ಮೈಸೂರು,ಫೆಬ್ರವರಿ,12,2026 (www.justkannada.in): ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಕೋರ್ಟ್ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಮಹಮದ್ ಮುಷೀರ್ ಬಿನ್ ಮಹಮದ್ ಮುಸ್ತಾಕ್ ಶಿಕ್ಷೆಗೆ ಗುರಿಯಾದ ಆರೋಪಿ. ದಿ:17-07-2023ರಂದು ಸಂಜೆ 16.00 ಗಂಟೆಗೆ ಸಾತಗಳ್ಳಿ ‘ಎ’ ಜೋನ್ ಪಶ್ಚಿಮದ ಕಡೆಯಿಂದ ವರ್ಧಮಾನ ನಗರದ ಕಡೆ ಹೋಗುವ ರಸ್ತೆಯಲ್ಲಿ ಆರೋಪಿ ಮಹಮದ್ ಮುಷೀರ್ ಬಿನ್ ಮಹಮದ್ ಮುಸ್ತಾಕ್ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ ನಂ:ಕೆಎ-55-ಕ್ಯೂ-7173ರ ಸೀಟಿನ ಕೆಳಬದಿಯಲ್ಲಿ ಕ್ಯಾರಿ ಬಾಗ್ ಒಳಗಡೆ ಪೇಪರ್ ನಿಂದ ಪ್ಯಾಕ್ ಮಾಡಿದ್ದ 1 ಕೆ.ಜಿ. 555 ಗ್ರಾಂ ಒಣ ಗಾಂಜಾ ಸೊಪ್ಪನ್ನು ಇಟ್ಟುಕೊಂಟು ಸಾಗಾಣಿಕೆ ಮಾಡುತ್ತಿದ್ದಾಗ ಪುರುಷೋತ್ತಮ.ಜಿ, ಸೆನ್ ಕ್ರೈಂ, ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಆತನನ್ನು ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ ಗಾಂಜಾ ಸೊಪ್ಪು ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ. ನಂತರ ಗಾಂಜಾ ಸೊಪ್ಪನ್ನು ನ್ಯಾಯಾಲಯದಲ್ಲಿ ಇನ್ವೆಂಟರಿ ಮಾಡಿಸಿ, ನಂತರ ಆರ್.ಎಫ್.ಎಸ್.ಎಲ್ ಗೆ ಪರೀಕ್ಷೆಗಾಗಿ ಸಲ್ಲಿಸಿದ್ದು, ತಜ್ಞರು ಗಾಂಜಾ ಸೊಪ್ಪು ಎಂದು ವರದಿ ನೀಡಿರುವುದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿಯ ವಿರುದ್ಧ .ಮಾರುತಿ.ಟಿ. ತನಿಖಾಧಿಕಾರಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ ರವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪಿಗೆ 20(b) (ii) B ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯ ಅಪರಾಧಕ್ಕೆ 4 ವರ್ಷಗಳ ಕಠಿಣ ಶಿಕ್ಷೆ ಮತ್ತು 40 ಸಾವಿರ ರೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಮುಂದುವರೆದು 6 ತಿಂಗಳ ಸಾದಾ ಕಾರಾವಾಸ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ.
ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಎನ್.ಬಿ.ವಿಜಯಲಕ್ಷ್ಮಿ ಸರ್ಕಾರದ ಪರ ವಾದ ಮಂಡಿಸಿದ್ದಾರೆ
Key words: mysore Court, sentences, accused, imprisonment ,fine
The post ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




