ರಾಯಚೂರು,ಜೂನ್,16,2025 (www.justkannada.in): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 11 ವರ್ಷದ ಆಡಳಿತಾವಧಿಗೆ ಸಿಎಂ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನರು ಝೀರೋ ಮಾರ್ಕ್ಸ್’ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಹುಲ್ ಗಾಂಧಿಗೆ ಜನರು ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ತಮ್ಮ ಖುರ್ಚಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಆಡಳಿತಕ್ಕೆ ಶೂನ್ಯ ಮಾರ್ಕ್ಸ್ ಕೊಟ್ಟಿದ್ದಾರೆ. 2014 ರಿಂದ 30ರಿಂದ 32 ಸಾರಿ ರಾಹುಲ್ ಗಾಂಧಿ ಲಾಂಚ್ ಆದರು. ಚಂದ್ರಯಾನ ಒಂದು ಸಾರಿ ಫೇಲ್ ಆದ ಮೇಲೆ ಲಾಂಚಿಂಗ್ ಯಶಸ್ವಿಯಾಯಿತು. ಆದರೆ ರಾಹುಲ್ ಗಾಂಧಿ ಯಶಸ್ವಿಯಾಗಿಲ್ಲ, ಜನ ಝಿರೋ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನವರಿಗೆ ಸಾಮಾಜಿಕ ಬದ್ದತೆಯಿಲ್ಲ. ನೆಹರು ಅವರಿಂದ ರಾಜೀವ್ ಗಾಂಧಿ ತನಕ ಮೀಸಲಾತಿಗೆ ವಿರೋಧಿಸಿದ್ದರು. ಮೀಸಲಾತಿಗೆ ವಿರೋಧ ಮಾಡಿ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದರು. ಪಾರ್ಲಿಮೆಂಟ್ ನಲ್ಲಿ ರಾಜೀವ್ ಗಾಂಧಿಯ ಅತೀ ದೊಡ್ಡ ಭಾಷಣ ಮೀಸಲಾತಿಯ ವಿರುದ್ದವೇ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
Key words: People, Rahul Gandhi, Zero Marks, Union Minister, Prahlad Joshi
The post ‘ಕೈ’ ನಾಯಕ ರಾಹುಲ್ ಗಾಂಧಿಗೆ ಜನರು ‘ಝೀರೋ ಮಾರ್ಕ್ಸ್’ ಕೊಟ್ಟಿದ್ದಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.