28
March, 2026

A News 365Times Venture

28
Saturday
March, 2026

A News 365Times Venture

ಕಾಲ್ತುಳಿತ ಪ್ರಕರಣ: ‘ಕೈ’ ಹೈಕಮಾಂಡ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು

Date:

ಬೆಂಗಳೂರು,ಜೂನ್,7,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಹೈಕಮಾಂಡ್‌ ಗೆ ಧಮ್, ತಾಕತ್ತಿದ್ದರೇ  ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು ಹಾಕಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆದಿದ್ದರೂ ಕಾಂಗ್ರೆಸ್‌‍ ಹೈಕಮಾಂಡ್‌ ಒಂದೇ ಒಂದು ಸಾಂತ್ವಾನವನ್ನೂ ಹೇಳಿಲ್ಲ. ಬದಲಾಗಿ ಸರ್ಕಾರವನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರ ರಾಜೀನಾಮೆ ಪಡೆಯಲು ನಿಮಗೆ ಧಮ್ ತಾಕತ್ತಿಲ್ಲವೇ..? ಎಂದು ವಾಗ್ದಾಳಿ ನಡೆಸಿದರು.

ಕಾಲ್ತುಳಿತ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ  ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ನೇರ ಕಾರಣ. ಹೀಗಾಗಿ ಇಬ್ಬರೂ ಗೌರವಯುತವಾಗಿ ರಾಜೀನಾಮೆ ನೀಡಬೇಕು. ನಂತರ ಇಬ್ಬರನ್ನು ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಎಂದು ಆಗ್ರಹಿಸಿದರು.

ಆರ್‌ಸಿಬಿ, ಡಿಎನ್‌ಎ ಮತ್ತಿತರರನ್ನು ತನಿಖಾಧಿಕಾರಿಗಳು ಬಂಧಿಸುವುದಾದರೆ ಸಿಎಂ ಮತ್ತು ಡಿಸಿಎಂ ಅವರುಗಳನ್ನು ಏಕೆ ಬಂಧಿಸಬಾರದು? ಈ ಪ್ರಕರಣದಲ್ಲಿ ಈ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ. ಎಲ್ಲದಕ್ಕೂ ಮೂಗು ತೂರಿಸುವ ಹೈಕಮಾಂಡ್‌ ನವರು ಈಗ ಯಾಕೆ ಮೌನಕ್ಕೆ ಜಾರಿದ್ದಾರೆ? ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು ಎಲ್ಲಿದ್ದೀರಿ ಎಂದು ಹರಿಹಾಯ್ದರು.vtu

Key words: stampede case, Union Minister, Shobha Karandlaje, Congress, high command

The post ಕಾಲ್ತುಳಿತ ಪ್ರಕರಣ: ‘ಕೈ’ ಹೈಕಮಾಂಡ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

  ಮೈಸೂರು :ಮಾರ್ಚ್ -28: ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವೈಚಾರಿಕತೆ...

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಆರೋಪ: ಸ್ಪಷ್ಟನೆ  ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,28,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್  ಅಳವಡಿಸಲಾಗಿದೆ...

SSLC ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್, 28, 2026 (www.justkannada.in): ಈ ವರ್ಷದಿಂದಲೇ ಎಸ್ ಎಸ್...

ಹಿಂದಿ ಕಲಿಯಬಾರದು ಅಂತೇನಿಲ್ಲ, ಆದ್ರೆ ಪರೀಕ್ಷೆ ಕಡ್ಡಾಯವಾಗಬಾರದಷ್ಟೆ- ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದಲ್ಲಿಈ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿ ಮಾಡಲಾಗುತ್ತದೆ.  ಸರ್ಕಾರದಿಂದ...