16
July, 2025

A News 365Times Venture

16
Wednesday
July, 2025

A News 365Times Venture

ಹನಿಟ್ರ್ಯಾಪ್ ಹಿಂದಿನ ಕಾಣದ‌ ಕೈ ಅಮಿತ್ ಶಾ: ಅವರೇ ನಿಜವಾದ ಕಿಂಗ್ ಪಿನ್- ಶಾಸಕ ಕೆ.ಹರೀಶ್ ಗೌಡ

Date:

ಮೈಸೂರು,ಮಾರ್ಚ್, 24,2025 (www.justkannada.in):  ಹನಿಟ್ರ್ಯಾಪ್ ಹಿಂದಿನ ಕಾಣದ‌ ಕೈ ಅಮಿತ್ ಶಾ. ಅವರೇ ನಿಜವಾದ ಕಿಂಗ್ ಪಿನ್. ಇದರಲ್ಲಿ ಡಿಕೆ ಶಿವಕುಮಾರ್ ಅವರ ಯಾವುದೇ ಪಾತ್ರವಿಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಹರೀಶ್ ಗೌಡ, ನಾನು ಕೂಡ ಕಳೆದ ಆರು‌ ತಿಂಗಳ ಹಿಂದೆ ದೂರು ದಾಖಲಿಸಿದ್ದೆ. ಮೈಸೂರು ಭಾಗದ ಹಲವರಿಗೆ ಹನಿಟ್ರ್ಯಾಪ್ ಆಗಿತ್ತು. ಸಾಮಾನ್ಯ ಜನರು, ಪ್ರೊಫೆಸರ್, ಕೈಗಾರಿಕೋದ್ಯಮಿಗಳನ್ನ ಟಾರ್ಗೆಟ್ ಮಾಡಿದ್ದರು. ಈವಾಗ ಖುದ್ದು ಶಾಸಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬ ಮನುಷ್ಯನನ್ನ ಮಣಿಸಲು ವಾಮಮಾರ್ಗ ಅನುಸರಿಸಬಾರದು. ದಿನನಿತ್ಯದ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ನಾನು ಸಮರ ಸಾರಿದ್ದೆ. ಹನಿಟ್ರ್ಯಾಪ್ ಹಿಂದೆ ಅಮಿತ್ ಶಾ ಪಾತ್ರವಿದೆ. ಅವರೇ ನಿಜವಾದ ಕಿಂಗ್ ಪಿನ್. ಇದರಲ್ಲಿ ಡಿಕೆಶಿ ಯಾವುದೇ ಪಾತ್ರವಿಲ್ಲ. ಮುನಿರತ್ನ ಹೇಳಲು ಅವನ್ಯಾರು? ಅವನೇ ಕೆಡಿ, ಅವನು ಬೇರೊಬ್ಬರ ಬಗ್ಗೆ ಆಪಾದನೆ ಮಾಡುವುದು ಸರಿಯಲ್ಲ. ನಮಗೆ ಒಂದು ‌ಕಡೆ ಯಾವಾಗಲೂ ಭಯವಾಗುತ್ತದೆ. ಸದನದಲ್ಲಿ ಎಲ್ಲಿ ಎಚ್‌ಐವಿ ಇಂಜೆಕ್ಷನ್ ಮಾಡಿಬಿಡ್ತಾನೋ ಅಂತ‌ ಭಯ. ಹಲವರಿಗೆ ಅವನು ಎಚ್‌ಐವಿ ಇಂಜೆಕ್ಷನ್ ಮಾಡಲು ಹೋಗಿದ್ದವನು ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಹಲವರ ಸಿಡಿ ಮಾಡಿಸಿಕೊಂಡು ಇಟ್ಟುಕೊಂಡಿದ್ದಾರೆ.

ಹನಿಟ್ರ್ಯಾಪ್ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಹರೀಶ್ ಗೌಡ, ಸ್ಪೀಕರ್ ಬಸವರಾಜ ಹೊರಟ್ಟಿ , ಬಿ.ಆರ್.ಪಾಟೀಲ್ ಕೂಡ ರಾಜೀನಾಮೆ ಕೊಡ್ತೀವಿ ಅಂದರು. ಸುಸಂಸ್ಕೃತ ರಾಜಕಾರಣಿಗಳು ಇಂತಹ ಬೆಳವಣಿಗೆ ನೋಡಿಲ್ಲ. ಬಿಜೆಪಿ ಶಾಸಕರು ಸ್ಪೀಕರ್ ಪೋಡಿಯಂ‌ ಕಿತ್ತುಹಾಕಿ ನಡೆದುಕೊಂಡ ರೀತಿ ಬೇಸರ ತರಿಸಿದೆ. ಮುನಿರತ್ನ ಹಲವರ ಸಿಡಿ ಮಾಡಿಸಿಕೊಂಡು ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ‌ ರಾಜಕಾರಣಿಗೆ ಉಳಿಗಾಲವಿಲ್ಲ. ಮುಂದಿನ ದಿನಗಳಲ್ಲಿ ಯಾವ ಪರಿಸ್ಥಿತಿಗಾದರೂ ರಾಜಕಾರಣ ಹೋಗಬಹುದು. ಆರೋಗ್ಯಕರವಾದ ರಾಜಕಾರಣ ಅಸಹ್ಯ ಹುಟ್ಟಿಸಿದೆ. ನನಗೆ ರಾಜಕಾರಣ‌ ಸಾಕಾಗಿದೆ. ಈ ಬೆಳವಣಿಗೆ ಗಮನಿಸಿದರೆ ರಾಜಕಾರಣವೇ ಬೇಡ ಅನಿಸುತ್ತಿದೆ ಎಂದರು.

ರಾಜಕಾರಣ ಎಂದರೆ ಕೊಳಚೆಯಲ್ಲಿ ಬಿದ್ದ ಅನುಭವ. ಹನಿಟ್ರ್ಯಾಪ್ ಕುರಿತು ಕಾಂಗ್ರೆಸ್ ಕಡೆ ಬೊಟ್ಟು ಮಾಡುವುದು ಬಿಜೆಪಿಯವರ ಹುಟ್ಟಗುಣ. ಈ ಹನಿಟ್ರ್ಯಾಪ್ ಹಿಂದೆ ಅಮಿತ್ ಶಾ ಪಾತ್ರವಿದೆ ಎಂದು ಆರೋಪಿಸಿದರು.

Key words: Amit Shah, behind, honeytrap, MLA, K. Harish Gowda

The post ಹನಿಟ್ರ್ಯಾಪ್ ಹಿಂದಿನ ಕಾಣದ‌ ಕೈ ಅಮಿತ್ ಶಾ: ಅವರೇ ನಿಜವಾದ ಕಿಂಗ್ ಪಿನ್- ಶಾಸಕ ಕೆ.ಹರೀಶ್ ಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜು.19ರಂದು ಮೈಸೂರಿನಲ್ಲಿ ಸಾಧನ ಸಮಾವೇಶ: ವೇದಿಕೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಜುಲೈ,16,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ...

ಆ.5 ರಂದು KSRTC, BMTC ಸೇರಿ 4 ನಿಗಮಗಳಿಂದ ಸಾರಿಗೆ ಮುಷ್ಕರ

ಬೆಂಗಳೂರು, ಜುಲೈ, 16,2025 (www.justkannada.in): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ...

BJP ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಮತ್ತು ಮೀಸಲಾತಿ ಪರವಾಗಿ ಇಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ,...

ಐದು ಹುಲಿಗಳ ಸಾವು ಕೇಸ್: ಡಿಸಿಎಫ್  ಸಸ್ಪೆಂಡ್

ಚಾಮರಾಜನಗರ, ಜುಲೈ,15,2025 (www.justkannada.in): ಚಾಮರಾಜನಗರ ಮಲೆ ಮಹದೇವಶ್ವರ ಬೆಟ್ಟದ ಮೀಣ್ಯಂ ಅರಣ್ಯ...