26
February, 2026

A News 365Times Venture

26
Thursday
February, 2026

A News 365Times Venture

ಸ್ವದೇಶಿ ಕರಕುಶಲ ವಸ್ತು ತಯಾರಿಕೆಗೆ ಉತ್ತೇಜನ ಅಗತ್ಯ:  ಸಚಿವ ಕೆ.ಹೆಚ್ ಮುನಿಯಪ್ಪ

Date:

ಬೆಂgಗಳೂರು ಗ್ರಾಮಾಂತರ, ಫೆಬ್ರವರಿ, 24,2026 (www.justkannada.in): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಸ್ವದೇಶಿಯಾಗಿ ತಯಾರಿಕೆಗೆ ಆದ್ಯತೆ ನೀಡಿ, ತಯಾರಿಸಿದ ಕರಕುಶಲ ವಸ್ತುಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಇದರ ಸದುಪಯೋಗ ಎಲ್ಲ ವರ್ಗದ ಕರಕುಶಲ ಜನರು ಪಡೆದುಕೊಳ್ಳುವಂತಾಗಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ಟೌನ್ ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಎಂಎಸ್ಎಂಇ ಇವರ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿದರು.

ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ, ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜಿಸಬೇಕಿದ್ದು, ನಾವು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸುವ ಜತೆಗೆ ವಿದೇಶಗಳಿಗೆ ರಪ್ತು ಮಾಡುವಂತಾಗಬೇಕು ಎಂದರು‌.

ಕರಕುಶಲ ಕರ್ಮಿಗಳು ಕಚ್ಚಾವಸ್ತು ಖರೀದಿಸಲು ಬ್ಯಾಂಕಿನಿಂದ ಸಬ್ಸಿಡಿ ಸಾಲ ಪಡೆದು ಗುಡಿ ಕೈಗಾರಿಕೆ ನಿರ್ಮಿಸಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿಸಲು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪಿಸಲು ಕೇವಲ ಶೇ. 20 ರಷ್ಟು ಅವಕಾಶ ಆದರೆ ಗುಡಿ ಕೈಗಾರಿಕೆಗಳು ಸ್ಥಾಪಿಸಲು ಶೇ. 80 ರಷ್ಟು ಅವಕಾಶವಿದ್ದು, ಇದರ ಸದುಪಯೋಗವನ್ನು ಯುವಕರು ಪಡೆದು ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಉದ್ಯಮಿಗಳಾಗಿ ಬೆಳೆಯಬೇಕು ಎಂದರು.

ಈ ಮೇಳದಲ್ಲಿ ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ (ಎಂಎಸ್ಎಂಇ) ವ್ಯಾಪ್ತಿಗೆ ಬರುವ 50 ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳಲ್ಲಿ ಸಾಮಗ್ರಿಗಳು ಸಾರ್ವಜನಿಕರನ್ನು ತಮ್ಮತ್ತ ಸೆಳೆದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ  ಬಿ. ರಾಜಣ್ಣ, ದೇವನಹಳ್ಳಿ ತಾಲೂಕು ಸಿ.ಜಗನ್ನಾಥ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳಾದ ಜಗನ್ನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Key words: encourage, production, handicrafts, Minister, K.H. Muniyappa

The post ಸ್ವದೇಶಿ ಕರಕುಶಲ ವಸ್ತು ತಯಾರಿಕೆಗೆ ಉತ್ತೇಜನ ಅಗತ್ಯ:  ಸಚಿವ ಕೆ.ಹೆಚ್ ಮುನಿಯಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು:105 ಕಳವು ಪ್ರಕರಣ ಪತ್ತೆ: ಚಿನ್ನಾಭರಣ, ವಾಹನಗಳು ವಶ

ಮೈಸೂರು,ಫೆಬ್ರವರಿ,25,2026 (www.justkannada.in): ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದ...

ತಿ.ನರಸೀಪುರದಲ್ಲಿ  ಕ್ರೀಡಾಂಗಣ: ಅಭಿವೃದ್ಧಿ ಕಡೆಗೆ ದಿಟ್ಟ ಹೆಜ್ಜೆ

  ತಿ.ನರಸೀಪುರ, ಫೆ.೨೫,೨೦೨೬: ಪಟ್ಟಣದ KSICಗೆ ಸೇರಿದ 13.5 ಎಕರೆ ಜಾಗದಲ್ಲಿ 5...

ದಲಿತರ ಪಾಲಿನ ಹಣ ಯಾರ ಮನೆಗೆ ಹೋಯ್ತು? ಗ್ಯಾರಂಟಿಗಳನ್ನ ಟೀಕಿಸಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ವಿಧಾನ...

ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿಸ್ಥಾನ ಕೊಡಬಾರದೆಂದು ನಿರ್ಣಯ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು...