ಮೈಸೂರು,ಆಗಸ್ಟ್,16,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಗಸ್ಟ್ 19ರಂದು (ಮಂಗಳವಾರ) ಬೆಳಗ್ಗೆ 10.30ಕ್ಕೆ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದೆ.
ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭವನ್ನು ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಉದ್ಘಾಟಿಸಲಿದ್ದು ಮೈಸೂರು ನಗರ ಪೊಲೀಸ್ ಇಲಾಖೆಗೆ ಡಿಸಿಪಿ ಕೆ.ಎಸ್. ಸುಂದರರಾಜ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರೂ, ಬೆಂಗಳೂರಿನ ಕೆಪಿಎನ್ ಸಂಪಾದಕ ಸಗ್ಗೆರೆ ರಾಮಸ್ವಾಮಿ ಅವರನ್ನು ಗೌರವಿಸಲಾಗುವುದು.
ಸಂಘದ ಅಧ್ಯಕ್ಷ ಕೆ.ದೀಪಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ವಲಯದ ನರೆಡ್ಕೊ ಅಧ್ಯಕ್ಷ ವಿ.ಸಿ. ರವಿಕುಮಾರ್, ಉದ್ಯಮಿ ಡಾ. ವಿ.ಕಾರ್ತಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
Key words: Mysore District Journalists Association, News Photo Exhibition, Competition
The post ಆ.19ರಂದು ಮೈಸೂರಿನಲ್ಲಿ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.