ಬೆಂಗಳೂರು,ಆಗಸ್ಟ್,15,2025 (www.justkannada.in): ಸಚಿವ ಸ್ಥಾನದಿಂದ ವಜಾಗೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ, ನನ್ನ ವಿರುದ್ದ ಷಡ್ಯಂತ್ರ ಮಾಡಿದವರ ಬಗ್ಗೆ ಹೇಳುತ್ತೇನೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎನ್ ರಾಜಣ್ಣ, ನನ್ನ ವಿರುದ್ದ ಯಾರು ಏನೇನು ಹೇಳಿದ್ದಾರೆ ಎಂದು ಗೊತ್ತಿದೆ. ಅವರ ಉದ್ದೇಶ ಈಡೇರಿಸಿಕೊಳ್ಳುಲು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ ಷಡ್ಯಂತ್ರ ಮಾಡಿದವರ ಬಗ್ಗೆ ಹೇಳುತ್ತೇನೆ . ಯಾರಿಂದ ಷಡ್ಯಂತ್ರ ಎಂದು ಮಾಧ್ಯಮದ ಮುಂದೆ ಹೇಳಲ್ಲ. ಖಚಿತ ಮಾಹಿತಿ ಇಟ್ಟುಕೊಂಡು ಮಾತನಾಡುತ್ತೇನೆ. ಆಧಾರ ಇಲ್ಲದೆ ಹೇಳಲ್ಲ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಆದೇಶಕ್ಕೆ ತಲೆ ಬಾಗಿದ್ದಾರೆ. ನನ್ನ ವಜಾಗೆ ಕಾರಣ ಏನು ಎಂಬುದನ್ನ ವರಿಷ್ಠರನ್ನ ಭೇಟಿಯಾದಾಗ ಕೇಳುತ್ತೇನೆ ಎಂದರು.
ಬಿಜೆಪಿಗೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುವವನು. ಅಧಿಕಾರ ಇಲ್ಲದಿದ್ದರೂ ಇಲ್ಲೇ ಇರತ್ತೇನೆ . ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
Key words: Dismiss, Minister, post, conspired, K.N. Rajanna
The post ಖಚಿತ ಮಾಹಿತಿ ಇಟ್ಟುಕೊಂಡು ನನ್ನ ವಿರುದ್ದ ಷಡ್ಯಂತ್ರ ಮಾಡಿದವರ ಬಗ್ಗೆ ಹೇಳುತ್ತೇನೆ-ಕೆ.ಎನ್ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.