ಚಿಕ್ಕಮಗಳೂರು,ಜುಲೈ,31,2025 (www.justkannada.in): ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಹೆತ್ತ ತಾಯಿಯನ್ನೇ ಪಾಪಿ ಪುತ್ರನೊಬ್ಬ ಹತ್ಯೆ ಮಾಡಿ ಶವವನ್ನ ಮನೆಯೊಳಗೆ ಸುಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.
ಭವಾನಿ (54)) ಬರ್ಬರವಾಗಿ ಹತ್ಯೆಯಾದ ತಾಯಿ. ಪವನ್ (35) ತಾಯಿಯನ್ನೇ ಕೊಂದ ಪಾಪಿ ಮಗ. ಇದೀಗ ಪವನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅರೆನೂರು ಗ್ರಾಮದಿಂದ 1.5 ಕಿಮೀ ದೂರದಲ್ಲಿರುವ ಹಕ್ಕಿಮಕ್ಕಿ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ. ಗ್ರಾಮದ ನಿರ್ಜನ ಪ್ರದೇಶದ ಒಂಟಿ ಮನೆಯಿದ್ದು ತಾಯಿ ಮಗ ವಾಸವಿದ್ದರು.
ನಿನ್ನೆ ಪವನ್ ಹಣಕ್ಕಾಗಿ ತಾಯಿ ಜೊತೆ ಜಗಳ ಮಾಡಿದ್ದಾನೆ. ಹಣ ನೀಡದ ಹಿನ್ನೆಲೆಯಲ್ಲಿ ಕೊಡಲಿಯಿಂದ ಕೊಚ್ಚಿ ತಾಯಿಯನ್ನ ಕೊಲೆ ಮಾಡಿದ್ದು ಮನೆಯೊಳಗೆ ಶವ ಸುಟ್ಟಿದ್ದಾನೆ. ಅರ್ಧಂಬರ್ಧ ಸುಟ್ಟ ಶವದ ಪಕ್ಕವೇ ಮಗ ಮಲಗಿದ್ದನು ಎನ್ನಲಾಗಿದೆ.
ಬೆಂಗಳೂರಿನ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕಳೆದ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದಿದ್ದನು. ಇದೀಗ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಆಲ್ದೂರು ಪೊಲೀಸರು ಹತಂಕ ಮಗ ಪವನ್ ನನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
Key words: Son, kills ,mother , burns, body, house, Chikkamagalore
The post ಹೆತ್ತ ತಾಯಿಯನ್ನೇ ಕೊಂದು ಮನೆಯೊಳಗೆ ಶವ ಸುಟ್ಟ ಮಗ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.