ಮಂಡ್ಯ,ಫೆಬ್ರವರಿ,3,2026 (www.justkannada.in): ಫೆಬ್ರವರಿ ಮಾಹೆಯಲ್ಲಿ ಉದ್ಯೋಗ ಮೇಳ ಸ್ಥಳೀಯ ಮತ್ತು ಮೈಸೂರು, ಬೆಂಗಳೂರು ಕಂಪನಿಗಳಿಗೆ ಹೆಚ್ಚು ಒತ್ತು ನೀಡಿ, ಉದ್ಯೋಗ ಆಕಾಂಕ್ಷಿಗಳಿಗೆ ಆಸಕ್ತಿಯುತ ಉದ್ಯೋಗ ಅವಕಾಶಗಳನ್ನು ಕಲ್ಪಿಬೇಕು. ಜಿಲ್ಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್. ನಂದಿನಿ ಅವರು ತಿಳಿಸಿದರು.
ಫೆಬ್ರವರಿ ಮಾಹೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಉದ್ಯೋಗ ಮೇಳ” ಕುರಿತು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿ.ಪಂ ಸಿಇಒ ಕೆ.ಆರ್ ನಂದಿನಿ ಮಾತನಾಡಿದರು.
ಮಂಡ್ಯ ಬಾಲಕರ ಪದವಿ ವಿಶ್ವ ವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾವುದು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೌಶಲಯುತ ಯುವ ಜನರಿಗೆ ಉದ್ಯೋಗ ಕಲ್ಪಿಸಬೇಕು. ಉದ್ಯೋಗ ಮೇಳವನ್ನು ಆಯೋಜನೆ ಕುರಿತು ಹೆಚ್ಚು ಪ್ರಚಾರ ನೀಡಬೇಕು ಎಂದು ಹೇಳಿದರು.
ಉದ್ಯೋಗ ಮೇಳ ಕುರಿತು ಆಟೋ ಪ್ರಚಾರ, ಬ್ಯಾನರ್, ಕರಪತ್ರ, ದೂರದರ್ಶನ ಹಾಗೂ ಸರ್ಕಾರಿ ಕಚೇರಿಗಳಲ್ಲಿನ ಆವರಣದಲ್ಲಿ ಜಾಹೀರಾತು ಫಲಕಗಳನ್ನು ಹಾಕಬೇಕು. ಸೋಶಿಯಲ್ ಮಿಡಿಯಾ ಮೂಲಕ ಪ್ರಚಾರ ಪಡಿಸಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಸೂಕ್ತ ಮಾಹಿತಿಯೊಂದಿಗೆ ಆಕಾಂಕ್ಷಿಗಳ ಅರ್ಹತೆಯ ಅನುಗುಣವಾಗಿ ಉದ್ಯೋಗವನ್ನು ಕಲ್ಪಿಸಬೇಕು ಎಂದು ಕೆ.ಆರ್ ನಂದಿನಿ ಸೂಚಿಸಿದರು.
ಜಿಲ್ಲೆಗೆ ಸೀಮಿತವಾಗದೇ ಬೇರೆ ಸ್ಧಳಗಳಲ್ಲಿಯೂ ಉದ್ಯೋಗ ಸಿಕ್ಕರೆ ಅಲ್ಲಿ ಹೋಗಿ ಕೆಲಸ ಮಾಡುವಂತೆ ಸ್ಥಳೀಯ ಅಧಿಕಾರಿಗಳು ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ಶಾಲಾ ಕಾಲೇಜು, ಪ್ರಾಂಶುಪಾಲರಿಗೆ ಉದ್ಯೋಗ ಪೂರ್ವ ತಯಾರಿ ಬಗ್ಗೆ ಅರಿವು ಮೂಡಿಸುವುದು. ಉದ್ಯೋಗ ಮೇಳದಲ್ಲಿ ವಿವಿಧ ರೀತಿಯ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ. ಉದ್ಯೋಗ ಆಕಾಂಕ್ಷಿಗಳು ನಿಮ್ಮ ಆಯ್ಕೆಯ ಉದ್ಯೋಗವನ್ನು ಅರಿಸಿಕೊಳ್ಳಬಹುದು ಎಂದು ಹೇಳಿದರು.
ಎಲ್ಲಾ ತಾಲ್ಲೂಕು ಕ್ಷೇತ್ರದಲ್ಲಿ ಉದ್ಯೋಗ ಮೇಳದ ಬಗ್ಗೆ ಜನರಿಗೆ ಮಾಹಿತಿ ದೊರಕುವಂತೆ ತಿಳಿಸಬೇಕು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಎಲ್ಲಾ ಯುವ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಮೇಳದ ಬಗ್ಗೆ ಅರಿವು ಮೂಡಿಸಬೇಕು. ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಕುರಿತು ಸಭೆ ನಡೆಸಿ ತಾಲ್ಲೂಕು ಮತ್ತು ಗ್ರಾಮೀಣ ಪಂಚಾಯ್ತಿಗಳಲ್ಲಿ ಉದ್ಯೋಗ ಮೇಳದ ನೊಂದಣಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಕೆಆರ್ ನಂದಿನಿ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ರೂಪಶ್ರೀ, ನಬಾರ್ಡ್ ನ ಅಧಿಕಾರಿಗಳಾದ ಹರ್ಷಿತಾ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ನಾಗಾನಂದ, ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕರಾದ ಬಾಬಾ ಸಾಹೇಬ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಡಾ.ವಿ.ಎಸ್. ಅಶೋಕ್,ಡಿ. ಡಿ. ಪಿ ಲೋಕೇಶ್, ಪ್ರಸನ್ನ ಕುಮಾರ್, ವಿ ಸಿ. ಫಾರಂ ನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮುಖ್ಯಸ್ಥರಾದ ಡಾ. ಕಮಲಾ ಬಾಯಿ ಕೂಡಗಿ, ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಟಿ ದಿನೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Key words: Job Fair, February, Mandya, ZP, CEO, K.R. Nandini
The post ಉದ್ಯೋಗ ಮೇಳ: ಉದ್ಯೋಗ ಆಕಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಿ- ಕೆ.ಆರ್. ನಂದಿನಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




