30
July, 2025

A News 365Times Venture

30
Wednesday
July, 2025

A News 365Times Venture

ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನಿರ್ದೇಶಕ ಕಂ ನಟ  ಅನುರಾಗ್ ಕಶ್ಯಪ್

Date:

 

ಬೆಂಗಳೂರು, ಮಾ.೦೮,೨೦೨೫:  ಎರಡು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ದಕ್ಷಿಣ ಭಾರತದ ಚಿತ್ರರಂಗದತ್ತ ಗಮನ ಹರಿಸಿದ್ದಾರೆ. ವಿಶಿಷ್ಟ ಚಲನಚಿತ್ರ ನಿರ್ಮಾಣ ಶೈಲಿಗೆ ಹೆಸರುವಾಸಿಯಾದ ಅನುರಾಗ್ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಮತ್ತು ಈಗ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸುಜಯ್ ಶಾಸ್ತ್ರಿ ನಿರ್ದೇಶನದ “8”  ಚಿತ್ರದ ಮೂಲಕ ಅವರು ಕ್ರೀಡಾ ಹಿನ್ನೆಲೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎವಿಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರದ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಸೂಪರ್ ಮಾಡೆಲ್ ಆಗಿ ನಟಿಯಾಗಿ ಮಾರ್ಪಟ್ಟಿರುವ ಆಯೇಷಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುರಾಗ್ ಅವರ ಪಾತ್ರದ ವಿವರಗಳು ಮತ್ತು ಚಿತ್ರದ ಶೂಟಿಂಗ್ ವೇಳಾಪಟ್ಟಿ ಬಗ್ಗೆ ಇನ್ನು ಯಾವುದೇ ಬಹಿರಂಗಗೊಂಡಿಲ್ಲ. ಒಟ್ಟಾರೆ 27 ದಿನಗಳ ಅವಧಿಯಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಹೊಂದಿದೆ ಚಿತ್ರತಂಡ.

ಪೆಡ್ರೋ ಖ್ಯಾತಿಯ ನಟೇಶ್ ಹೆಗ್ಡೆ ನಿರ್ದೇಶನದ ಮುಂಬರುವ ಕನ್ನಡ ಚಿತ್ರ “ ವಾಘಚಿಪಾನಿ” ಯನ್ನು ಅನುರಾಗ್ ನಿರ್ಮಿಸುತ್ತಿದ್ದಾರೆ.

ಅನುರಾಗ್ ಈಗಾಗಲೇ ತಮಿಳು ಚಿತ್ರ “ಮಹಾರಾಜ”  ಮತ್ತು ಮಲಯಾಳಂ ಚಿತ್ರ “ ರೈಫಲ್ ಕ್ಲಬ್” ನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ವಿಡುದಲೈ- ೨ ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದು, ತೆಲುಗು ಚಿತ್ರ “ಡಕಾಯಿತ”  ಚಿತ್ರದಲ್ಲಿ ಅವರ ಮುಂಬರುವ ಪಾತ್ರವು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ವಿಸ್ತರಿಸುತ್ತಿರುವ ಫಿಲ್ಮೋಗ್ರಫಿಯನ್ನು ಹೆಚ್ಚಿಸುತ್ತದೆ.

key words: Director – actor, Anurag Kashyap, debut in Kannada

SUMMARY:

Director–actor Anurag Kashyap makes his debut in Kannada. He will be seen in a sports-themed film “8”, directed by Sujay Shastri. The film is produced by Aravind Venkatesh Reddy under the banner of AVR Pictures.

The post ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನಿರ್ದೇಶಕ ಕಂ ನಟ  ಅನುರಾಗ್ ಕಶ್ಯಪ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂ ಸಿದ್ದರಾಮಯ್ಯಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ- ಸಚಿವ ದಿನೇಶ್ ಗುಂಡೂರಾವ್‍

ಕಾರವಾರ,ಜುಲೈ,30,2025 (www.justkannada.in): ಸಿಎಂ ಸಿದ್ದರಾಮಯ್ಯಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ...

ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ: ಯಾವುದೇ ಸಾಕ್ಷಿ ನೀಡಿಲ್ಲ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಜುಲೈ,30,2025 (www.justkannada.in):  ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿಪಕ್ಷದವರು ಆರೋಪ...

ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಣೆ: ಖುದ್ದು ಫೀ‍ಲ್ಡ್ ಗಿಳಿದು ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್

ಮೈಸೂರು,ಜುಲೈ,30,2025 (www.justkannada.in):  ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು...

ರಾಜ್ಯದಲ್ಲಿ ರಸಗೊಬ್ಬರ ಕೊರತೆ: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಡಾ.ಕೆ. ಸುಧಾಕರ್

ನವದೆಹಲಿ,ಜುಲೈ,30,2025 (www.justkannada.in): ರಾಜ್ಯದಲ್ಲಿ ರಸಗೊಬ್ಬರದ ಕೊರತೆಯುಂಟಾಗಿದ್ದು ರೈತರು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ...