11
March, 2026

A News 365Times Venture

11
Wednesday
March, 2026

A News 365Times Venture

ಈ ಬಾರಿ ನನ್ನ ಜನ್ಮದಿನಾಚಾರಣೆ ಬೇಡ: ಯೋಧರ ಜತೆ ನಿಲ್ಲೋಣ-ಡಿಸಿಎಂ ಡಿಕೆ ಶಿವಕುಮಾರ್ ಮನವಿ

Date:

ಬೆಂಗಳೂರು,ಮೇ,10,2025 (www.justkannada.in):  ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ, ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ  ನನ್ನ ಜನ್ಮ ದಿನಾಚರಣೆ ಮಾಡುವುದು  ಬೇಡ ಎಂದು ತಮ್ಮ ಅಭಿಮಾನಿಗಳಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ  ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಯೋಧರು ಭಯೋತ್ಪಾದನೆ ವಿರುದ್ಧ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ. ನನ್ನ ಜನ್ಮದಿನದ ಸಂದರ್ಭದಲ್ಲಿ ನಾನು ಊರಿನಲ್ಲಿ ಇರುವುದಿಲ್ಲ. ಅಂದು ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸ, ಕಚೇರಿಗೆ ಬರುವುದು ಬೇಡ. ಯಾರೂ ಅನ್ಯತಾ ಭಾವಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು ಎಂದಿದ್ದಾರೆ.

ಹಾಗೆಯೇ ಜನ್ಮದಿನದ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕುವುದು ಜಾಹೀರಾತುಗಳನ್ನು ನೀಡುವುದನ್ನ ಮಾಡಬಾರದು.  ದೇಶದ ಐಕ್ಯತೆ, ಸಾರ್ವಭೌಮತೆ ರಕ್ಷಣೆಗೆ ನಾವು ಯೋಧರ ಜತೆ ನಿಲ್ಲಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

Key words: Don’t, celebrate, my birthday, DCM DK Shivakumar

The post ಈ ಬಾರಿ ನನ್ನ ಜನ್ಮದಿನಾಚಾರಣೆ ಬೇಡ: ಯೋಧರ ಜತೆ ನಿಲ್ಲೋಣ-ಡಿಸಿಎಂ ಡಿಕೆ ಶಿವಕುಮಾರ್ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಹುಲ್ ಗಾಂಧಿಗೆ ದೇಶದ ಅಭಿವೃದ್ದಿ ಬಗ್ಗೆ ಅರಿವಿಲ್ಲ- ಪ್ರಧಾನಿ ಮೋದಿ ಟೀಕೆ

ಕೊಚ್ಚಿ,ಮಾರ್ಚ್,11,2026 (www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ‘ದೇಶದಲ್ಲಿ ಆಗುತ್ತಿರುವ...

ಜೋಡಿ ಕೊಲೆ:  ಅರೋಪಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಮೈಸೂರು ಕೋರ್ಟ್

ಮೈಸೂರು,ಮಾರ್ಚ್,11,2026 (www.justkannada.in): ಜಮೀನಿನಲ್ಲಿ ವ್ಯವಸಾಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಣ್ಣ...

ಸಿಎಂ ಸಿದ್ದರಾಮಯ್ಯ ಅವರ ನಾಳಿನ ಮೈಸೂರು ಪ್ರವಾಸ ರದ್ದು

ಬೆಂಗಳೂರು,ಮಾರ್ಚ್,11,2026 (www.justkannada.in): ನಾಳೆ ಸಿಎಂ ಸಿದ್ದರಾಮಯ್ಯ ಹಮ್ಮಿಕೊಂಡಿದ್ದ  ಮೈಸೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಹೌದು...

ಒಳಮೀಸಲಾತಿ ಜಾರಿಗೆ ಬದ್ದ: ಒತ್ತಡ ಹಾಕುವ ಅವಶ್ಯಕತೆ ಇಲ್ಲ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,11,2026 (www.justkannada.in): ಒಳ ಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆ ಬಿದ್ದಿದ್ದು ನೇಮಕಾತಿಗಳು...