24
March, 2026

A News 365Times Venture

24
Tuesday
March, 2026

A News 365Times Venture

ರಾಜ್ಯಗಳಿಗೆ ನೀಡುವ NDRF ಪರಿಹಾರ ಪರಿಷ್ಕರಣೆಗೆ ಕೇಂದ್ರಕ್ಕೆ ಒತ್ತಡ ಹಾಕಿ- ಸಚಿವ ಚಲುವರಾಯಸ್ವಾಮಿ

Date:

ಬೆಂಗಳೂರು, ಮಾರ್ಚ್,24,2026 (www.justkannada.in):  ಸಂಕಷ್ಟದ  ವೇಳೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು  ನೀಡುವ ಎನ್‌ಡಿಆರ್‌ಎಫ್‌ ಪರಿಹಾರ ಪರಿಷ್ಕರಣೆ ಮಾಡಲು ಬಿಜೆಪಿ ಸಂಸದರು ಒತ್ತಡ  ಹೇರಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು.

ವಿಧಾನ ಪರಿಷತ್‌ನಲ್ಲಿ  ಸದಸ್ಯ ಚಿದಾನಂದಗೌಡ ಅವರು ಈ ವಿಚಾರ ಪ್ರಸ್ತಾಪಿಸಿ ತುಮಕೂರು ಭಾಗದಲ್ಲಿ ಬೆಳೆಹಾನಿ ಮತ್ತು ಬರಪೀಡಿತ ಪ್ರದೇಶಗಳಿಗೆ ಎನ್‌ ಡಿಆರ್‌ಎಫ್‌ ನಡಿ ನೀಡುತ್ತಿರುವ ಪರಿಹಾರ  ಸಾಲುತ್ತಿಲ್ಲ ಹೀಗಾಗಿ ರಾಜ್ಯಸರ್ಕಾರ ಇದನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ,  ಈ ಹಿಂದೆಯೂ ಎನ್‌ಡಿಆರ್‌ಎಫ್‌ ಪರಿಷ್ಕರಣೆ ಮಾಡಬೇಕೆಂದು ನಮ್ಮ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಜತೆಗೆ ಸಂಬಂಧಪಟ್ಟ ಸಚಿವರು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸದನದಲ್ಲಿರುವ ಸದಸ್ಯರು ಪ್ರಧಾನಿ ಮೋದಿ ಅವರಿಗೆ ಎನ್‌ ಡಿಆರ್‌ಎಫ್‌ ಪರಿಹಾರ ನಿಧಿಯನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಡ ಹಾಕಬೇಕು ಎಂದು ತಿಳಿಸಿದರು.

Key words: Centre, revise, NDRF,  Minister, Chaluvarayaswamy

The post ರಾಜ್ಯಗಳಿಗೆ ನೀಡುವ NDRF ಪರಿಹಾರ ಪರಿಷ್ಕರಣೆಗೆ ಕೇಂದ್ರಕ್ಕೆ ಒತ್ತಡ ಹಾಕಿ- ಸಚಿವ ಚಲುವರಾಯಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ‘ಮನೋರಂಜನೆ ವಾರ’ ಆಚರಣೆ

ಮೈಸೂರು, ಮಾರ್ಚ್,24,2026 (www.justkannada.in):   ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ  ಮಹಾರಾಣಿ...

ನಮಗೂ ಅಧಿಕಾರ ಸಿಗಬೇಕು: ದೆಹಲಿಗೆ ಹೋಗಿ ಬರ್ತೇವೆ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು,ಮಾರ್ಚ್,24,2026 (www.justkannada.in):  ಸಂಪುಟ ಪುನಾರಚನೆ ವಿಚಾರ ಸಂಬಂಧ ಏಪ್ರಿಲ್ 11 ರಂದು...

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಿ –MLC ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು,ಮಾರ್ಚ್,24,2026 (www.justkannada.in):  ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ...

ಆತಂಕ ಬೇಡ: ನಮ್ಮಲ್ಲಿ ಪೆಟ್ರೋಲ್ ಡೀಸೆಲ್ ಕೊರತೆ ಇಲ್ಲ- ಕೇಂದ್ರ ಸ್ಪಷ್ಟನೆ

ನವದೆಹಲಿ,ಮಾರ್ಚ್,24,2026 (www.justkannada.in): ನಮ್ಮಲ್ಲಿ ಸಾಕಷ್ಟು ಪೆಟ್ರೋಲ್ ಡೀಸೆಲ್ ಇದೆ. ಯಾವುದೇ ಕೊರತೆ...