13
February, 2026

A News 365Times Venture

13
Friday
February, 2026

A News 365Times Venture

ಕರ್ನಾಟಕ ಮಾಡೆಲ್: ಮೈಸೂರು ಶಿಲ್ಪಿ ನಿರ್ಮಿಸಿದ್ದ ‘ಸ್ಪೀಕರ್ ಪೀಠ’ ಯುಪಿ ವಿಧಾನಸಭೆಗೆ ಸ್ಥಾಪನೆ

Date:

ಲಖನೌ,ಫೆಬ್ರವರಿ,5,2026 (www.justkannada.in):  ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕರ್ನಾಟಕದ ಕೈಚಳಕ ಮತ್ತೊಮ್ಮೆ ಮೆರೆದಿದೆ. ಮೈಸೂರಿನ ಪ್ರಸಿದ್ಧ ಶಿಲ್ಪಿ ಕೈಜರ್ ಆಲಿ ಖಾನ್ ನಿರ್ಮಿಸಿದ ಹೊಸ ಸ್ಪೀಕರ್ ಪೀಠವನ್ನು ಬುಧವಾರ ಅಧಿಕೃತವಾಗಿ ಸ್ಥಾಪಿಸಲಾಗಿದೆ.

ಹೌದು, ಉತ್ತರ ಪ್ರದೇಶ ವಿಧಾನಸಭೆಗೆ ಮೈಸೂರಿನ ಕೈಜರ್ ಆಲಿ ಖಾನ್ ನಿರ್ಮಿಸಿದ ಸ್ಪೀಕರ್ ಪೀಠ ಸ್ಥಾಪನೆ ಮಾಡಲಾಗಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ವಿಧಾನಸಭೆಯ ಆಂತರಿಕ ವಿನ್ಯಾಸದಲ್ಲಿ ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಪ್ರತಿಬಿಂಬಿಸಲು ವಿಶೇಷ ಗಮನ ಹರಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಶಿಲ್ಪಕಲೆಯ ಮಾದರಿಯನ್ನು ಆಯ್ಕೆ ಮಾಡಲಾಗಿದೆ.

ಮೈಸೂರಿನ ಶಿಲ್ಪಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಪೀಠವು ಅಲಂಕಾರಿಕ ಕೆತ್ತನೆಗಳು, ಸಾಂಪ್ರದಾಯಿಕ ಮೋಟಿಫ್‌ ಗಳು ಹಾಗೂ ಘನತೆಯನ್ನು ಪ್ರತಿಬಿಂಬಿಸುವ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಇದನ್ನು “ಕರ್ನಾಟಕ ಮಾಡೆಲ್” ಎಂದು ಯೋಗಿ ಸರ್ಕಾರ ಪ್ರಶಂಸಿಸಿದೆ.

ಈ ಮೂಲಕ ಮೈಸೂರು ಶಿಲ್ಪಕಲೆ ಉತ್ತರ ಭಾರತದ ಪ್ರಮುಖ ಆಡಳಿತ ಕೇಂದ್ರದಲ್ಲೂ ತನ್ನ ಗುರುತು ಮೂಡಿಸಿದ್ದು, ಕರ್ನಾಟಕದ ಕಲಾತ್ಮಕ ಪರಂಪರೆಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ದೊರೆತಿದೆ.

Key words: Karnataka model, Speaker Peeth, Mysore sculptor, UP, Legislative Assembly

The post ಕರ್ನಾಟಕ ಮಾಡೆಲ್: ಮೈಸೂರು ಶಿಲ್ಪಿ ನಿರ್ಮಿಸಿದ್ದ ‘ಸ್ಪೀಕರ್ ಪೀಠ’ ಯುಪಿ ವಿಧಾನಸಭೆಗೆ ಸ್ಥಾಪನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುರ್ಚಿ ಉಳಿಸಿಕೊಳ್ಳಲು ಶಾಸಕರಿಗೆ ವಿದೇಶಿ ಪ್ರವಾಸ ಭಾಗ್ಯ- ಬಿವೈ ವಿಜಯೇಂದ್ರ ಟೀಕೆ

ಬೆಳಗಾವಿ,ಫೆಬ್ರವರಿ,12,2026 (www.justkannada.in): ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶಾಸಕರಿಗೆ ವಿದೇಶ ಪ್ರವಾಸ...

ಯತೀಂದ್ರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಆರೋಪ: ಬಿಜೆಪಿ ಐಟಿ ಸೆಲ್ ವಿರುದ್ದ ಕಾಂಗ್ರೆಸ್ ದೂರು

ಮೈಸೂರು,ಫೆಬ್ರವರಿ,12,2026 (www.justkannada.in): ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಪೋಸ್ಟ್...

ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಉದ್ಘಾಟಿಸಿದ ಸಚಿವ ಡಾ.ಎಂ.ಸಿ ಸುಧಾಕರ್

ಬೆಂಗಳೂರು,ಫೆಬ್ರವರಿ,12,2026 (www.justkannada.in): ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳ ತಂತ್ರಜ್ಞಾನ ಆಲೋಚನೆಗೆ, ಕಲ್ಪನೆಗೆ ಹಾಗೂ...

ಪ್ರಸಕ್ತ ವರ್ಷದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ: ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಫೆಬ್ರವರಿ, 12,2026 (www.justkannada.in):  ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ...