ಮೈಸೂರು,ಜೂನ್,14,2025 (www.justkannada.in): ತಾಯಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆದಿವಾಸಿ ಮಹಿಳೆ ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಮದ್ಯ ಅಮಲಿನಲ್ಲಿ ತೇಲಾಡುವುದಲ್ಲದೆ ಮಗುವಿಗೆ ಮನಬಂದಂತೆ ಥಳಿಸಿದ್ದಾಳೆ.
ಬಾಣಂತಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದು ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಎರಡು ಕ್ವಾರ್ಟರ್ ಕೊಡಿಸಿ ಸಾಕು ಏನೂ ಬೇಡ ಎನ್ನುತ್ತಿದ್ದಾಳೆ. ಮದ್ಯದ ಚಟಕ್ಕೆ ಬಲಿಯಾಗಿ ಮಹಿಳೆ ತನ್ನ ಒಂಬತ್ತು ತಿಂಗಳ ಹಸುಗೂಸಿನ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಸದ್ಯ ಸ್ಥಳೀಯರ ನೆರವಿನಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ, ಪೊಲೀಸರ ನೆರವಿನಿಂದ ಮಗುವನ್ನ ರಕ್ಷಣೆ ಮಾಡಿದ್ದಾರೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೆಹಾಡಿಯ ಪಾರ್ವತಿ ಎಂಬ ಆದಿವಾಸಿ ಮದ್ಯವ್ಯಸನಿ ಮಹಿಳೆ ಈ ರಂಪಾಟ ನಡೆಸಿದ್ದಾಳೆ. ಮದ್ಯದ ಅಮಲಿನಲ್ಲಿ ತನ್ನದೇ ಕರುಳುಬಳ್ಳಿಗೆ ಮನಬಂದಂತೆ ಥಳಿಸಿದ್ದು ಮಗು ಹತ್ಯೆಗೆ ಮುಂದಾಗಿದ್ದ ವೇಳೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಮಗುವಿಗೆ ಹೊಡೆದು ಬುದ್ಧಿ ಕಲಿಸುತ್ತೀವಿ ಎಂದು ಆದಿವಾಸಿ ಮಹಿಳೆ 9 ತಿಂಗಳ ಪುಟ್ಟ ಕಂದಮ್ಮನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅಲ್ಲದೆ ನಾನು ಎಣ್ಣೆ ಕುಡಿದೇ ಕುಡಿತೀನಿ ನನಗೆ ಎರಡು ಕ್ವಾರ್ಟರ್ ಎಣ್ಣೆ ಕೊಡಿಸಿ. ಕೊನೇ ಪಕ್ಷ 90 ಎಣ್ಣೆಯಾದರೂ ಕೊಡಿ ಎಂದು ಅಂಗಲಾಚಿದ್ದಾಳೆ. ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಮಹಿಳೆ ಮೊಂಡಾಟ ನಡೆಸಿದ್ದು, ಪೊಲೀಸರಿಗೂ ಕ್ಯಾರೆ ಎನ್ನದೆ ಮದ್ಯದ ಅಮಲಿನಲ್ಲಿ ತೇಲಾಡಿದ್ದಾಳೆ.
ಆದಿವಾಸಿಗಳು, ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಎಫೆಕ್ಟ್ ನಿಂದಾಗಿ ಇಂತಹ ಘಟನೆಗಳು ನಡೆಯುತ್ತಿದ್ದು ಅಕ್ರಮ ಮದ್ಯದ ಅಮಲಿನಲ್ಲಿ ಬಡ ಆದಿವಾಸಿಗಳು ತೇಲುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆಅವಕಾಶ ನೀಡಿ ಈ ಮೂಲಕ ಕಾಡಂಚಿನ ಗ್ರಾಮದ ಜನರ ಜೊತೆ ರಾಜಕಾರಣಿಗಳು, ಅಧಿಕಾರಿಗಳ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳೀ ಬಂದಿದೆ.
Key words: Mysore, woman, beat, child, drunk
The post ಇವಳೆಂತಹ ತಾಯಿ..! ಮದ್ಯದ ಅಮಲಿನಲ್ಲಿ ತನ್ನ ಮಗುವಿಗೆ ಮನಬಂದಂತೆ ಥಳಿಸಿ ಹತ್ಯೆಗೆ ಮುಂದಾದ ಮಹಿಳೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.