3
March, 2026

A News 365Times Venture

3
Tuesday
March, 2026

A News 365Times Venture

ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ದುರುಪಯೋಗ ನಿಲ್ಲಿಸಿ-ಸಿಎಂ ವಿರುದ್ದ ಆರ್.ಅಶೋಕ್ ಕಿಡಿ

Date:

ಬೆಂಗಳೂರು,ಮಾರ್ಚ್,2,2026 (www.justkannada.in):  ಸಿಎಂ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ಇಲಾಖೆ ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್,  ಈಗ ರಾಜ್ಯ ಗುಪ್ತಚರ ಇಲಾಖೆಗೆ ಪೂರ್ಣಾವಧಿ ಕೆಲಸ ಸಿಕ್ಕಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಕೋಮು ಉದ್ವಿಘ್ನತೆ ಹೆಚ್ಚಾಗುತ್ತಿದೆ.  ಔಷಧ ಕಾರ್ಖಾನೆಗಳು ಅನಿಯಂತ್ರಿತವಾಗಿ ನಡೆಯುತ್ತಿದೆ. ಈ ಸರ್ಕಾರದ ಪ್ರಮುಖ ಆದ್ಯತೆ  ಶಾಸಕರನ್ನು ಎಣಿಸುವುದು.  ಡಿಸಿಎಂ ಡಿಕೆ ಶಿವಕುಮಾರ್ ಬಣದ  ಭೋಜನ  ಹಾಜರಾತಿ ಪತ್ತೆ ಹಚ್ಚುವುದಾಗಿದೆ. ಈವಿಚಾರಕ್ಕೆ ಗುಪ್ತಚರ ಇಲಾಖೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತನಿಖಾ ಸಂಸ್ಥೆ ದುರುಪಯೋಗ ಎನ್ನುವ ರಾಹುಲ್ ಈಗ ಎಲ್ಲಿದ್ದಾರೆ?

ರಾಜ್ಯದ ಯಂತ್ರೋಪಕರಣ ಜನರ ರಕ್ಷಣೆಗಾಗಿ ಇರುವುದು. ನಿಮ್ಮ ಕುರ್ಚಿಯನ್ನು ರಕ್ಷಿಸಲು ಅಲ್ಲ  ತನಿಖಾ ಸಂಸ್ಥೆ ದುರುಪಯೋಗ ಎನ್ನುವ ರಾಹುಲ್ ಈಗೆ ಎಲ್ಲಿದ್ದಾರೆ?  ಶಸ್ತ್ರೀಕರಣ ಬಗ್ಗೆ ಉಪನ್ಯಾಸ ನೀಡುತ್ತಾರೆ. ಸಿಎಂ ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ಇಲಾಖೆ ದುರುಪಯೋಗ ಮಾಡುವುದುನ್ನ ನಿಲ್ಲಿಸಬೇಕು ಎಂದು  ಆರ್ ಅಶೋಕ್ ಹರಿಹಾಯ್ದರು.

Key words:  Stop, misusing, intelligence, R. Ashok, CM Siddaramaiah

The post ವೈಯಕ್ತಿಕ ರಾಜಕೀಯ ಉಳುವಿಗಾಗಿ ಗುಪ್ತಚರ ದುರುಪಯೋಗ ನಿಲ್ಲಿಸಿ-ಸಿಎಂ ವಿರುದ್ದ ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಖಮನೈ ಹತ್ಯೆ ಖಂಡಿಸಿ ಪ್ರತಿಭಟನೆ ವಿಚಾರ: ತಪ್ಪಾಗಿದ್ರೆ ಪರಿಶೀಲಿಸಿ ಕ್ರಮ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,3,2026 (www.justkannada.in): ಇರಾನ್ ಸರ್ವೋಚ್ಚ ನಾಯಕ ಖಮನೈ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ...

ಒಳಮೀಸಲಾತಿ ಅನುಷ್ಠಾನಕ್ಕೆ ಎಲ್ಲಾ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ- ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು,ಮಾರ್ಚ್,2,2026 (www.justkannada.in): ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ...

ರೇಷ್ಮೆ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,2,2026 (www.justkannada.in):  ನರಸೀಪುರದಲ್ಲಿ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಅನಗತ್ಯವಾಗಿ...

ಯುದ್ಧ ಸಂಪೂರ್ಣ ನಿಲ್ಲುವವರೆಗೂ ಎಲ್ಲರನ್ನ ಅಲ್ಲಿಂದ ಕರೆಸುವುದು ಕಷ್ಟ- ಕೇಂದ್ರ ಸಚಿವ HDK

ಮೈಸೂರು ,ಮಾರ್ಚ್,2,2026 (www.justkannada.in): ಇರಾನ್- ಇಸ್ರೇಲ್ ನಡುವೆ ಸಂಘರ್ಷ ಕನ್ನಡಿಗರು ಸಿಲುಕಿರುವ...