5
March, 2026

A News 365Times Venture

5
Thursday
March, 2026

A News 365Times Venture

ಶೀಘ್ರದಲ್ಲೇ ನೂತನ ಜೈವಿಕ ಇಂಧನ ನೀತಿ- ಸಚಿವ ಪ್ರಿಯಾಂಕ್‌ ಖರ್ಗೆ

Date:

ಬೆಂಗಳೂರು,ಜುಲೈ,17,2025 (www.justkannada.in): ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ  ಸಲುವಾಗಿ ನೂತನ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ 10 ನೇ ವಾರ್ಷಿಕ ಸರ್ವ ಸದಸ್ಯ ಸಮಿತಿ ಸಭೆಯ ನಂತರ ಸಚಿವ ಪ್ರಿಯಾಂಕ್ ಖರ್ಗೆ ಜೈವಿಕ ಇಂಧನ ನೀತಿಯ ಬಗ್ಗೆ ಮಾಹಿತಿ ನೀಡಿ, ಈ ಸಂಬಂಧ ಈಗಾಗಲೇ ಕೆಲವು ಪೂರ್ವ ಸಿದ್ಧತಾ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗಿದೆ, ರಾಜ್ಯದಲ್ಲಿ ಹಾಗೂ ಇತರ ರಾಜ್ಯಗಳಿಗೆ ಭೇಟಿ ನೀಡಿ ಜೈವಿಕ ಇಂಧನ ಕಾರ್ಯಯೋಜನೆಗಳ ಅನುಷ್ಟಾನ ಪ್ರಕ್ರಿಯೆ ಹಾಗೂ ವಸ್ತುಸ್ಥಿತಿ ಅಧ್ಯಯನ ಮಾಡಲಾಗಿದೆ, ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೈವಿಕ ಇಂಧನ ನೀತಿಗಳ ವಿಶ್ಲೇಷಣೆ ಮಾಡಲಾಗಿದೆ ಎಂದು ಹೇಳಿದರು.

ಜೈವಿಕ ಇಂಧನ ಸಂಪನ್ಮೂಲಗಳ ಲಭ್ಯತೆ, ಕ್ರೋಢಿಕರಣ ಕುರಿತು ಪರಿಶೀಲನೆ ಮಾಡಲಾಗಿದ್ದು, ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ರಚನೆ ಕುರಿತು ಪ್ರಕ್ರಿಯೆ ಆರಂಭಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದು, ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವ ಕುರಿತು ಸಮ್ಮೇಳನಗಳು, ಕಾರ್ಯಗಾರಗಳು, ವಸ್ತು ಪ್ರದರ್ಶನಗಳು ಹಾಗೂ ಹೂಡಿಕೆದಾರರ ಸಮಾವೇಶಗಳಲ್ಲಿ ಭಾಗವಹಿಸಿ ಮಾಹಿತಿ ಸಂಗ್ರಸಲಾಗಿದೆ ಹಾಗೂ ಮಂಡಳಿಗೆ ಕೈಗಾರಿಕಾ ಸಂಘಟನೆಗಳು, ಸಂಸ್ಥೆಗಳು, ವಿದೇಶದ ವಿಶ್ವವಿದ್ಯಾಲಯಗಳು ಮುಂತಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.

ರಾಜ್ಯದಲ್ಲಿನ ಜೈವಿಕ ಇಂಧನ ಬಯೋಬ್ರಿಕೆಟ್ಸ್, ಬಯೋಪಿಲೆಟ್ಸ್, ಬಯೋಚಾರ್, ಬಯೋಕೋಲ್. ಬಯೋಡೀಸೆಲ್, 2ಜಿ ಎಥನಾಲ್, ಗ್ರೀನ್ ಹೈಡ್ರೋಜನ್ ಕಾರ್ಯಯೋಜನೆಗಳಲ್ಲಿ ನಿರತರಾಗಿರುವ ಉದ್ದಿಮೆದಾರರುಗಳ ವಿಚಾರ ವಿನಿಮಯ ಸಭೆಯನ್ನು ತುಮಕೂರು ಹಾಗೂ ಬೆಂಗಳೂರು ಗಳಲ್ಲಿಆಯೋಜಿಸಲಾಗಿದ್ದು ಮಾಹಿತಿ ಸಂಗ್ರಹಿಸಲಾಗಿದೆ, ಶೀಘ್ರದಲ್ಲೇ ನೀತಿಯ ಕರಡು ಸಿದ್ಧಪಡಿಸಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೃಷಿ ಸಚಿವ ಚಲುರಾಯಸ್ವಾಮಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುಧೀಂದ್ರ ಎಸ್.ಇ.ಸುಧೀಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಆಯುಕ್ತೆ ಅರುಂಧತಿ ಚಂದ್ರಶೇಖರ್‌ ಹಾಗೂ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.vtu

Key words: New biofuel policy, coming soon, Minister, Priyank Kharge

The post ಶೀಘ್ರದಲ್ಲೇ ನೂತನ ಜೈವಿಕ ಇಂಧನ ನೀತಿ- ಸಚಿವ ಪ್ರಿಯಾಂಕ್‌ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ಪರಿಶೀಲನೆ

ಬೆಂಗಳೂರು, ಮಾರ್ಚ್​, 5,2026 (www.justkannada.in):  ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್...

ಫೋನ್ ಕದ್ದಾಲಿಕೆ ಅವಶ್ಯಕತೆ ಏನಿದೆ? ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮಾರ್ಚ್,4,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಇದೆ ಎಂದು ಕೇಂದ್ರ...

ಕೆಪಿಸಿಸಿಗೆ ಹೊಸ ನಾಯಕತ್ವ: ಡಿಕೆಶಿ ಹೇಳಿರೋದು ಸರಿಯಾಗಿದೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್,4,2026 (www.justkannada.in): ಕೆಪಿಸಿಸಿಗೆ ಹೊಸ ನಾಯಕತ್ವ ಬೇಕು ಎಂಬ ಡಿಸಿಎಂ...

ಒಳಮೀಸಲಾತಿ: ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು ಖರ್ಗೆ ಹೇಳಿದ್ದಾರೆ- ಸಚಿವ ಮುನಿಯಪ್ಪ

ಬೆಂಗಳೂರು,ಮಾರ್ಚ್,4,2026 (www.justkannada.in): ಒಳಮೀಸಲಾತಿ ವಿಚಾರವನ್ನು ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು...