16
February, 2026

A News 365Times Venture

16
Monday
February, 2026

A News 365Times Venture

ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ: ಎನ್ ಶ್ರೀನಿವಾಸನ್

Date:

ಮೈಸೂರು,ಆಗಸ್ಟ್,9,2025 (www.justkannada.in): ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ ಎಂದು ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ  ಎನ್ ಶ್ರೀನಿವಾಸನ್ ನುಡಿದರು.

ವಿಜಯನಗರದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಪ್ರರಿಂದ ಸಾಮೂಹಿಕ ಋಗ್ವೇದ ಹಾಗೂ ಯಜುರುಪಾಕರ್ಮ ಸಾಮೂಹಿಕವಾಗಿ ಬ್ರಾಹ್ಮಣರು  ಯಜ್ಞೋ ಪವಿತ್ರಂ ಜನಿವಾರ ಬದಲಾಯಿಸಿಕೊಂಡು,  ಸಂಧ್ಯಾವಂದನೆ, ಗಾಯತ್ರಿ ಜಪ,  ನೆರೆವೇರಿಸುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಎನ್ ಶ್ರೀನಿವಾಸನ್, ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ, 8ನೇ ವರ್ಷಕ್ಕೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸಿ ಗುರುಕುಲಕ್ಕೆ ಕಳಿಸುವ ಪಂಪರೆಯಿತ್ತು. ಯಜುರ್ ವೇದ ಋಗ್ವೇದ ಪ್ರಕಾರವಾಗಿ ಶಾಸ್ತ್ರಗಳನ್ನ ಪಾಲಿಸುವ ವೈದಿಕರು ತಮ್ಮ ಋಷಿಗಳಿಗೆ ಪೂಜಿಸಿ ಯಜ್ಞೋಪವೀತ ಜನಿವಾರ ಧಾರಣೆ ಮಾಡುವ ಉಪಾಕರ್ಮ‌ ಧರ್ಮರಕ್ಷಣೆಯ ಪ್ರತೀಕವಾಗಿದೆ. ಸಾವಿರಾರು ವರ್ಷಗಳ ಹಿಂದೆ ಸಂವತ್ಸರಗಳ ಹಬ್ಬಗಳಲ್ಲಿ ಪಂಚಾಂಗ ನಿರ್ಣಯಿಸಿರುವಂತೆ ಮಹೂರ್ತ ಆಚರಣೆ ಪಾಲಿಸುವ ಕ್ರಮಕ್ಕೆ ಮೊದಲೇ ನಿಶ್ಚಯಿಸಿರುತ್ತದೆ ಎಂದರೆ ಸನಾತನ ಧರ್ಮದ ಶಕ್ತಿಯ ಸಂಕೇತವಾಗಿದೆ ಎಂದರು.

ಈ ಸಂದರ್ಭದಲ್ಲಿ  ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ  ಅಯ್ಯಂಗಾರ್,  ಗಿರೀಶ್,  ಅಶ್ವಿನ್,  ಶ್ರೀರಾಮ್ ಹಾಗೂ ಇನ್ನಿತರರು ಹಾಜರಿದ್ದರು.

Key words: Vedas, Shastras, Study , great importance, Hinduism, N Srinivasan, Mysore

The post ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ: ಎನ್ ಶ್ರೀನಿವಾಸನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೃತಕ ಬುದ್ದಿಮತ್ತೆ ಅಂದ್ರೆ ರೈತರ ನಿರ್ಧಾರ ಶಕ್ತಿಯನ್ನು ಬಲಪಡಿಸುವ ತಂತ್ರಜ್ಞಾನ – ಡಾ. ಕೆ. ಎಂ. ಹರಿಣಿ ಕುಮಾರ್

ಮೈಸೂರು,ಫೆಬ್ರವರಿ,16,2026 (www.justkannada.in): ಕೃಷಿಯ ಭವಿಷ್ಯವನ್ನು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ಮೂಲಕ...

ನಾನು ಆಕಸ್ಮಿಕವಾಗಿ 2 ಬಾರಿ ಸಿಎಂ ಆಗಿದ್ದೆ: ನನ್ನ ಯೋಜನೆಗಳಿಗೆ ಎಂದೂ ಜಾಹೀರಾತು ನೀಡಿಲ್ಲ- ಕೇಂದ್ರ ಸಚಿವ HDK

ತುಮಕೂರು,ಫೆಬ್ರವರಿ,16,2026 (www.justkannada.in):  ನಾನು ರಾಜ್ಯದಲ್ಲಿ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೆ. ಆದರೆ...

ವಸೂಲಿಗಿಳಿದಿರುವ ಯತೀಂದ್ರಗೆ ತರಬೇತಿ ಕೊಡುವ ಮಾಸ್ಟರ್ ನಮ್ಮವನೇ- ಶಾಸಕ ಯತ್ನಾಳ್

ವಿಜಯಪುರ,ಫೆಬ್ರವರಿ,16,2026 (www.justkannada.in):  ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ವಸೂಲಿಗಿಳಿದಿದ್ದು ಯತೀಂದ್ರಗೆ ತರಬೇತಿ...

ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ ಎಂಇ ನೀತಿ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಿ- FKCCI ಅಧ್ಯಕ್ಷೆ ಉಮಾ ರೆಡ್ಡಿ

ಬೆಂಗಳೂರು,ಫೆಬ್ರವರಿ,16,2026 (www.justkannada.in): ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ ಎಂಇ ನೀತಿ ಮತ್ತು ವಿಶೇಷ...