3
March, 2026

A News 365Times Venture

3
Tuesday
March, 2026

A News 365Times Venture

ಕೆಇಎ ಸುಧಾರಣಾ ಕ್ರಮಗಳಿಗೆ ಮಹಾರಾಷ್ಟ್ರ ನಿಯೋಗ ಮೆಚ್ಚುಗೆ  

Date:

ಬೆಂಗಳೂರು,ಜೂನ್,23,2025 (www.justkannada.in):  ಮಹಾರಾಷ್ಟ್ರ ಸರ್ಕಾರದ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ಸಮೀರ್ ಕುಮಾರ್ ಬಿಸ್ವಾಸ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಇಲ್ಲಿನ ಪರೀಕ್ಷಾ ವ್ಯವಸ್ಥೆ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿತು.

ಬಿಸ್ವಾಸ್ ಅವರ ಜತೆ ಮಹಾರಾಷ್ಟ್ರ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ಆಯುಕ್ತರು ಹಾಗೂ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ  ಹಿರಿಯ ಐಎಎಸ್ ಅಧಿಕಾರಿ ದಿಲೀಪ್ ದೇಸಾಯಿ ಅವರು ಕೂಡ ಇದ್ದರು.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೆಇಎ ಕಾರ್ಯವೈಖರಿ, ಪಾರದರ್ಶಕತೆ ಸಲುವಾಗಿ ಕೈಗೊಂಡ ಹಲವು ಸುಧಾರಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ನಿಯೋಗಕ್ಕೆ ವಿವರಿಸಿದರು.

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ನಂತರ ಸೀಟು ಹಂಚಿಕೆ ಮಾಡುವುದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಅಕ್ರಮ ತಡೆಯಲು ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆಯೂ ವಿವರಿಸಲಾಯಿತು.

ಕೆಇಎ ಅಳವಡಿಸಿಕೊಂಡಿರುವ ಆನ್ ಲೈನ್ ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆ..

ನಕಲಿ ಅಭ್ಯರ್ಥಿಗಳ ತಡೆಗೆ ಜಾರಿ‌ ಮಾಡಿರುವ ಮುಖ ಚಹರೆ ಪತ್ತೆ ತಂತ್ರಜ್ಞಾನ, ವೆಬ್ ಕಾಸ್ಟಿಂಗ್, ಏಕ ಕಾಲದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಮಹಾರಾಷ್ಟ್ರದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.

ಸಿಇಟಿ ವ್ಯವಸ್ಥೆಯನ್ನು ಮೊದಲು ಜಾರಿ ಮಾಡಿದ್ದೇ ಕರ್ನಾಟಕ. ಅದರ ಮಾದರಿಯನ್ನು ಅಧ್ಯಯನ ಮಾಡುವ ಸಲುವಾಗಿ ಮಹಾರಾಷ್ಟ್ರದ ಈ ತಂಡ ರಾಜ್ಯಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಬಂದಿದೆ.vtu

Key words: Maharashtra, delegation, appreciation, KEA

The post ಕೆಇಎ ಸುಧಾರಣಾ ಕ್ರಮಗಳಿಗೆ ಮಹಾರಾಷ್ಟ್ರ ನಿಯೋಗ ಮೆಚ್ಚುಗೆ   appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮೈಸೂರು,ಮಾರ್ಚ್,3,2026 (www.justkannada.in): ಮೈಸೂರು ನಗರದ 50ನೇ ವಾರ್ಡ್‌ನ ಬೆಸ್ತಕೇರಿ ಪ್ರದೇಶದಲ್ಲಿ ನೀರಿನ...

‘Whistle Blower Policy’ ಜಾರಿ:  ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ಬೆಂಗಳೂರು, ಮಾರ್ಚ್,3,2026 (www.justkannada.in): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ...

ಖಮನೈ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನ: ಸೋನಿಯಾ ಗಾಂಧಿ ಕಿಡಿ

ನವದೆಹಲಿ, ಮಾರ್ಚ್, 3,2026 (www.justkannada.in): ಇರಾನ್ ಮೇಲೆ ಇಸ್ರೇಲ್, ಅಮೇರಿಕಾ ಜಂಟಿ...

ಮಧ್ಯ ಪ್ರಾಚ್ಯ ಕೊಲ್ಲಿ ದೇಶಗಳಲ್ಲಿ ಘರ್ಷಣೆ: ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು ಗ್ರಾಮಾಂತರ, ಮಾರ್ಚ್,3,2026 (www.justkannada.in):  ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ,ಸಂಘರ್ಷ...