30
August, 2025

A News 365Times Venture

30
Saturday
August, 2025

A News 365Times Venture

ಒಳಮೀಸಲಾತಿ ಅನುಷ್ಠಾನದಲ್ಲಿ ವಿಳಂಬವಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ ಕೂಡಲೇ ಅನುಷ್ಠಾನ- ಸಚಿವ ಕೆ.ಎಚ್ ಮುನಿಯಪ್ಪ.

Date:

 

 ಮೈಸೂರು ಜುಲೈ,18 ,2025 (www.justkannada.in): ಒಳಮೀಸಲಾತಿ ಅನುಷ್ಠಾನದಲ್ಲಿ ವಿಳಂಭವಿಲ್ಲ ಸರ್ಕಾರಕ್ಕೆ  ವರದಿ ಸಲ್ಲಿಸಿದ ಕೂಡಲೆ ಮುಖ್ಯಮಂತ್ರಿಗಳು ಅನುಷ್ಠಾನಗೊಳಿಸಲು ಕ್ರಮ ವಹಿಸಲಿದ್ದಾರೆ ಎಂದು ಆಹಾರ ಸಚಿವ ಕೆಹೆಚ್. ಮುನಿಯಪ್ಪ ಹೇಳಿದರು.

ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಸಭೆಯನ್ನು ಇಂದು ಮೈಸೂರಿನ ಲಿ ರುಚಿ ಪ್ರಿನ್ಸ್ ಹೋಟೆಲ್ ನಲ್ಲಿ  ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಅವರು ಉದ್ಘಾಟಿಸಿದರು.

ಕರ್ನಾಟಕ ಮಾದರ  ಮಹಾಸಭಾದ  ಸದಸ್ಯರಾಗಲು ಸಾಮಾನ್ಯ ಸದಸ್ಯತ್ವ 500 ರೂಗಳು ಅಜೀವ ಸದಸ್ಯತ್ವ 25 ಸಾವಿರ ,ಪೋಷಕ ಸದಸ್ಯತ್ವ  50 ಸಾವಿರ ಮಹಾ ಪೋಷಕ ಸದಸ್ಯತ್ವ ಸದಸ್ಯರಾಗಲು 1ಲಕ್ಷರೂಗಳನ್ನು ನಿಗದಿಪಡಿಸಿದ್ದು ಎಲ್ಲಾ ಸಮುದಾಯದ ಸದಸ್ಯರು  ನೊಂದಣಿ ಮಾಡಲು ಮನವಿ ಮಾಡಿದರು.

ಈ ಸಮುದಾಯದ ಸಂಘದ ಪ್ರಾರಂಭ ಸುಮಾರು 12 ವರ್ಷಗಳಿಂದಲೂ ನಡೆಯುತ್ತಿದೆ ಆದರೆ ಇದಕ್ಕೆ ಸರಿಯಾದ ನೆಲೆ ಇಲ್ಲಾ ಆಗಾಗಿ ನಾವು ಈಗ ತೀರ್ಮಾನಿಸಿದ್ದು ಮಾದರ ಮಹಾಸಭಾ ಎಂಬುದು  ಒಕ್ಕಲಿಗರ ಸಂಘ ,ವೀರಶೈವ ಮಹಾಸಭಾ,ಕುರುಬರ ಸಂಘದ ರೀತಿಯಲ್ಲಿ ನಮ್ಮ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು  ನಮ್ಮ ಸಂಘದ ಪಧಾದಿಕಾರಗಳು  ಸಮುದಾಯದ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗಬೇಕು ಎಂದರು.

ಕರ್ನಾಟಕ ಮಾದರ ಮಹಾಸಭಾದ ರಾಜ್ಯದ ಎಲ್ಲಾ ವಿಭಾಗ ಮಟ್ಟದ ಜಿಲ್ಲೆಯಲ್ಲಿ ಸಭೆಯನ್ನು ನಡೆಸಿದ್ದು ಇಂದು ಮೈಸೂರು ವಿಭಾಗದಲ್ಲಿ ಸಭೆ ನಡೆಸುತ್ತಿದ್ದು ಕಾರಣಾಂತರದಿಂದ ತಡವಾಗಿದೆ ಇನ್ನೂ ಯಾವುದೇ ಕಾರಣಕ್ಕೂ ವಿಲಂಭ ಮಾಡದೆ ನಾವು ಈ ಸಂಘಟನೆಯನ್ನು ಮಾಡುತ್ತಿದ್ದೇವೆ

ನಮ್ಮ ಹೋರಾಟದ ಸ್ಪೂರ್ತಿ ಎನ್.ರಾಚಯ್ಯ ಅವರಿಂದ ನಮ್ಮ ಊರಿನಲ್ಲಿಯೇ  ಒಂದು ಗಲಾಟೆಯಾದಾಗ ಅವರು ಬಂದು ಬಗೆಹರಿಸಿದ ಮಹಾನ್ ವ್ಯಕ್ತಿ ಅವರು ಈ ಹೋರಾಟದ ಸ್ಪೂರ್ತಿ ವ್ಯಕ್ತಿಯಾಗಿದ್ದಾರೆ

ನಾವು ಈ ರಾಜಕೀಯದಲ್ಲಿ ಏನೇ ಮಾಡಿದರು ಸಮುದಾಯದ ಪರವಾಗಿ ಏನಾದರು ಮಾಡಬೇಕಲ್ಲಾ ಎಂಬ ಉದ್ದೇಶದಿಂದ ನಾವು ಎಲ್ಲಾ ಸನುದಾಯಗಳ ಸಂಘಟನೆಯ ಸಂಘವಾಗಿ ಈ ಕರ್ನಾಟಕ ಮಾದರ ಮಹಾಸಭಾ ದಲ್ಲಿ ಅಧ್ಯಕ್ಷರು ಪಧಾದಿಕಾರಿಗಳನ್ನು  ಹಂತ ಹಂತವಾಗಿ ನೇಮಕಮಾಡಲು ಒಂದು ಬೈಲಾ ಮಾಡಿದ್ದು ಅದರಂತೆ ನಾವು ಮಾಡಲು ಸಿದ್ದತೆ ಮಾಡಿದ್ದೀವಿ.

ನಾವು ಪಕ್ಷಾತೀತವಾಗಿ ಎಲ್ಲಾ ನಾಯಕರು ಸೇರಿ ಈ  ಸಮುದಾಯದ ಬಲವರ್ದನೆಗಾಗಿ  ಸಂಘದ ಅತ್ಯವಶ್ಯಕವಾಗಿದೆ ಎಂದರು.

ನಾವು ಬೆಂಗಳೂರಿನಲ್ಲಿ ಒಂದು ಕೇಂದ್ರ ಸ್ಥಾನವನ್ನು ಸ್ಥಾಪಿಸುತ್ತಿದ್ದು ಅದರ ಮೂಲಕ ಸಂಘಟನೆಗೆ ಸಹಕಾರಿಯಾಗಲಿದೆ

ಸ್ವಾಭಿಮಾನದಿಂದ ತಾವು 500 ರೂಗಳನ್ನು ಸಲ್ಲಿಸಿ ಸದಸ್ಯರಾಗಲು  ಸಹಕಾರಿಯಾಗಲಿದೆ ತಾವು ಈ ಒಂದು ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿ ಪ್ರತಿ ತಾಲ್ಲೂಕಿನಲ್ಲಿ 300 ರಿಂದ 500 ಜನ ಸದಸ್ಯಾಗಲಿಸಲು ಮುಖಂಡರು ಕ್ರಮವಹಿಸಬೇಕು.

ಪ್ರತಿ ಜಿಲ್ಲೆಗೆ ಕನ್ವಿನರ್ ಗಳ ನೇಮಕ ಮಾಡಿ ಅಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಾಧಾದಿಕಾರಗಳನ್ನು ನೇಮಕಮಾಡಲು  ಯೋಜನೆ ರೂಪಿಸುತ್ತಿದ್ದು ಹಂತ ಹಂತವಾಗಿ ತಾಲ್ಲೂಕಿನಲ್ಲಿಯೂ ಈ ಮಾದರಿಯೇ ಮಾಡುವುದು ಕನ್ವಿನರ್ ಗಳು ಹೆಚ್ಚಿನ ನೊಂದಣಿ ಮಾಡಿಸಲು ಸಹಕರಿಸಬೇಕು ಎಂದರು.

ನಾನು ಒಂದು ದಿನದ ಮುಂಚೆ ಮಾಹಿತಿ ನೀಡಿದ್ದು ಇಷ್ಟು ಮಟ್ಟದಲ್ಲಿ ಜನ ಸೇರಿದ್ದೀರಿ ನಿಮಗೆ ಒಳ್ಳೆಯದಾಗಲಿ. ಈ ಸಂಘಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷ, ಪಧಾದಿಕಾರಿಗಳನ್ನು ನೇಮಕ ಮಾಡಲಾಗುತ್ತದೆ  ಅದ್ದರಿಂದ ತಾವೆಲ್ಲಾರು ನೊಂದಣಿ ಕಾರ್ಯದಲ್ಲಿ ಮುಂದಾಗಬೇಕು ಎಂದರು

ನಾವು ಎಲ್ಲಾರು ಒಗ್ಗಟ್ಟಾಗಿ ಇರೋಣ ಒಗ್ಗಟ್ಟಾಗಿ ಇದ್ದರೆ ಮಾತ್ರ ನಾವು ಯಶಸ್ವಿಯಾಗಲು ಸಾದ್ಯ ಎಂದರು.

ಈ ಸಂಘದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಕಲ್ಪಿಸಿಕೊಡಲು ಹಾಗೂ ಉನ್ನತ ವ್ಯಾಸಾಂಗವಾದ IAS IPS  ನಂತ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತರಭೇತಿ ನೀಡಲು ರಚಿಸುವುದು ಸಮುದಾಯದ ಜನರ ಸಂಕಷ್ಟಕ್ಕೆ  ಸ್ಪಂದಿಸಲು ನೆರವಾಗುವಂತೆ ದೊಡ್ಡ ಮಟ್ಟದಲ್ಲಿ ಈ ಸಂಘವನ್ನು ನಿರ್ಮಿಸಲು ನಾವೆಲ್ಲಾರು ಪಕ್ಷಾತೀತವಾಗಿ ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇವೆ ಎಂದರು.

ಒಳಮೀಸಲಾತಿ ಬಗ್ಗೆ ಮಾತನಾಡಿದ ಸಚಿವರು  ಮುಂದಿನ 15 ದಿನಗಳಲ್ಲಿ ನ್ಯಾ.ನಾಗಮೋಹನ್ ದಾಸ್ ರವರು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದು ಒಳಮೀಸಲಾತಿ ಅನುಷ್ಠಾನ ವಿಳಂಬವಾಗುವುದಿಲ್ಲಾ  ಸಚಿವ ಸಂಪುಟದ ಎಲ್ಲಾ ಸಚಿವರು ಒಪ್ಪಿಗೆ ಸೂಚಿಸಿದ್ದು ಮಾನ್ಯ ಮುಖ್ಯಮಂತ್ರಿಗಳು ಒಳ ಮೀಸಲಾತಿ ಅನುಷ್ಠಾನ ಮಾಡಲು ಬದ್ದರಾಗಿದ್ದಾರೆ.

ಒಳ ಮೀಸಲಾತಿ ಅನುಷ್ಠಾನಕ್ಕೆ ಅವಿರೋಧವಾಗಿ ತೀರ್ಮಾಣವಾಗಿದ್ದು ಅನುಷ್ಠಾನವಾಗಲು  ವಿಳಂಭ ವಾಗುವುದಿಲ್ಲಾ.

ಈ ಸಂದರ್ಭದಲ್ಲಿ ಮಾಜಿ  ಸಚಿವರಾದ ಕೋಟೆ ಶಿವಣ್ಣ , ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ,ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ರಮೇಶ್, ಧರ್ಮಸೇನ್  ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಶಿವಪ್ಪ ,ಪುರುಷೋತ್ತಮ್ ರಾಮಕೃಷ್ಣ , ಹಾಗೂ ಸಮುದಾಯಾದ ಮುಖಂಡರು ಉಪಸ್ಥಿತರಿದ್ದರು.

Key words: no delay, implementation , reservation; Minister KH Muniyappa.

The post ಒಳಮೀಸಲಾತಿ ಅನುಷ್ಠಾನದಲ್ಲಿ ವಿಳಂಬವಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ ಕೂಡಲೇ ಅನುಷ್ಠಾನ- ಸಚಿವ ಕೆ.ಎಚ್ ಮುನಿಯಪ್ಪ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...