ದಾವಣಗೆರೆ,ಮಾರ್ಚ್,31,2026 (www.justkannada.in): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಸ್ಲೀಂ ಸಮುದಾಯಕ್ಕೆ ಟಿಕೆಟ್ ನೀಡದಿರುವುದು ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಅವಮಾನ ಮಾಡಿದ್ದಾರೆಂದು ಕಾಂಗ್ರೆಸ್ ವಿರುದ್ದ ಮುಸ್ಲೀಂ ಮುಖಂಡರು ಅಸಮಾಧಾನಗೊಂಡಿದ್ದಾರೆಂದು ವರದಿಯಾದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ದ ಅಲ್ಪಸಂಖ್ಯಾತರು ಮುನಿಸಿಕೊಂಡಿಲ್ಲ, ಸಿಟ್ಟಾಗಿಲ್ಲ. ಇದೆಲ್ಲಾ ಬಿಜೆಪಿ ಷಡ್ಯಂತ್ರ. ಅಲ್ಪಂಸಂಖ್ಯಾತ ಮತಗಳನ್ನ ಬೇರ್ಪಡಿಸುವ ಉದ್ದೇಶ ಬಿಜೆಪಿಗಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನ ನಾನು ಹೋಗ ಬಾರೋ ಅಂತಾನೆ ಕರಯೋದು. ನಾಳೆ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಪ್ರಚಾರಕ್ಕೆ ಬರುತ್ತಾರೆ. ಆ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಬರಬಹುದು ಎಂದು ಸಚಿವ ಮಲ್ಲಿಕಾರ್ಜುನ್ ತಿಳಿಸಿದರು.
Key words: Muslims, against, Congress, Minister, SS Mallikarjun
The post ಕಾಂಗ್ರೆಸ್ ವಿರುದ್ದ ಮುಸ್ಲೀಮರು ಮುನಿಸಿಕೊಂಡಿಲ್ಲ: ಎಲ್ಲಾ ಬಿಜೆಪಿ ಷಡ್ಯಂತ್ರ- ಸಚಿವ ಮಲ್ಲಿಕಾರ್ಜುನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




