7
March, 2026

A News 365Times Venture

7
Saturday
March, 2026

A News 365Times Venture

ಅತ್ಯಾಚಾರ ಕೇಸ್: ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲುಶಿಕ್ಷೆಗೆ SPP ಮನವಿ

Date:

ಬೆಂಗಳೂರು,ಆಗಸ್ಟ್,2,2025 (www.justkannada.in): ಕೆ.ಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲುಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಎಸ್ ಪಿಪಿ ಜಗದೀಶ್ ಮನವಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಎಂದು ನಿನ್ನೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಈ ನಡುವೆ ಶಿಕ್ಷೆ ಪ್ರಮಾಣದ ಬಗ್ಗೆ ಇಂದು ವಿಚಾರಣೆ ನಡೆಯುತ್ತಿದೆ.

ಈ ವೇಳೆ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಜಗದೀಶ್,  ಆರೋಪಿಯ ವಿರುದ್ದ ಹಲವು ಅತ್ಯಾಚಾರ ಪ್ರಕರಣಗಳಿವೆ.  ಬಹಳಷ್ಟು ಜನರ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿದ್ದು ಗಂಭೀರ ಅಪರಾಧ  ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿ ಹೇಳಿಕೆ ಪಡೆದಿದ್ದಾರೆ.   ಸಾಕ್ಷಾಧಾರ ನಾಶಪಡಿಸಲು ಯತ್ನಿಸಿದ್ದಾರೆ.  ಇಂತಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯೇ ವಿಧಿಸಬೇಕು. ಈತನಿಗೆ ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಸಂದೇಶ ರವಾನಿಸಬೇಕು ಎಂದು ಮನವಿ ಮಾಡಿದರು.

ಪ್ರಜ್ವಲ್ ರೇವಣ್ಣ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ತೋರಿಲ್ಲ ತನಗಿರುವ ಸ್ಥಾನಮಾನವನ್ನ ಅಪರಾಧಿ ದುರುಪಯೋಗಪಡಿಸಿಕೊಂಡಿದ್ದಾನೆ.  ಅಪರಾಧಿ ವಿರುದ್ದ ಇನ್ನು ಹಲವು ಕೇಸ್ ಗಳಿವೆ. ಹಣ ಅಧಿಕಾರವಿರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು. ಹೀಗಾಗಿ ಜೀವನ ಪರ್ಯಂತ ಸೆರೆವಾಸ ನೀಡುವಂತೆ  ಮನವಿ ಮಾಡಿದರು.vtu

Key words: Rape case, life imprisonment, Prajwal Revanna, SPP,  appeals

The post ಅತ್ಯಾಚಾರ ಕೇಸ್: ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲುಶಿಕ್ಷೆಗೆ SPP ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್,7,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಚರ್ಚೆ ನಡುವೆ...

ಸಿಎಂರಿಂದ ಒಳ್ಳೆಯ ಬಜೆಟ್: ಕೇಂದ್ರ ಸಹಕಾರ ನೀಡುತ್ತಿಲ್ಲ- ಸಚಿವ ಎನ್.ಎಸ್ ಬೋಸರಾಜು

ಕಲಬುರುಗಿ,ಮಾರ್ಚ್,7,2026 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್...

ರಾಜ್ಯ ಬಜೆಟ್: ಅಭಿವೃದ್ಧಿ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆ

ಬೆಂಗಳೂರು,ಮಾರ್ಚ್,6,2026 (www.justkannada.n): ಕರ್ನಾಟಕ ಬಜೆಟ್ 2026-27 ತಾಂತ್ರಿಕ ಪ್ರಗತಿ, ಎಲ್ಲರನ್ನೂ ಒಳಗೊಂಡ...

ಸಿಎಂ ಬಜೆಟ್ ನಲ್ಲಿ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿ- ಸಚಿವ ಎಂ. ಬಿ ಪಾಟೀಲ್ ಹರ್ಷ

ಬೆಂಗಳೂರು,ಮಾರ್ಚ್,6,2026 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ದಾಖಲೆಯ 17ನೇ ಬಜೆಟ್...