ಮಂಡ್ಯ,ಜುಲೈ,14, 2025 (www.justkannada.in): ಸಿಎಂ ಬದಲಾವಣೆ ವಿಚಾರಕ್ಕೆ ಈಗಾಗಲೇ ಅಂತಿಮ ತೆರೆ ಎಳೆಯಲಾಗಿದ್ದು ಸಿಎಂ ಸಿದ್ದರಾಮಯ್ಯ ತಾನೇ ಐದು ವರ್ಷ ಸಿಎಂ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗೆ ಫುಲ್ ಸ್ಟಾಪ್ ಬಿದ್ದಿದೆ. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ರವಿಗಣಿಗ ಭವಿಷ್ಯ ನುಡಿದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರವಿ ಗಣಿಗ, ಕಾಲ ಕೂಡಿ ಬಂದಾಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು. ಆಗೇ ಆಗುತ್ತಾರೆ. ಎಲ್ಲಾ ಶಾಸಕರು ಡಿಕೆ ಶಿವಕುಮಾರ್ ಪರ ಇದ್ದಾರೆ ಎಂದರು.
ಬಿಜೆಪಿ ಜೆಡಿಎಸ್ ಅನುದಾನ ತಾರತಮ್ಯ ಕುರಿತು ಪ್ರತಿಕ್ರಿಯಿಸಿದ ಶಾಸಕ ರವಿಗಣಿಗ, ಗ್ಯಾರಂಟಿಯಿಂದ ಅನುದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ನೂರಾರು ಕೋಟಿ ಅನುದಾನ ನಮಗೆ ನೀಡಲಾಗಿದೆ. ಕೆಆರ್ ಪೇಟೆಗೆ ಅನುದಾನ ತಾರತಮ್ಯ. ಕೆಆರ್ ಪೇಟೆ ಶಾಸಕರು ನಮ್ಮ ಪಕ್ಷದವರಾ..? ಎಂದು ಪ್ರಶ್ನಿಸಿದರು.
Key words: DK Shivakumar, become, CM, MLA, Ravi Ganiga
The post ಕಾಲ ಕೂಡಿ ಬಂದಾಗ ಡಿಕೆಶಿ ಸಿಎಂ ಆಗೇ ಆಗುತ್ತಾರೆ- ಶಾಸಕ ರವಿ ಗಣಿಗ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.