ಮೈಸೂರು,ಮಾರ್ಚ್,7,2026 (www.justkannada.in): ಸಾಲದ ಬಗ್ಗೆ ಬಿಜೆಪಿಯವರು ಟೀಕೆ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ , ಮೋದಿ ಎಷ್ಟು ಸಾಲ ಮಾಡಿದ್ದಾರೆ ಗೊತ್ತಾ? ಸಾಲ ಮಾಡದೆ ಅಭಿವೃದ್ಧಿ ಮಾಡಲು ಆಗಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಲ ಕೂಡ ಫೈನಾನ್ಸ್ ಮಿತಿಯಲ್ಲಿದೆ. ಸಾಲ 25% ಒಳಗಡೆ ಇರಬೇಕು . ನಾವು 24% ಸಾಲಾಡಿದ್ದೇವೆ. ಕೇಂದ್ರದ ಸಾಲ ಎಷ್ಟಿದೆ ಅಂತ ಅಶೋಕ್ ಗೆ ಗೊತ್ತಾ? ಮೋದಿ ಬಂದಮೇಲೆ 11 ವರ್ಷದಲ್ಲಿ 165 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. 55.6% ಸಾಲ ಮೋದಿ ಸಾಲ ಮಾಡಿದ್ದಾರೆ. ನಾವು ಆರ್ಥಿಕ ಶಿಸ್ತಿನ ಮಿತಿಯಲ್ಲಿ ಸಾಲ ಮಾಡಿ ಅಭಿವೃದ್ಧಿಗೆ ಹಣ ಕೊಡುತ್ತಿದ್ದೇವೆ. ಬಿಜೆಪಿ ಅವರು ಆರ್ಥಿಕ ನೀತಿ ಪುಸ್ತಕ ಓದಬೇಕು. ನಾವು ಸಾಲ ಮಾಡಿದ್ದೇವೆ ಆದರೆ ಅದು ಆರ್ಥಿಕ ಶಿಸ್ತು ಮಿತಿಯಲ್ಲಿದೆ ಎಂದರು.
ಬಜೆಟ್ ಒಂದು ವರ್ಗಕ್ಕೆ ಸೀಮಿತ ವಾಗಿಲ್ಲ. ಸಾಮಾಜಿಕ ನ್ಯಾಯದಡಿ ಬಜೆಟ್ ಮಂಡನೆ ಮಾಡಿದ್ದೇವೆ. ಬಜೆಟ್ ಇಡೀ ರಾಜ್ಯದ ಅಭಿವೃದ್ಧಿಯ ಬಜೆಟ್ . ಕೇಂದ್ರ ನಮಗೆ ಕೊಡುವ ದುಡ್ಡು ಕೊಟ್ಟಿಲ್ಲ. ಅದರಿಂದ ನಮಗೆ ಹೊರೆ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಹೊರೆ ಹೆಚ್ಚುತ್ತಿದೆ. ಕೇಂದ್ರದ ಮನೆರೆಗಾ ದಿಂದಲೂ ರಾಜ್ಯಕ್ಕೆ ಹೊರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Key words: development, Budget, CM Siddaramaiah
The post ಸಾಲ ಮಾಡದೆ ಅಭಿವೃದ್ಧಿ ಆಗಲ್ಲ; ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




