ಉಡುಪಿ.ಫೆಬ್ರವರಿ,13,2026 (www.justkannada.in): ಸರ್ಕಾರ ಹೋದರೂ ತೊಂದರೆ ಇಲ್ಲ ಡಿಕೆ ಶಿವಕುಮಾರ್ ಶತಾಯಗತಾಯ ಸಿಎಂ ಆಗಲು ಹೊರಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶತಾಯಗತಾಯ ಡಿಕೆ ಶಿವಕುಮಾರ್ ಸಿಎಂ ಆಗಲು ಹೊರಟಿದ್ದಾರೆ ಸರ್ಕಾರ ಹೋದರು ತೊಂದ್ರೆ ಇಲ್ಲ ಎಂಬ ಹಂತಕ್ಕೆ ಬಂದಿದೆ. ಕಳೆದ ಎರಡ್ಮೂರು ದಿನದ ಹೇಳಿಕೆಯಲ್ಲಿ ಡಿಕೆ ಶಿವಕುಮಾರ್ ಗಟ್ಟಿಯಾಗಿ ಮಾತನಾಡಿದ್ದಾರೆ. ದೆಹಲಿಯಲ್ಲಿ ಗಾಳಿ ಕುಡಿಯಲು ಬಂದಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪತನವಾದ್ರೂ ಆಶ್ಚರ್ಯ ಇಲ್ಲ ಎಂದು ಭವಿಷ್ಯ ನುಡಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ವಿಚಾರವನ್ನ ರಾಜ್ಯದ ವಿರೋಧ ಪಕ್ಷ ಸರಿಯಾಗಿ ನಿರ್ವಹಿಸಿಲ್ಲ. ರಾಜ್ಯದ ವಿರೋಧ ಪಕ್ಷವಾಗಿ ಸರಿಯಾಗಿ ನಿರ್ವಹಿಸಿಲ್ಲ ಎಂದು ಯತ್ನಾಳ್ ಕಿಡಿಕಾರಿದರು.
Key words: DK Shivakumar, become CM, MLA Yatnal
The post ಸರ್ಕಾರ ಹೋದ್ರೂ ತೊಂದರೆ ಇಲ್ಲ: ಡಿಕೆಶಿ ಶತಾಯಗತಾಯ ಸಿಎಂ ಆಗಲು ಹೊರಟಿದ್ದಾರೆ- ಶಾಸಕ ಯತ್ನಾಳ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




