu Rao

The post ಯಾವ ಕ್ರಾಂತಿಯೂ ಆಗಲ್ಲ, ನಮ್ಮ ಸರ್ಕಾರ ಸುಭದ್ರ- ಸಚಿವ ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂ ಸಿದ್ದರಾಮಯ್ಯ ಅವರ ಸೌಜನ್ಯದ ನಡೆ: ದಿ. ಗೋಪಾಲಗೌಡರ ಪುತ್ರ ರಾಮಮನೋಹರ್ ಧನ್ಯವಾದ.

  ಬೆಂಗಳೂರು, ಮಾ.೦೭,೨೦೨೬ : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಡುವುದಾಗಿ...

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್,7,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಚರ್ಚೆ ನಡುವೆ...

ಸಿಎಂರಿಂದ ಒಳ್ಳೆಯ ಬಜೆಟ್: ಕೇಂದ್ರ ಸಹಕಾರ ನೀಡುತ್ತಿಲ್ಲ- ಸಚಿವ ಎನ್.ಎಸ್ ಬೋಸರಾಜು

ಕಲಬುರುಗಿ,ಮಾರ್ಚ್,7,2026 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್...

ರಾಜ್ಯ ಬಜೆಟ್: ಅಭಿವೃದ್ಧಿ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆ

ಬೆಂಗಳೂರು,ಮಾರ್ಚ್,6,2026 (www.justkannada.n): ಕರ್ನಾಟಕ ಬಜೆಟ್ 2026-27 ತಾಂತ್ರಿಕ ಪ್ರಗತಿ, ಎಲ್ಲರನ್ನೂ ಒಳಗೊಂಡ...