12
March, 2026

A News 365Times Venture

12
Thursday
March, 2026

A News 365Times Venture

ಗಾಂಜಾ ವ್ಯಸನಿಗಳ ವಿರುದ್ದ ಕಾರ್ಯಾಚರಣೆಗೆ ಕೆಟ್ಟು ನಿಂತ ಬೀದಿ ದೀಪಗಳಿಂದ ಅಡ್ಡಿ: ಸ್ಪಂದಿಸದ ಪಾಲಿಕೆ ಅಧಿಕಾರಿಗಳು

Date:

ಮೈಸೂರು,ಜುಲೈ25,2025 (www.justkannada.in): ಗಾಂಜಾ ವ್ಯಸನಿಗಳ ವಿರುದ್ದ ಕಾರ್ಯಾಚರಣೆಗೆ  ಮುಂದಾದ ಮೈಸೂರಿನ ಮೇಟಗಳ್ಳಿ ಠಾಣಾ ಪೊಲೀಸರಿಗೆ ಕತ್ತಲು ಅಡ್ಡಿಯಾಗಿದ್ದು, ಬೀದಿ ದೀಪಗಳು ಕೆಟ್ಟಿದ್ದ ಪರಿಣಾಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಹೌದು ಮೇಟಗಳ್ಳಿಯ ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರ ಕಾರ್ಯಾಚರಣೆಗೆ ಕೆಟ್ಟುನಿಂತಿರುವ ಬೀದಿದೀಪಗಳೇ ಅಡ್ಡಿಯಾಗಿವೆ.  ಬೀದಿದೀಪಗಳ ಸರಿಪಡಿಸಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸ್ಮಶಾನದಲ್ಲಿ ಗಾಂಜಾ ಸೇವನೆ ಮಾಡುದ್ದ  ಬಗ್ಗೆ ಮಾಹಿತಿ ತಿಳಿದ ಕೂಡಲೇ ಮೇಟಗಳ್ಳೀ ಠಾಣಾ ಇನ್ಸ್ ಪೆಕ್ಟರ್ ಅರುಣ್ ಅವರು ತಮ್ಮ ಸಿಬ್ಬಂದಿಗಳ ಸಮೇತ ಸ್ಮಶಾನಕ್ಕೆ  ಎಂಟ್ರಿ ಕೊಟ್ಟಿದ್ದು ಆದರೆ ದಾಳಿ ನಡೆಸಿದ ಸಮಯದಲ್ಲಿ ಬೀದಿ ದೀಪಗಳು ಕೆಟ್ಟಿದ್ದ ಪರಿಣಾಮ ಗಾಂಜಾ ವ್ಯಸನಿಗಳು ಕತ್ತಲೆಯಲ್ಲೇ ಪರಾರಿಯಾಗಿದ್ದಾರೆ.

ಸ್ಮಶಾನದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.   ಹೀಗಾಗಿ ಬೀದಿ ದೀಪಗಳನ್ನ ಸರಿಪಡಿಸುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಫೆಬ್ರವರಿ ತಿಂಗಳಿನಲ್ಲೇ ವಲಯ ಕಚೇರಿ 5ಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಆದರೆ ಪೊಲೀಸರ ಮನವಿ ಪತ್ರಕ್ಕೆ ಕ್ಯಾರೆ ಎನ್ನದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರ ಕಾರ್ಯಚರಣೆಗೆ ಪಾಲಿಕೆ ಅಧಿಕಾರಿಗಳೇ ಸ್ಪಂದಿಸದಿದ್ದಲ್ಲಿ ಗಾಂಜಾ ವ್ಯಸನಿಗಳ ಕಾಟ ತಪ್ಪಿಸುವುದು ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಸ್ಮಶಾನ ಶವಗಳ ಅಂತ್ಯಕ್ರಿಯೆಗಿಂತ ಹೆಚ್ಚಾಗಿ ಗಾಂಜಾ ವ್ಯಸನಿಗಳ ತಾಣವಾಗುತ್ತಿದ್ದು,  ಮೃದೇಹಗಳ ಅಂತ್ಯಕ್ರಿಯೆಗೆ ಬರುವ ಜನರಿಗೆ ಗಾಂಜಾ ವ್ಯಸನಿಗಳ ವರ್ತನೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ. ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದಲ್ಲಿ ಪಾಲಿಕೆ ಅಧಿಕಾರಿಗಳು ಸಹ ಪೊಲೀಸರ ಜೊತೆ ಕೈ ಜೋಡಿಸಬೇಕಿದೆ.vtu

Key words: Mysore, marijuana, addicts, Police, operations, street lights

The post ಗಾಂಜಾ ವ್ಯಸನಿಗಳ ವಿರುದ್ದ ಕಾರ್ಯಾಚರಣೆಗೆ ಕೆಟ್ಟು ನಿಂತ ಬೀದಿ ದೀಪಗಳಿಂದ ಅಡ್ಡಿ: ಸ್ಪಂದಿಸದ ಪಾಲಿಕೆ ಅಧಿಕಾರಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ ಎಂದು...

ಗೃಹ ಬಳಕೆ ವಿದ್ಯುತ್‌ ಸಂಪರ್ಕ ಅನ್ಯ ಉದ್ದೇಶಕ್ಕೆ ಬಳಸಬೇಡಿ: ಬೆಸ್ಕಾಂ ಮನವಿ

ಬೆಂಗಳೂರು,ಮಾರ್ಚ್,12,2026 (www.justkannada.in): ಗೃಹ ಬಳಕೆಗೆ ಪಡೆದ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯ ಹಾಗೂ...

ಗ್ಯಾಸ್ ಸಿಲಿಂಡರ್ ಸಮಸ್ಯೆ: ಕೇಂದ್ರದ ವಿರುದ್ದ ಗುಡುಗಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ,ಮಾರ್ಚ್,12,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೆ ದೇಶದಲ್ಲಿ...

ರಾಜ್ಯದಲ್ಲಿ2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: ಭರ್ತಿಗೆ ಕ್ರಮ-ಎನ್ ಎಸ್ ಬೋಸರಾಜು

ಬೆಂಗಳೂರು,ಮಾರ್ಚ್,12,2026 (www.justkannada.in):  ರಾಜ್ಯದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇದ್ದು ಒಳ...