12
March, 2026

A News 365Times Venture

12
Thursday
March, 2026

A News 365Times Venture

ಅಪರೇಷನ್ ಸಿಂಧೂರ ಯಶಸ್ಸು ಪ್ರತಿಯೊಬ್ಬ ಯೋಧನಿಗೂ ಸಲ್ಲುತ್ತೆ: ಮತ್ತೆ ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ- ಪ್ರಧಾನಿ ಮೋದಿ

Date:

ಪಂಜಾಬ್,ಮೇ,13,2025 (www.justkannada.in): ಭಯೋತ್ಪಾದನೆ ವಿರುದ್ದ ಭಾರತದ  ಲಕ್ಷ್ಮಣ ರೇಖೆ ಸ್ಪಷ್ಟವಾಗಿದೆ. ಅಪರೇಷನ್ ಸಿಂಧೂರ ಯಶಸ್ಸು ಪ್ರತಿಯೊಬ್ಬ ಯೋಧನಿಗೂ ಸಲ್ಲುತ್ತದೆ. ಭಯೋತ್ಪಾದಕ ದಾಳಿ ಮತ್ತೆ ನಡೆದರೇ ನಮ್ಮ ಸೇನೆ ಮತ್ತೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಪ್ರಧಾನಿ ಮೋದಿ ನುಡಿದರು.

ಆದಂಪುರ ವಾಯುನೆಲೆಗೆ ಭೇಟಿ ನೀಡಿ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದಕರ ವಿರುದ್ದ ವಾಯುಸೇನೆ ದಾಳಿ ಮಾಡಿದ್ದು ಸಮರ್ಥವಾಗಿ ನಿಭಾಯಿಸಿದೆ. ಭಯೋತ್ಪಾದನೆ ವಿರುದ್ದ ಭಾರತದ ಲಕ್ಷ್ಮಣ ರೇಖೆ ಸ್ಪಷ್ಟವಾಗಿದೆ.  ಮತ್ತೆ ಭಯೋತ್ಪಾದಕ ದಾಳಿ ನಡೆದರೆ ಮತ್ತೆ ಪ್ರತ್ಯುತ್ತರ ನೀಡುತ್ತದೆ. ಆದರೆ ಈ ಬಾರಿ ಪ್ರತ್ಯುತ್ತರ ಮತ್ತಷ್ಟು ಘೋರವಾಗಿರುತ್ತೆ ಎಂದರು.

ಯುದ್ಧಭೂಮಿಯಲ್ಲಿ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸುವುದರಿಂದ ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟಾಗುತ್ತದೆ. ಭಾರತೀಯ ವಾಯುಪಡೆಯು ಪಾಕಿಸ್ತಾನಕ್ಕೆ ತನ್ನ ಶಕ್ತಿಯನ್ನು ತೋರಿಸಿದೆ.  ಭಾರತ್ ಮಾತಾ ಕಿ ಜೈ ಕೇವಲ ಘೋಷಣೆಯಲ್ಲ, ಇದು ದೇಶದ ಜನರ ಘೋಷಣೆ. ದೇಶಕ್ಕಾಗಿ ಬದುಕುವ ಸೈನಿಕನ ಪ್ರತಿಜ್ಞೆ ಎಂದರು.

ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ನೋಡುವ ಮೂಲಕ ತಮ್ಮ ಜೀವನವು ಧನ್ಯವಾಗಿದೆ. ನಮ್ಮ ಸೇನೆಯ ಪರಾಕ್ರಮ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಎಲ್ಲಾ ವೀರ ಸೈನಿಕರಿಗೆ ನನ್ನ ನಮನಗಳು. ಆಪರೇಷನ್ ಸಿಂಧೂರ ಘೋಷಣೆ ಪ್ರಪಂಚದಾದ್ಯಂತ ಪ್ರತಿಧ್ವನಿಸಿತು. ಸೇನೆಯು ದೇಶದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: success, Operation Sindhur, every soldier, PM Modi

The post ಅಪರೇಷನ್ ಸಿಂಧೂರ ಯಶಸ್ಸು ಪ್ರತಿಯೊಬ್ಬ ಯೋಧನಿಗೂ ಸಲ್ಲುತ್ತೆ: ಮತ್ತೆ ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: ಭರ್ತಿಗೆ ಕ್ರಮ-ಎನ್ ಎಸ್ ಬೋಸರಾಜು

ಬೆಂಗಳೂರು,ಮಾರ್ಚ್,12,2026 (www.justkannada.in):  ರಾಜ್ಯದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇದ್ದು ಒಳ...

ಕೇಂದ್ರದ ವಿಫಲ: ರಾಜ್ಯದ ಎಲ್ಲಾ ಕಡೆಯೂ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ- ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು,ಮಾರ್ಚ್,12,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಭಾರತದ ಮೇಲೆ ಪರಿಣಾಮ ಬೀರಿದ್ದು ದೇಶದ...

ಗೃಹಬಳಕೆ ಸಿಲಿಂಡರ್ ಪೂರೈಕೆ: ಆತಂಕ ಬೇಡ ಎಂದ ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,11,2026 (www.justkannada.in): ಯುದ್ದದಿಂದಾಗಿ ಹಡಗು ಸಂಚಾರ ನಿಲ್ಲಿಸಿದ್ದಾರೆ. ಹೀಗಾಗಿ ಸಿಲಿಂಡರ್ ಪೂರೈಕೆಯಲ್ಲಿ...

ನಾಳೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,11,2026 (www.justkannada.in): ಬಜೆಟ್ ಅಧಿವೇಶನದ ನಡುವೆ ಸಿಎಂ ಸಿದ್ದರಾಮಯ್ಯ ನಾಳೆ ಮೈಸೂರಿಗೆ...